ಹೆಚ್ಚಿದ ಪುರುಷ ಭ್ರೂಣ ಹತ್ಯೆ ದಂಧೆ!

Update: 2016-09-07 17:36 GMT

ಭ್ರೂಣ ಹತ್ಯೆ ಬಗೆಗೆ ವಿಚಿತ್ರ ಮಾಹಿತಿ ಇಲ್ಲಿದೆ. ಹೆಣ್ಣುಭ್ರೂಣ ಹತ್ಯೆ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳು ಒಂದೆಡೆ ನಡೆಯುತ್ತಿದ್ದರೆ, 2014ರಲ್ಲಿ ಹೆಣ್ಣು ಭ್ರೂಣಕ್ಕಿಂತ ಹೆಚ್ಚಾಗಿ ಗಂಡು ಭ್ರೂಣ ಹತ್ಯೆ ನಡೆದಿದೆ ಎಂದು ರಾಷ್ಟ್ರೀಯ ಅಪರಾಧ ಮಾಹಿತಿ ಬಹಿರಂಗಪಡಿಸಿದೆ. ಆದರೆ ಎಷ್ಟು ಪ್ರಮಾಣ ದಲ್ಲಿ ಭ್ರೂಣ ಹತ್ಯೆ ನಡೆಯುತ್ತಿದೆ ಎಂಬ ಬಗ್ಗೆ ನಿಖರವಾಗಿ ಹೇಳಲು ಬಹುತೇಕ ಪ್ರಕರಣಗಳು ವರದಿಯೇ ಆಗುತ್ತಿಲ್ಲ ಎಂದು ಅಕೃತ ಅಂಶಗಳಿಂದ ತಿಳಿದುಬರುತ್ತದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಮಾಹಿತಿ ಅನ್ವಯ 2014ರಲ್ಲಿ ಒಟ್ಟು 53 ಗಂಡುಭ್ರೂಣ ಹತ್ಯೆ ಪ್ರಕರಣಗಳು ವರದಿಯಾಗಿದ್ದರೆ, 50 ಹೆಣ್ಣುಭ್ರೂಣ ಹತ್ಯೆ ಪ್ರಕರಣ ವರದಿಯಾಗಿದೆ. ಆರು ಭ್ರೂಣಗಳ ಲಿಂಗ ಪತ್ತೆಯಾಗಿಲ್ಲ.
ಪ್ರಸವಪೂರ್ವ ಲಿಂಗ ಪತ್ತೆಯನ್ನು ಅಪರಾಧ ಎಂದು ಪರಿಗಣಿಸುವ ಕಾನೂನು 1996ರಲ್ಲಿ ಜಾರಿಗೆ ಬಂದ ಬಳಿಕ ಇದುವರೆಗೆ 350 ಮಂದಿಯನ್ನು ಈ ಕಾನೂನು ಉಲ್ಲಂಘನೆಗಾಗಿ ಶಿಕ್ಷಿಸಲಾಗಿದೆ ಎಂದು ಲೋಕಸಭೆಯಲ್ಲಿ 2015ರ ಆಗಸ್ಟ್ 5ರಂದು ನೀಡಿದ ಉತ್ತರದಲ್ಲಿ ಸ್ಪಷ್ಟಪಡಿಸಲಾಗಿದೆ.
ಆದರೆ ದೇಶದಲ್ಲಿ ಲಿಂಗಾನುಪಾತ ಕುಸಿಯುತ್ತಿರುವುದನ್ನು ನೋಡಿದರೆ, ಬಹಳಷ್ಟು ಭ್ರೂಣ ಹತ್ಯೆ ಪ್ರಕರಣಗಳು ವರದಿಯಾಗದಿರುವುದು ಸ್ಪಷ್ಟ. ದೇಶದಲ್ಲಿ 1991ರಲ್ಲಿ ಪ್ರತಿ 1000 ಪುರುಷರಿಗೆ 945 ಮಂದಿ ಮಹಿಳೆಯರಿದ್ದರೆ, 2011ರಲ್ಲಿ ಈ ಪ್ರಮಾಣ 918ಕ್ಕೆ ಕುಸಿದಿದೆ.

