ಅಪ್ಪಾಜಿಅಂದರೆ ಸಾಗರ
ಕೆಂಪು-ಅಣ್ಣಯ್ಯ
ಅಪ್ಪಾಜಿಯದು ಸಂಯಮದ ಸ್ವಭಾವ. ಅಳೆದು ತೂಗಿ ಮಾತನಾಡುವ ಪೈಕಿ. ಎಲ್ಲವನ್ನು, ಎಲ್ಲರನ್ನು ಸಹಿಸಿಕೊಳ್ಳುವ ಅಗಾಧ ಸಹನೆ. ಆದರೆ ನಮ್ಮ ಚಿಕ್ಕಪ್ಪ ಕೆಂಪರಾಜ್‌ರದು ತದ್ವಿರುದ್ಧ. ಚಡಪಡಿಕೆ, ಅಸಹನೆಯ ಮೂಟೆ, ಜೋರು ಮಾತು, ಎಲ್ಲರನ್ನು ಗೇಲಿ ಮಾಡುವುದು, ಬಯ್ಯುವುದು. ಬಹಳ ವಿಚಿತ್ರ ಅಂದರೆ, ಇಬ್ಬರೂ ಸ್ನೇಹಿತರಂತಿದ್ದರು, ಕ್ಲೋಸಾಗಿದ್ದರು.
ಅಪ್ಪಾಜಿ ಅವರಿಗೆ ಕೆಂಪು ಅಂದರೆ, ಇವರು ಅವರಿಗೆ ಅಣ್ಣಯ್ಯ ಅನ್ನೋರು. ಆ ‘ಕೆಂಪು-ಅಣ್ಣಯ್ಯ’ ಎನ್ನುವ ಮಾತು ಹೃದಯದಿಂದ, ಕರುಳಿನಿಂದ ಬರುತಿತ್ತು. ಇನ್ನು ಇವರಿಬ್ಬರಿಗಿಂತ ಎರಡು ವರ್ಷ ದೊಡ್ಡವರಾದ ಚದುರಂಗ ಅಂಕಲ್ ಇವರೊಂದಿಗೆ ಸೇರಿಬಿಟ್ಟರೆ, ಥ್ರಿ ಮಸ್ಕಿಟಿಯರ್ಸ್! ಈ ಮೂವರಿಗಿಂತ 20 ವರ್ಷ ದೊಡ್ಡವರು ಚದುರಂಗರ ಅಣ್ಣ ಬಸವರಾಜ ಅರಸು. ಅವರು ತುಂಬಾನೆ ಬುದ್ಧಿವಂತರು. ಸುಪ್ರೀಂ ಕೋರ್ಟ್ ಲಾಯರ್. ಈ ಮೂವರಿಗೂ ಹೆಚ್ಚುಕಮ್ಮಿ ತಂದೆಯ ಸ್ಥಾನದಲ್ಲಿದ್ದು ನೋಡಿಕೊಂಡವರು. ಚಿಕ್ಕಪ್ಪ ಕೆಂಪರಾಜ್ ಮನೆಗೆ ಬಂದರೆ, ಇಡೀ ಮನೆಗೇ ಕಳೆ. ನಗು, ತಮಾಷೆ, ಸಂತೋಷ. ಅವರಿಗೆ ಗೊತ್ತಿಲ್ಲದ ವಿಷಯವೇ ಇರಲಿಲ್ಲ. ಎಲ್ಲವೂ ಅರ್ಧರ್ಧ. ಅಪ್ಪಾಜಿಗೆ ಸರ್ಪಸುತ್ತು ಆದಾಗ, ನಾವೆಲ್ಲ ಏನೇನೋ ಮಾಡುತ್ತಿದ್ದಾಗ, ಇದು ಸರ್ಪಸುತ್ತು ಎಂದು ಹೇಳಿ ಅದಕ್ಕೆ ಆಯುರ್ವೇದ ಚಿಕಿತ್ಸೆ ಮಾಡುವಂತೆ ಹೇಳಿದವರು ಚಿಕ್ಕಪ್ಪ. ಊರಿಗೆ ಹೋದಾಗ, ಸೋಮಾರಿ ಯುವಕರು ಜಗಲಿ ಮೇಲೆ ಕೂತಿದ್ದರೆ, ಸಿಕ್ಕಾಪಟ್ಟೆ ಸಿಟ್ಟು ಬರುತಿತ್ತು. ಅಪ್ಪನ ದುಡ್ಡು ಹಾಳು ಮಾಡುತ್ತಿದ್ದೀರ ಎಂದು ಕೆಟ್ಟದಾಗಿ ಬಯ್ಯುತ್ತಿದ್ದರು.
