ಪೆಟ್ರೋಲ್ 1 ರೂ., ಡೀಸೆಲ್ ದರ 2 ರೂಪಾಯಿ ಇಳಿಕೆ

Update: 2016-08-16 04:57 GMT

ಹೊಸದಿಲ್ಲಿ, ಆ.16: ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಛಾತೈಲ ದರ ಇಳಿಕೆಯಾದ ಪರಿಣಾಮ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಇಳಿಕೆ ಯಾಗಿದೆ. ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 1 ರೂ. ಹಾಗೂ ಡೀಸೆಲ್ ದರದಲ್ಲಿ  2 ರೂಪಾಯಿ  ಇಳಿಕೆಯಾಗಿದೆ.
ಕಳೆದ ಮಧ್ಯರಾತ್ರಿಯಿಂದಲೇ ಈ ಆದೇಶ ಜಾರಿಗೆ ಬಂದಿದೆ. ಕಳೆದ ಎರಡು ತಿಂಗಳುಗಳ ಅವಧಿಯಲ್ಲಿ ನಾಲ್ಕನೆ ಬಾರಿ ತೈಲ ಬೆಲೆ ಕುಸಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News