ಶ್ರೀನಗರ: ನೆಲಕ್ಕೆ ಬಿದ್ದ ರಾಷ್ಟ್ರಧ್ವಜ ಉನ್ನತ ಮಟ್ಟದ ತನಿಖೆಗೆ ಆದೇಶ

Update: 2016-08-15 13:25 GMT

ಶ್ರೀನಗರ, ಆ.15: ಸ್ವಾತಂತ್ರ ದಿನವಾದ ಇಂದು ಶ್ರೀನಗರದ ಕ್ರೀಡಾಂಗಣವೊಂದರಲ್ಲಿ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಧ್ವಜಾರೋಹಣ ಮಾಡಲು ಪ್ರಯತ್ನಿಸಿದ ವೇಳೆ ಅದು ನೆಲಕ್ಕೆ ಬಿದ್ದಿದೆ. ಈ ಕುರಿತು ಪೊಲೀಸ್ ತನಿಖೆಯೊಂದಕ್ಕೆ ಆದೇಶ ನೀಡಲಾಗಿದೆ.

ಮೆಹಬೂಬಾ, ಧ್ವಜದ ಹಗ್ಗ ಎಳೆಯುತ್ತಿದ್ದಂತೆಯೇ ಅದು ಅರಳುವ ಬದಲು ನೆಲಕ್ಕೆ ಬಿತ್ತು. ಅದನ್ನು ಮರಳಿ ಸರಿಪಡಿಸಲು ಪೊಲೀಸ್ ಅಧಿಕಾರಿಗಳು ವೇದಿಕೆಗೆ ಧಾವಿಸಿದರು.

ಈ ಘಟನೆಯು ಮೆಹಬೂಬಾರಿಗೆ ತೀವ್ರ ಮುಜುಗರವನ್ನುಂಟು ಮಾಡಿದೆ. ಅವರು, ಭಯೋತ್ಪಾದಕ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಒಂದು ತಿಂಗಳಿನಿಂದ ರಾಜ್ಯವನ್ನು ವ್ಯಾಪಿಸಿರುವ ಅಶಾಂತಿಯ ಕುರಿತು ಈ ಸಂದರ್ಭದಲ್ಲಿ ಮಾತನಾಡಿದರು.

ಧ್ವಜ ನೆಲಕ್ಕೆ ಬಿದ್ದ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಪೊಲೀಸ್ ಮಹಾ ನಿರ್ದೇಶಕರಿಗೆ ಆದೇಶಿಸಲಾಗಿದೆ. ವಿಶೇಷ ಡಿಜಿ ಈ ಕುರಿತು ತನಿಖೆ ನಡೆಸುವದೆಂದು ಹಿರಿಯ ಪೊಲೀಸ್ ಅಧಿಕಾರಿ ಎಲ್. ಮೊಹಂತಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News