‘‘ದೇಶದಲ್ಲಿ ಪ್ರತಿ ವರ್ಷ ಹುಟ್ಟುತ್ತಿರುವ 12 ದಶಲಕ್ಷ ಹೆಣ್ಣುಮಕ್ಕಳ ಪೈಕಿ ಕನಿಷ್ಠ ಹತ್ತು ಲಕ್ಷ ಹೆಣ್ಣುಮಕ್ಕಳು ಮೊದಲ ಹುಟ್ಟುಹಬ್ಬವನ್ನೇ ಕಾಣುವುದಿಲ್ಲ’’ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾೀಶರಾದ ಕಾಮಿನಿ ಲಾಲು 2014ರ ಒಂದು ತೀರ್ಪಿನಲ್ಲಿ ಹೇಳಿರುವುದನ್ನು ಬ್ಯುಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ. ಭಾರತದ ಬಹಳಷ್ಟು ರಾಜ್ಯಗಳಲ್ಲಿ ಮಾನವ ಕಳ್ಳಸಾಗಣೆ ದಂಧೆ ವ್ಯಾಪಕವಾಗಿ ಬೆಳೆದಿರುವ ಪರಿಣಾಮವಾಗಿ, ಬಹಳಷ್ಟು ಬಡಕುಟುಂಗಳು ತಮ್ಮ ಹದಿಹರೆಯದ ಹೆಣ್ಣುಮಕ್ಕಳನ್ನು ತೀರಾ ಅಗ್ಗದ ಬೆಲೆಗೆ ಮಾರಾಟ ಮಾಡುತ್ತಾರೆ. ಇಂಥ ಹೆಣ್ಣುಮಕ್ಕಳನ್ನು ಲೈಂಗಿಕ ವಸ್ತುವಾಗಿ ಪರಿಗಣಿಸಲಾಗುತ್ತಿದ್ದು, ಈ ಪೈಕಿ ಅರ್ಧದಷ್ಟು ಪ್ರಕರಣಗಳು ಬೆಳಕಿಗೇ ಬರುವುದಿಲ್ಲ.
  ದಕ್ಷಿಣ ದಿಲ್ಲಿಯೊಂದರಲ್ಲೇ 1996ರಿಂದ 2012ರವರೆಗೆ 238 ಭ್ರೂಣ ಹಾಗೂ ನವಜಾತ ಶಿಶು ಹತ್ಯೆ ನಡೆದಿದೆ. ಈ ಪೈಕಿ 115 ಗಂಡುಮಕ್ಕಳು ಹಾಗೂ 110 ಹೆಣ್ಣುಮಕ್ಕಳು, ಲಿಂಗ ನಿರ್ಧರಣೆಯಾದ 13 ಭ್ರೂಣ ಹತ್ಯೆ ನಡೆದಿದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧ್ಯಯನವೊಂದು ಬಹಿರಂಗಪಡಿಸಿದೆ ಎಂದು 2016ರ ಆಗಸ್ಟ್ 17ರ ಇಂಡಿಯನ್ ಎಕ್ಸ್‌ಪ್ರೆಸ್ ಸಂಚಿಕೆ ವರದಿ ಮಾಡಿದೆ.