ಅವರ ಆ ಭೀಕರ ಬಯ್ಗುಳಿಗೆ ಬೆದರಿ ಯುವಕರು ಎದ್ದು ಹೊಲ-ಗದ್ದೆಯತ್ತ ಓಡುತ್ತಿದ್ದರು, ಆರು ಕಟ್ಟುತ್ತಿದ್ದರು. ನಮ್ಮಜ್ಜಿ ವಯಸ್ಸಾಗಿ ಏಳುವುದು, ನಡೆಯುವುದು ಕಷ್ಟವಾದಾಗ, ‘‘ಅಮ್ಮಯ್ಯ, ಸ್ನಾನ ಮಾಡಸ್ತೀನಿ ಬಾ’’ ಎನ್ನುತ್ತಿದ್ದರು. ‘‘ಅಯ್ಯೋ ಹೋಗಪ್ಪ, ನಿನ್ನ ಕೈಯಲ್ಲಿ ಸ್ನಾನಾನ’’ ಎಂದು ನಾಚಿಕೊಂಡರೆ, ಚಿಕ್ಕಪ್ಪ ‘‘ಚಿಕ್ಕ ಮಕ್ಕಳಾಗಿದ್ದಾಗ ನೀನು ನನಗೆ ಸ್ನಾನ ಮಾಡಿಸಿಲ್ಲವಾ, ಈಗ ನೀವು ಮಗು, ನಾನು ನಿಮಗೆ ಸ್ನಾನ ಮಾಡಿಸ್ತೀನಿ, ಬನ್ನಿ’’ ಎಂದು ಹಠ ಮಾಡಿ ಎತ್ತಿಕೊಂಡು ಹೋಗಿಯೇಬಿಡುತ್ತಿದ್ದರು. ಅಪ್ಪಾಜಿಗೆ ಹುಷಾರಿಲ್ಲದೆ ಮಲಗಿದ್ದರೂ ಮಾತನಾಡಿಸಲು ಬರುವ ಜನಕ್ಕೇನು ಕೊರತೆ ಇರಲಿಲ್ಲ. ಒಂದು ಸಲ ಜ್ವರ ಬಂದು ಡಾಕ್ಟರ್ ರೆಸ್ಟ್ ಮಾಡಲಿಕ್ಕೆ ಹೇಳಿದ್ದಾರೆ. ಅಪ್ಪಾಜಿ ನೋಡಲು ಬಂದ ಮಲ್ಲಿಕಾರ್ಜುನ ಖರ್ಗೆ ಪಕ್ಕ ಕೂತು ಮಾತನಾಡುತ್ತಲೇ ಇದ್ದಾರೆ. ಅದನ್ನು ಕಂಡ ಚಿಕ್ಕಪ್ಪ, ‘‘ಇಲ್ಲಿಂದ ತೂದು ಎಸ್ತರೆ ನೋಡಿ...’’ ಎಂದರು ಸಿಟ್ಟಿನಿಂದ. ಖರ್ಗೆ ಗಪ್‌ಚುಪ್. ನಾವು ಮರೆಯಲ್ಲಿ ನಿಂತು ನಕ್ಕಿದ್ದೂ ನಕ್ಕಿದ್ದೆ. ಅಪ್ಪಾಜಿ-ಇಂದಿರಾ ನಡುವೆ ಭಿನ್ನಾಭಿಪ್ರಾಯ ಬಂದಾಗ, ಬೇರೆ ಪಕ್ಷ ಕಟ್ಟಿ ದೂರಾದಾಗ, ಅವರಿಗೂ ಅರಸು ಬೇಕೆನಿಸಿದಾಗ, ಕೆಲವು ಆಪ್ತರೊಂದಿಗೆ ಸಂಧಾನಕ್ಕೆ ಮುಂದಾಗಿದ್ದರು. ಆಗ ನಮ್ಮ ಚಿಕ್ಕಪ್ಪ ಅಪ್ಪಾಜಿಗೆ ‘‘ಹೋಗಿ ಮಾತಾಡಿ, ನೋಡೋಣ, ಹಠ ಮಾಡಿದರೆ ಹೇಗೆ?’’ ಎಂದು ಒತ್ತಾಯಿಸಿದ್ದರು. ಅಪ್ಪಾಜಿ ಕಡ್ಡಿ ಮುರಿದಂತೆ, ‘‘ನನ್ನ ಡೆಡ್ ಬಾಡೀನೂ ಹೋಗಲ್ಲ ಆಕೆಯ ಬಳಿ’’ ಎಂದು ಎದ್ದು ಹೋಗಿದ್ದರು.
