ಫಿನ್‌ಲ್ಯಾಂಡ್ ಶಿಕ್ಷಣ ವ್ಯವಸ್ಥೆಯ ಈ ಹತ್ತು ಆಕರ್ಷಕ ವಿಷಯಗಳನ್ನೂ ನಾವು ಏಕೆ ಅಳವಡಿಸಿಕೊಳ್ಳಬಾರದು?

Update: 2016-08-18 18:48 GMT

ಶಾಲೆ ಮತ್ತು ಶಿಕ್ಷಣದ ವಿಷಯದಲ್ಲಿ ಭಾರತೀಯ ಮಕ್ಕಳಿಗೆ ಎಲ್ಲವೂ ಸರಳವಾಗಿರುವುದಿಲ್ಲ. 2-3 ವರ್ಷ ಪ್ರಾಯದ ಮಕ್ಕಳನ್ನೂ ಪ್ಲೇಸ್ಕೂಲ್ ಗಳಿಗೆ ಕಳುಹಿಸಲಾಗುತ್ತದೆ. ಅವರು ತಮ್ಮ ಪ್ರಾಥಮಿಕ ಶಾಲೆಯನ್ನು 3-4 ವಯಸ್ಸಿನಿಂದಲೇ ಆರಂಭಿಸುತ್ತಾರೆ. ಸರಿಯಾಗಿ ನಡೆಯಲೂ ಸಾಧ್ಯವಾಗದ ಸಮಯದಲ್ಲಿ ಅವರು ಶಾಲಾ ಬ್ಯಾಗ್‌ಗಳನ್ನು ತಮ್ಮ ಹೆಗಲ ಮೇಲೆ ಕೊಂಡೊಯ್ಯುತ್ತಾರೆ. ಸಮಯ ಹೇಗೆ ಹಾರುತ್ತದೆ ಎನ್ನುವುದೇ ತಿಳಿಯುವುದಿಲ್ಲ ಮತ್ತು ಕೆಲವೇ ದಿನಗಳಲ್ಲಿ ಅರೆವಾರ್ಷಿಕ ಮತ್ತು ವಾರ್ಷಿಕ ಪರೀಕ್ಷೆಗಳು ಬಂದಿರುತ್ತವೆ. ಈ ಮುಗಿಯದೇ ಇರುವ ವಿಷವರ್ತುಲದಲ್ಲಿ ಸಿಲುಕಿಕೊಂಡಲ್ಲಿ ಮುಂದಿನ 14-15 ವರ್ಷಗಳನ್ನು ಅದೇ ಜಾಲದಲ್ಲಿ ಕಳೆದಿರುತ್ತಾರೆ.

ಆದರೆ ಫಿನ್‌ಲ್ಯಾಂಡ್‌ನ ಮಕ್ಕಳು ತಮ್ಮ ಬಾಲ್ಯದ ಅತ್ಯುತ್ತಮ ಕ್ಷಣಗಳನ್ನು ಆನಂದಿಸುತ್ತಾರೆ. ತಮ್ಮ ಶಾಲಾ ಸಮಯವನ್ನು ಅವರು ಆಟದ ಮೈದಾನದಲ್ಲಿ, ಮರಗಳನ್ನು ಹತ್ತುತ್ತಾ ಮತ್ತು ತಮ್ಮ ಸ್ನೇಹಿತರ ಜೊತೆಗೆ ಹೃದಯದ ಮಾತುಗಳನ್ನು ಹಂಚಿಕೊಳ್ಳುತ್ತಾ ಕಳೆಯುತ್ತಾರೆ. ಅದೇ ಕಾರಣದಿಂದ ಫಿನ್‌ಲ್ಯಾಂಡ್ ವಿದ್ಯಾರ್ಥಿಗಳು ಅತೀ ಬುದ್ಧಿವಂತರು ಮತ್ತು ಯಶಸ್ವಿಗಳಾಗಿರುತ್ತಾರೆ. ಭಾರತ ಅವರಿಂದ ಕಲಿಯುವುದು ಬಹಳಷ್ಟಿದೆ.

