ಕೇಂದ್ರ ಸಚಿವ ವಿಕೆ ಸಿಂಗ್ ಪತ್ನಿಗೆ ಕೊಲೆಬೆದರಿಕೆ: 2 ಕೋಟಿ ರೂ. ಬೇಡಿಕೆ ಇಟ್ಟ ಬ್ಲಾಕ್‌ಮೇಲರ್ !

Update: 2016-08-17 11:45 GMT

ಹೊಸದಿಲ್ಲಿ,ಆ.17: ಕೇಂದ್ರ ಸಚಿವ ವಿಕೆ ಸಿಂಗ್‌ರ ಪತ್ನಿಗೆ ಕೊಲೆಬೆದರಿಕೆ ಬಂದಿದೆ. ಮಾತ್ರವಲ್ಲ ಫೋನ್‌ನಲ್ಲಿ ಕೊಲೆ ಬೆದರಿಕೆ ಹಾಕಿದ ವ್ಯಕ್ತಿ ಬ್ಲಾಕ್‌ಮೇಲ್ ಮಾಡಲು ಯತ್ನಿಸಿದ್ದಾನೆಂದು ವರದಿಯೊಂದು ತಿಳಿಸಿದೆ.ದಿಲ್ಲಿ ತುಘಲಕಾಬಾದ್ ರೋಡ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದ್ದು, ಮೂಲಗಳು ತಿಳಿಸಿರುವ ಪ್ರಕಾರ ಬೆದರಿಕೆ ಹಾಕಿದ ವ್ಯಕ್ತಿ ಎರಡು ಕೋಟಿ ರೂಪಾಯಿಯ ಬೇಡಿಕೆ ಇಟ್ಟಿದ್ದಾನೆನ್ನಲಾಗಿದೆ. ಒಂದು ವೇಳೆ ಈ ಹಣವನ್ನು ನೀಡದಿದ್ದರೆ ಪ್ರಾಣತೆರಬೇಕಾದೀತು ಎಂದು ಬ್ಲಾಕ್‌ಮೇಲರ್ ವಿಕೆ ಸಿಂಗ್‌ರ ಪತ್ನಿಗೆ ಬೆದರಿಕೆ ಹಾಕಿದ್ದಾನೆ ಎಂದು ವರದಿ ತಿಳಿಸಿದೆ.

ತುಘಲಕಾಬಾದ್ ರೋಡ್‌ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಪ್ರಕರಣ ಹೈಪ್ರೊಫೈಲ್‌ನದ್ದಾದ್ದರಿಂದ ಪೊಲೀಸ್ ಇಲಾಖೆಯ ಯಾವ ಅಧಿಕಾರಿಯೂ ಪ್ರಕರಣದ ಕುರಿತು ಹೆಚ್ಚಿನ ವಿವರ ನೀಡಲು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ. ವಿಕೆ ಸಿಂಗ್ ತುಘಲಕಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News