ಹವಾಲ್ದಾರ್ ಹಂಗ್‌ಪನ್ ದಾದಾಗೆ ಅಶೋಕ ಚಕ್ರ

Update: 2016-08-14 18:30 GMT

ಹೊಸದಿಲ್ಲಿ, ಆ.14: ಉತ್ತರ ಕಾಶ್ಮೀರದ ಕಡಿದಾದ ಹಾಗೂ ಮೈಕೊರೆಯುವ ಹಿಮಾಲಯ ಪರ್ವತ ಪ್ರದೇಶದ 13 ಸಾವಿರ ಅಡಿ ಎತ್ತರದಲ್ಲಿ ನಾಲ್ವರು ನುಸುಳುಕೋರರನ್ನು ಕೊಂದು ಹುತಾತ್ಮರಾದ ಹವಾಲ್ದಾರ್ ಹಂಗ್‌ಪನ್ ದಾದಾ ಎಂಬ ವೀರ ಯೋಧನ ಕೆಚ್ಚು ಹಾಗೂ ದೃಢ ಸಂಕಲ್ಪವು ಅವರಿಗೆ ಅಶೋಕ ಚಕ್ರ ಪುರಸ್ಕಾರವನ್ನು ದೊರಕಿಸಿಕೊಟ್ಟಿವೆ.
ಸ್ವಾತಂತ್ರೋತ್ಸವದ ಮುನ್ನಾ ದಿನವಾದ ಇಂದು ಸರಕಾರವು ಶಾಂತಿ ಕಾಲದ ಕಾರ್ಯಾಚರಣೆಗಳ ಅತ್ಯುನ್ನತ ಪ್ರಶಸ್ತಿಯನ್ನು ಘೋಷಿಸಿದ್ದು, ಅದು ದಾದಾರಿಗೆ ಮರಣೋತ್ತರವಾಗಿ ಲಭಿಸಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಭಾರತದ ಉತ್ತರ ಕಾಶ್ಮೀರಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದ ನಾಲ್ವರು ಭಾರೀ ಶಸ್ತ್ರ ಸಜ್ಜಿತ ಭಯೋತ್ಪಾದಕರನ್ನು ಶಂಸಾಬಾರಿ ವಲಯದಲ್ಲಿ ಕೊಂದ ಬಳಿಕ ಈ ವರ್ಷದ ಮೇ 27ರಂದು 36ರ ಹರೆಯದ ದಾದಾ ಹುತಾತ್ಮರಾಗಿದ್ದರು.
ಅರುಣಾಚಲಪ್ರದೇಶದ ಬೊದುರಿಯಾ ಮೂಲದ ಅವರು 1997ರಲ್ಲಿ ಭೂ ಸೇನೆಯ ಅಸ್ಸಾಂ ರೆಜಿಮೆಂಟ್‌ಗೆ ಸೇರಿ, ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಗಳಿಗಾಗಿಯೇ ರೂಪಿಸ ಲಾಗಿದ್ದ 35 ರಾಷ್ಟ್ರೀಯ ರೈಫಲ್ಸ್‌ನ ಯೋಧನಾಗಿ, ಕಳೆದ ವರ್ಷಾಂತ್ಯದಲ್ಲಿ ಉನ್ನತ ಪರ್ವತ ವಲಯದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News