‘‘ಐದು ತಿಂಗಳ ಭ್ರೂಣವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಗಂಡುಮಕ್ಕಳ ಭ್ರೂಣಹತ್ಯೆ ಮೇಲ್ನೋಟಕ್ಕೆ ಅಕ ಎಂದು ಕಂಡುಬಂದರೂ, ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಹತ್ಯೆಯಾಗುವ ಹೆಣ್ಣುಭ್ರೂಣಗಳ ಸಂಖ್ಯೆ ಹೆಚ್ಚು’’ ಎಂದು ಅಧ್ಯಯನ ವರದಿ ಸಿದ್ಧಪಡಿಸಿದವರಲ್ಲೊಬ್ಬರಾದ ಡಾ.ಸಿ.ಬೆಹೆರಾ ಹೇಳುತ್ತಾರೆ. ‘‘ಸಮಾಜದಲ್ಲಿ ಸಾಮಾನ್ಯವಾಗಿ ಗಂಡುಮಕ್ಕಳ ಪರ ಒಲವು ಅಕವಾಗಿರುವುದರಿಂದ ಹೆಣ್ಣುಭ್ರೂಣ ಹತ್ಯೆ ಈ ಅವಯಲ್ಲಿ ನಡೆದಿದೆ ಎನ್ನುವುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಭಾರತದಲ್ಲಿ ಗರ್ಭಧಾರಣೆಯಾದ ಬಳಿಕ 20 ವಾರಗಳ ವರೆಗೆ ಮಾತ್ರ ವೈದ್ಯಕೀಯ ಗರ್ಭಪಾತಕ್ಕೆ ಅವಕಾಶ ಇರುವುದರಿಂದ, ಅಪರಾಧ ಗರ್ಭಪಾತಗಳು ಹಾಗೂ ಲಿಂಗನಿರ್ಧರಣೆ ಮಾಡಿ ಹೆಣ್ಣುಮಕ್ಕಳ ಭ್ರೂಣಹತ್ಯೆ ಮಾಡುವಂಥ ಬಹುತೇಕ ಪ್ರಕರಣಗಳು ಗರ್ಭಧಾರಣೆಯಾದ 20ನೆ ವಾರದ ಒಳಗೆ ನಡೆಯುತ್ತವೆ’’ ಎಂದು ಬೆಹೆರಾ ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ 2014ನೆ ಇಸ್ವಿಯಲ್ಲಿ ಅತ್ಯಕ (15) ಹೆಣ್ಣುಭ್ರೂಣ ಹತ್ಯೆ ಪ್ರಕರಣಗಳು ವರದಿಯಾಗಿವೆ. ರಾಜಸ್ಥಾನದಲ್ಲಿ 11, ಉತ್ತರ ಪ್ರದೇಶದಲ್ಲಿ 4, ಹರ್ಯಾಣದಲ್ಲಿ ನಾಲ್ಕು ಇಂಥ ಪ್ರಕರಣಗಳು ವರದಿಯಾಗಿದೆ ಎಂದು ಲೋಕಸಭೆಯಲ್ಲಿ ನೀಡಿದ ಉತ್ತರದಲ್ಲಿ ಸ್ಪಷ್ಟಪಡಿಸಲಾಗಿದೆ. 2015ರ ತಾತ್ಕಾಲಿಕ ವರದಿ ಸಿದ್ಧವಾಗಿದ್ದು, ಒಟ್ಟು 52 ಹೆಣ್ಣು ಭ್ರೂಣಹತ್ಯೆ ಪ್ರಕರಣಗಳು ವರದಿಯಾಗಿವೆ. ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ತಲಾ 12 ಪ್ರಕರಣಗಳು ದಾಖಲಾಗಿದ್ದು, ಇತರ ರಾಜ್ಯಗಳಿಗಿಂತ ಅಕ ಪ್ರಕರಣಗಳು ಇಲ್ಲಿ ವರದಿಯಾಗಿವೆ.

