ದೇಶಕ್ಕೇ ಮಾದರಿ ಕೇರಳ ಸರಕಾರ

Update: 2016-08-19 04:56 GMT

ತಿರುವನಂತಪುರಂ, ಆ.19: ಇಡೀ ದೇಶಕ್ಕೇ ಮಾದರಿಯಾಗುವಂತಹ ಕ್ರಮದಲ್ಲಿ ಕೇರಳದ ಸಿಪಿಐಎಂ ನೇತೃತ್ವದ ಎಲ್‌ಡಿಎಫ್ ಸರಕಾರ ತನ್ನ ಐದು ವರ್ಷಗಳ ಆಡಳಿತಾವಧಿಯಲ್ಲಿ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಅಭಿವೃದ್ಧಿಗಾಗಿ 10,000 ಕೋಟಿ ರೂ.ಗಳನ್ನು ಮೀಸಲಿರಿಸಿದೆ. ಮೊದಲ ಎರಡು ವರ್ಷಗಳಲ್ಲಿ ಈ ನಿಟ್ಟಿನಲ್ಲಿ 450 ಕೋಟಿ ರೂ. ವಿನಿಯೋಗಿಸಲು ಕೇರಳದ ವಿತ್ತ ಸಚಿವ ಥಾಮಸ್ ಐಸಾಕ್ ನಿರ್ಧರಿಸಿದ್ದಾರೆ.

ಕೇರಳ ಸರಕಾರದ ಈ ಶಾಲಾಭಿವೃದ್ಧಿ ಯೋಜನೆಯ ಪರಿಣಾಮಕಾರಿ ಜಾರಿಯ ಜವಾಬ್ದಾರಿಯನ್ನು ಐಟಿ ಸ್ಕೂಲ್ ಪ್ರಾಜೆಕ್ಟ್‌ಗೆ ವಹಿಸಲಾಗಿದೆ. ಈ ಐಟಿಸ್ಕೂಲ್ ಪ್ರಾಜೆಕ್ಟ್ ಅನ್ನು ಕೇರಳದಲ್ಲಿ 2001ರಲ್ಲಿ ಸ್ಥಾಪಿಸಲಾಗಿದ್ದು, ಅದರ ಮೂಲಕ ಶಾಲೆಗಳಲ್ಲಿ ಮಾಹಿತಿ ತಂತ್ರಜ್ಞಾನ, ಶಿಕ್ಷಣವನ್ನು ಉತ್ತೇಜಿಸಲು ಹಾಗೂ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಶಿಕ್ಷಣದಲ್ಲಿ ಸಮ್ಮಿಳಿತಗೊಳಿಸುವ ಉದ್ದೇಶವನ್ನು ಸರಕಾರ ಹೊಂದಿದೆ.

ಈ ಯೋಜನೆಯ ಎರಡು ಭಾಗಗಳಂಗವಾಗಿ ಪ್ರಥಮ ಭಾಗವಾಗಿ ಎಲ್ಲಾ ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಎಂಟನೆ ತರಗತಿಯಿಂದ 12 ನೆ ತರಗತಿವರೆಗೆ ಹೈಟೆಕ್ ತರಗತಿಗಳನ್ನು ಸ್ಥಾಪಿಸಲಾಗುವುದೆಂದು ಐಟಿ ಸ್ಕೂಲ್‌ನ ಕಾರ್ಯಕಾರಿ ನಿರ್ದೇಶಕ ಕೆ.ಅನ್ವರ್ ಸಾದತ್ ಹೇಳಿದರು. ಎರಡನೆ ಭಾಗವಾಗಿ 1,000 ಶಾಲೆಗಳನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News