ಫಿನ್‌ಲ್ಯಾಂಡ್ ಶಿಕ್ಷಣ ವ್ಯವಸ್ಥೆಯ ಬಗ್ಗೆ ಇಲ್ಲಿ ಅಂತಹ 10 ಅದ್ಭುತ ಸತ್ಯಗಳಿವೆ.

1. ಫಿನಿಶ್ ಮಕ್ಕಳು 7ರ ವಯಸ್ಸಿನವರೆಗೆ ಶಾಲೆಗೆ ಹೋಗುವುದಿಲ್ಲ.

2. ಮೊದಲ 6 ವರ್ಷಗಳವರೆಗೆ ವಿದ್ಯಾರ್ಥಿಗಳ ಸಾಮರ್ಥ್ಯ ಮತ್ತು ಜ್ಞಾನವನ್ನು ನಿರ್ಧರಿಸಲು ಯಾವುದೇ ಶ್ರೇಯಾಂಕಗಳು ಅಥವಾ ಅಳತೆಗೋಲುಗಳಿರುವುದಿಲ್ಲ.

3. ತಮ್ಮೆಲ್ಲಾ ಶಾಲಾ ವರ್ಷಗಳಲ್ಲಿ ಅವರು ಒಂದೇ ಪರೀಕ್ಷೆ ಬರೆಯುತ್ತಾರೆ. ಕೇವಲ ಒಂದು! 4. ಆ ಪರೀಕ್ಷೆಯನ್ನು ತಮ್ಮ 16ನೇ ವಯಸ್ಸಿನಲ್ಲಿ ಬರೆಯುತ್ತಾರೆ.

5. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ವಾರದಲ್ಲಿ 20 ಗಂಟೆಗಳಷ್ಟೇ ತರಗತಿಗಳನ್ನು ಹೊಂದಿದ್ದಾರೆ. ಅಂದರೆ ದಿನಕ್ಕೆ ನಾಲ್ಕು ಗಂಟೆಗಳ ಪಾಠ. ಅವರಿಗೆ ಹೋಂವರ್ಕ್ ಕೊಡುವುದೂ ಅಪರೂಪ.

6. ಪ್ರತೀ ತರಗತಿಯ ನಂತರ ವಿದ್ಯಾರ್ಥಿಗಳು 15 ನಿಮಿಷಗಳ ಬ್ರೇಕ್ ಹೊಂದಿರುತ್ತಾರೆ.

7. 75 ನಿಮಿಷಗಳ ವಿರಾಮದ ಅವಧಿಯಲ್ಲಿ ವಿದ್ಯಾರ್ಥಿಗಳು ಊಟ ಮಾಡುವುದು ಬಿಟ್ಟು ಇನ್ನೇನು ಬೇಕಾದರೂ ಮಾಡಲು ಸ್ವತಂತ್ರರು.

8. ಫಿನ್‌ಲ್ಯಾಂಡ್‌ನ ಶಾಲಾ ವ್ಯವಸ್ಥೆ ಶೇ. 100ರಷ್ಟು ರಾಷ್ಟ್ರೀಕೃತವಾಗಿದೆ.

9. ಅಧ್ಯಾಪಕರಿಗೂ ಇದೇ ಲಾಭವಿದೆ. ಅವರು ದಿನಕ್ಕೆ 4 ಗಂಟೆಗಳ ಕಾಲ ಮಾತ್ರ ಪಾಠ ಮಾಡುತ್ತಾರೆ.

10. ಅಧ್ಯಾಪಕರು ಮಾಡುವ ಕೆಲಸಕ್ಕೆ ಅತ್ಯುತ್ತಮ ವೇತನ ಸಿಗುತ್ತದೆ. ಅಲ್ಲದೆ ವೈದ್ಯರು ಮತ್ತು ಇಂಜಿನಿಯರ್ ಗಳಿಂದ ಕಡಿಮೆ ಎಂದೂ ಪರಿಗಣಿಸಲಾಗಿಲ್ಲ.

ಭಾರತ ಈ ಆಕರ್ಷಕ ವ್ಯವಸ್ಥೆಯ ಬಗ್ಗೆ ತಿಳಿದುಕೊಂಡಿದೆಯೆ?

ಕೃಪೆ: www.scoopwhoop.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News