2016ರ ಮಾರ್ಚ್ ತಿಂಗಳ ವರೆಗೆ ದೇಶದಲ್ಲಿ ಲಿಂಗ ಪತ್ತೆ ಪರೀಕ್ಷೆ ಮಾಡಿದ 2,296 ಪ್ರಕರಣಗಳು ವರದಿಯಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸರಕಾರ ಸಂಸತ್ತಿಗೆ ವಿವರಿಸಿದೆ.
107 ಭ್ರೂಣಹತ್ಯೆ ಪ್ರಕರಣಗಳ ಪೈಕಿ ಗಂಡು ಹಾಗೂ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳ ವಿವರ ಎನ್‌ಸಿಆರ್‌ಬಿ ದಾಖಲೆಗಳಲ್ಲಿ ಲಭ್ಯ ಇಲ್ಲ. ಮಧ್ಯಪ್ರದೇಶದಲ್ಲಿ ಒಟ್ಟು 30, ರಾಜಸ್ಥಾನದಲ್ಲಿ 24, ಉತ್ತರ ಪ್ರದೇಶದಲ್ಲಿ 11, ಪಂಜಾಬ್‌ನಲ್ಲಿ 10 ಹಾಗೂ ಮಹಾರಾಷ್ಟ್ರದಲ್ಲಿ 7 ಪ್ರಕರಣಗಳು ವರದಿಯಾಗಿವೆ. ಎನ್‌ಸಿಆರ್‌ಬಿ 2014ರಿಂದೀಚೆಗಷ್ಟೇ ಹೆಣ್ಣುಭ್ರೂಣ ಹತ್ಯೆ ವಿವರಗಳನ್ನು ಸಂಗ್ರಹಿಸುತ್ತಿದೆ ಎಂದು ಸರಕಾರ ಹೇಳಿದೆ.
ಗರ್ಭಧಾರಣೆ ಮತ್ತು ಪ್ರಸವಪೂರ್ವ ಡಯಾಗ್ನೋಸ್ಟಿಕ್ ಕಾಯ್ದೆ- 1994ರ ಅನ್ವಯ ಲಿಂಗ ಪತ್ತೆ ಪ್ರಕರಣಗಳನ್ನು ದಾಖಲಿಸಲಾಗಿದೆ.
ರಾಜಸ್ಥಾನದಲ್ಲಿ ಒಟ್ಟು 626 ಲಿಂಗ ಪತ್ತೆ ಪರೀಕ್ಷೆ ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿದ್ದು, ಮಹಾರಾಷ್ಟ್ರದಲ್ಲಿ 554, ಪಂಜಾಬ್‌ನಲ್ಲಿ 192, ಹರ್ಯಾಣ ಹಾಗೂ ಉತ್ತರ ಪ್ರದೇಶದಲ್ಲಿ ಕ್ರಮವಾಗಿ 165 ಮತ್ತು 139 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.
ದೇಶದಲ್ಲಿ ಒಟ್ಟಾರೆ ವರದಿಯಾಗಿರುವ ಇಂಥ ಪ್ರಕರಣಗಳ ಪೈಕಿ ಶೇ. 72ರಷ್ಟು ಈ ಐದು ರಾಜ್ಯಗಳಿಂದ ವರದಿಯಾಗಿದೆ. ಆದರೆ ಸ್ವತಂತ್ರ ಅಧ್ಯಯನಗಳಿಗೆ ಹೋಲಿಸಿದರೆ ಬಹಳಷ್ಟು ಇಂಥ ಪ್ರಕರಣಗಳು ವರದಿಯಾಗಿಲ್ಲ. ಎರಡು ದಶಕಗಳಲ್ಲಿ 350 ಮಂದಿಯನ್ನು ಶಿಕ್ಷೆಗೆ ಗುರಿಪಡಿಸಲಾಗಿದ್ದು, 100 ವೈದ್ಯಕೀಯ ನೋಂದಣಿಗಳನ್ನು ರದ್ದುಪಡಿಸಲಾಗಿದೆ.

ಉತ್ತರ ಪ್ರದೇಶ, ರಾಜಸ್ಥಾನ ಹಾಗೂ ಬಿಹಾರ ಮಹಿಳೆಯರಿಗೆ ತೀರಾ ಭಯಾನಕ ರಾಜ್ಯಗಳಾಗಿದ್ದು, ಈ ರಾಜ್ಯಗಳಲ್ಲಿ ಗರಿಷ್ಠ ಪ್ರಮಾಣದ ಲಿಂಗ ಆಧರಿತ ಗರ್ಭಪಾತ ಪ್ರಕರಣಗಳು ವರದಿಯಾಗಿವೆ. ಇದರ ಜತೆಗೆ ಈ ರಾಜ್ಯಗಳ ಮಹಿಳೆಯರಲ್ಲಿ ಕನಿಷ್ಠ ಪ್ರಮಾಣದ ಸಾಕ್ಷರತೆ ಪ್ರಮಾಣ ಇದ್ದು, ಅತಿ ಕಡಿಮೆ ವಯಸ್ಸಿನಲ್ಲೇ ಮಹಿಳೆಯರು ವಿವಾಹವಾಗುತ್ತಿದ್ದಾರೆ. ಇತರ ರಾಜ್ಯಗಳಿಗಿಂತ ಇಲ್ಲಿ ಗರ್ಭಧಾರಣೆ ಅವಯಲ್ಲಿ ಸಾವಿಗೀಡಾಗುವ ಸಂಭವ ಹೆಚ್ಚು. ಅಕ ಮಕ್ಕಳನ್ನು ಹೊಂದಿರುವ ಜತೆಗೆ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳೂ ಇಲ್ಲಿ ಅಕ. ಜತೆಗೆ ಉದ್ಯೋಗಸ್ಥ ಮಹಿಳೆಯರ ಪ್ರಮಾಣವೂ ಈ ರಾಜ್ಯದಲ್ಲಿ ಕನಿಷ್ಠ.
ಭಾರತದಲ್ಲಿ ಲಿಂಗಾನುಪಾತ 2010-12ರ ಅವಯಲ್ಲಿ 908 ಇದ್ದುದು 2011-13ರ ಅವಯಲ್ಲಿ 909ಕ್ಕೆ ಹೆಚ್ಚಿದೆ. ಭಾರತದ 21 ದೊಡ್ಡ ರಾಜ್ಯಗಳ ಪೈಕಿ ಹರ್ಯಾಣದಲ್ಲಿ ಪರಿಸ್ಥಿತಿ ಶೋಚನೀಯವಾಗಿದೆ. 2011-13ರ ಅವಯಲ್ಲಿ ಹರ್ಯಾಣದಲ್ಲಿ ಲಿಂಗಾನುಪಾತ 864 ಇದೆ ಎನ್ನುವುದನ್ನು 2016ರ ಎಪ್ರಿಲ್ 20ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಹಿರಂಗಪಡಿಸಿದ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ.
ಉಳಿದಂತೆ ಪಂಜಾಬ್ (867), ಉತ್ತರ ಪ್ರದೇಶ (878), ದಿಲ್ಲಿ (887), ರಾಜಸ್ಥಾನ (893) ಹಾಗೂ ಮಹಾರಾಷ್ಟ್ರ (902) ಕಳಪೆ ಸಾಧನೆಯ ರಾಜ್ಯಗಳು. ಛತ್ತೀಸ್‌ಗಡದಲ್ಲಿ ದೇಶದಲ್ಲೇ ಅತ್ಯಕ ಪ್ರಮಾಣದ ಎಂದರೆ ಪ್ರತಿ ಸಾವಿರ ಗಂಡುಮಕ್ಕಳಿಗೆ 970 ಮಂದಿ ಹೆಣ್ಣುಮಕ್ಕಳಿದ್ದಾರೆ. ಉಳಿದಂತೆ ಕೇರಳ (966) ಹಾಗೂ ಕರ್ನಾಟಕ (958) ಮುಂದಿನ ಸ್ಥಾನಗಳಲ್ಲಿವೆ. ಕಳೆದ 30 ವರ್ಷಗಳ ಅಂಕಿ ಅಂಶಗಳನ್ನು ಪರಿಶೀಲಿಸಿದರೆ, ಜಮ್ಮು- ಕಾಶ್ಮೀರ, ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ತೀರಾ ಆತಂಕಕಾರಿ ಪ್ರಮಾಣದಲ್ಲಿ ಮಕ್ಕಳ ಲಿಂಗಾನುಪಾತ ಕುಸಿದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

2011ರ ಜನಗಣತಿ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಒಟ್ಟಾರೆ ಲಿಂಗಾನುಪಾತ 943ರಷ್ಟಿದೆ. 28 ರಾಜ್ಯಗಳ ಪೈಕಿ ಹರ್ಯಾಣದಲ್ಲಿ ಅತ್ಯಂತ ಕನಿಷ್ಠ ಎಂದರೆ ಪ್ರತಿ ಸಾವಿರ ಗಂಡುಮಕ್ಕಳಿಗೆ ಕೇವಲ 879 ಮಂದಿ ಹೆಣ್ಣುಮಕ್ಕಳಿದ್ದಾರೆ. ಕಾಶ್ಮೀರ (889), ಸಿಕ್ಕಿಂ (890), ಪಂಜಾಬ್ (895) ಹಾಗೂ ಉತ್ತರ ಪ್ರದೇಶ (898) ನಂತರದ ಸ್ಥಾನಗಳಲ್ಲಿವೆ.
ನೈಸರ್ಗಿಕವಾಗಿಯೇ ಗಂಡುಮಕ್ಕಳ ಸಂಖ್ಯೆ ಹೆಣ್ಣುಮಕ್ಕಳ ಸಂಖ್ಯೆಗಿಂತ ಹೆಚ್ಚು ಇರುವುದರಿಂದ ಹಾಗೂ ಹೆಣ್ಣುಮಕ್ಕಳಿಗಿಂತ ಗಂಡುಮಕ್ಕಳು ಸೋಂಕು ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇರುವುದರಿಂದ, ಸಾಮಾನ್ಯ ಪರಿಸ್ಥಿತಿಯಲ್ಲಿ ಹೆಣ್ಣುಮಕ್ಕಳು ಹಾಗೂ ಗಂಡುಮಕ್ಕಳ ನಡುವಿನ ಅನುಪಾತ 1000: 950 ಇರಬೇಕು.
ಹರ್ಯಾಣದ 17 ಜಿಲ್ಲೆಗಳನ್ನು ತೀರಾ ಕಳವಳಕಾರಿ ಚಿತ್ರಣದ ಜಿಲ್ಲೆಗಳು ಎಂದು ಪಟ್ಟಿ ಮಾಡಲಾಗಿದ್ದು, ರೋಹ್ಟಕ್ ಜಿಲ್ಲೆಯಲ್ಲಿ ಲಿಂಗಾನುಪಾತ ಅತ್ಯಂತ ಕನಿಷ್ಠ ಎಂದರೆ 867 ಇದೆ. ಆದರೆ ಈ ರಾಜ್ಯದ ಮಹಿಳೆಯೊಬ್ಬರು ದೇಶಕ್ಕೆ ರಿಯೊ ಡಿ ಜನೈರೊ ಒಲಿಂಪಿಕ್ಸ್ ನಲ್ಲಿ ಮೊಟ್ಟಮೊದಲ ಪದಕ ಗೆದ್ದುಕೊಟ್ಟಿದ್ದಾರೆ ಎನ್ನುವುದು ಗಮನಾರ್ಹ. ಹರ್ಯಾಣದ ಸಾಕ್ಷಿ ಮಲಿಕ್ ಕುಸ್ತಿ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

Writer - ಚೈತನ್ಯ ಮಲ್ಲಾಪುರ

contributor

Editor - ಚೈತನ್ಯ ಮಲ್ಲಾಪುರ

contributor

Similar News