ಆಗ ನಮ್ಮ ಬಳಿ ಬರುತ್ತಿದ್ದ ಚಿಕ್ಕಪ್ಪ, ‘‘ನಿಮ್ಮಪ್ಪ ನನಗಿಂತ ಒಂದೂಕಾಲು ವರ್ಷ ದೊಡ್ಡೋರು ಅಂತ ಸುಮ್ಮನಿದ್ದೀನಿ, ಇಲ್ಲದಿದ್ದರೆ...’’ ಎಂದು ಮಾತಲ್ಲೇ ಸಿಗಿದು ಹಾಕಿಬಿಡುತ್ತಿದ್ದರು. ಆದರೆ ಅವರಿಬ್ಬರು ಎಷ್ಟು ಆತ್ಮೀಯರೆಂದರೆ, ಅವರ ನಡುವೆ ಯಾವ ಮುಚ್ಚು ಮರೆ ಇರುತ್ತಿರಲಿಲ್ಲ. ಒಬ್ಬರನ್ನೊಬ್ಬರು ಬಿಟ್ಟುಕೊಟ್ಟು ಮಾತನಾಡಿದ್ದಿಲ್ಲ. ಇಂತಹ ಚಿಕ್ಕಪ್ಪ, ಅಪ್ಪಾಜಿಗಿಂತ ಮುಂಚೆಯೇ ಇಲ್ಲವಾದರು. ಆಗ ಅಪ್ಪಾಜಿ ಸಂಸ್ಕಾರದ ವಿ ವಿಧಾನಗಳನ್ನು ಖುದ್ದು ನಿಂತು ಮಾಡಿದ್ದರು. ಆಗ ಅಪ್ಪಾಜಿ ಅರ್ಧ ಜೀವವಾಗಿದ್ದರು.
ನಮ್ಮಜ್ಜಿಯ ಬಹುವಚನ
ನಮ್ಮಜ್ಜಿಗೆ 96 ವರ್ಷವಾಗಿತ್ತು. ನಾವು ಜೈನ ಕ್ಷತ್ರಿಯರಾದ ಕಾರಣ, ಸಂಜೆ ಮೇಲೆ ಉಪವಾಸ ವೃತ ಮಾಡುತ್ತಿದ್ದರು. ಆ ವಯಸ್ಸಿನಲ್ಲಿ ಉಪವಾಸ ಅಂದರೆ ಸುಸ್ತಾಗುವುದು ಸಹಜ. ಆ ಉಪವಾಸದಲ್ಲೂ ಅಜ್ಜಿ, ಅಪ್ಪಾಜಿಗಾಗಿ ಅರ್ಧರಾತ್ರಿಯಾದರೂ ಕಾದು ನೋಡಿ ಮಲಗುತ್ತಿದ್ದರು. ಅಪ್ಪಾಜಿಯೂ ಅಷ್ಟೆ, ಎಷ್ಟೊತ್ತಿಗೇ ಬಂದರೂ ಅವರ ಕೋಣೆಗೆ ಹೋಗಿ ‘‘ನಾನು ಬಂದಿದ್ದೇನೆ, ಮಲಗಿ’’ ಎಂದಾಗಲೇ ಮಲಗುತ್ತಿದ್ದರು. ಅಕ್ಕ ನಾಗರತ್ನಾ ಸಿಟ್ಟಿನಿಂದ ಬಯ್ಯುತ್ತಿದ್ದಳು. ಆಗ ನಮ್ಮಜ್ಜಿ, ‘‘ಬೆಳಗ್ಗೆ ಹೋದರೆ ಹೀಗೆ ಸರೊತ್ತಿಗೆ ಬರ್ತಾರೆ, ಅನ್ನ-ನೀರು ಸಿಕ್ತೋ ಇಲ್ವೋ, ನಾಡಿನ ಯೋಗಕ್ಷೇಮ ವಿಚಾರಿಸೋ ಅವರ ಕಷ್ಟ-ಸುಖ ವಿಚಾರಿಸುವವರ್ಯಾರು’’ ಎನ್ನುತ್ತಿದ್ದರು. ನಮ್ಮಜ್ಜಿದೊಂದು ಸ್ಪೆಷಾಲಿಟಿ ಅಂದರೆ, ಅಪ್ಪಾಜಿಯನ್ನು ಅವರು ಎಂದೂ ಏಕವಚನದಲ್ಲಿ ಕರೆದವರಲ್ಲ. ಇದು ನಮ್ಮಮ್ಮನಿಗೆ ಒಂಥರಾ ಮುಜುಗರ ಉಂಟು ಮಾಡಿತ್ತು. ಅದನ್ನವರು ಕೇಳಿಯೂ ಇದ್ದರು. ‘‘ಅವರು ನಿಮ್ಮ ಮಗನಲ್ಲವೇ, ಬಹುವಚನವೇಕೆ, ಬಾ ಹೋಗು ಅನ್ನಿ’’ ಅನ್ನುತ್ತಿದ್ದರು. ಆದರೆ ಅವರು, ‘‘ನನಗಾಗದು’’ ಎಂದು ಬಹುವಚನದಲ್ಲಿಯೇ ಮಾತನಾಡಿಸುತ್ತಿದ್ದರು.
ಮಗ ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ, ಹಿಂದುಳಿದ ವರ್ಗಕ್ಕೆ ಸೇರಿದ ನೂರಾರು ಜನರಿಗೆ ಅಕಾರದ ಸ್ಥಾನಕ್ಕೇರುವ ಅವಕಾಶ ಕಲ್ಪಿಸಿಕೊಟ್ಟರೂ, ನೂರಾರು ಕೋಟಿ ರೂ.ಗಳನ್ನು ನಾಡಿನ ಅಭಿವೃದ್ಧಿಗಾಗಿ ವಿನಿಯೋಗಿಸಿದರೂ... ಮಗನನ್ನು ಯಾವತ್ತೂ ಯಾವುದಕ್ಕೂ ಕೇಳಿದವರಲ್ಲ. ಚಿಕ್ಕ ವಯಸ್ಸಿಗೇ ವಿಧವೆಯಾದ ಅವರು, ಸುಖ, ಸಂತೋಷಗಳಿಂದ ದೂರವೇ ಉಳಿದವರು. ಮಗನ ಶ್ರೇಯಸ್ಸನ್ನಷ್ಟೇ ಬಯಸಿದವರು.
ಪ್ರತಿದಿನ ಪರ
ನಮ್ಮನೆಯ ಅಡುಗೆ ಮನೆ ಕಾರ್ಖಾನೆ ಥರ ಇತ್ತು. ದಿನದ ಇಪ್ಪತ್ನಾಲ್ಕು ಗಂಟೆಯೂ ಚಾಲ್ತಿಯಲ್ಲಿತ್ತು. ಹಚ್ಚುತ್ತಿದ್ದ ಒಲೆ ಆರುತ್ತಿರಲಿಲ್ಲ. ನಮ್ಮ ಮನೆಯಲ್ಲಿ ಪ್ರತಿದಿನ ಪರ ಮಾಡುವ ರೀತಿಯಲ್ಲಿ ಅಡುಗೆ ಮಾಡುತ್ತಿದ್ದೆವು. ಮನೆಗೆ ಯಾರು ಬಂದರೂ ಕೊನೆ ಪಕ್ಷ ಕಾಫಿಯನ್ನಾದರೂ ಕೊಡಲೇಬೇಕಿತ್ತು. ದಿನಕ್ಕೆ ನೂರಾರು ಲೀಟರ್ ಹಾಲು ಬೇಕಾಗಿತ್ತು. ಅದರಲ್ಲೂ ನಮ್ಮ ತಂದೆಗೆ ನಮ್ಮನೆಯ ಹಸುವಿನ ಹಾಲೇ ಆಗಬೇಕಿತ್ತು. ನನ್ನ ಅಕ್ಕ ನಾಗರತ್ನಾ ಯಾವಾಗಲೂ ಅಮ್ಮನಿಗೆ ‘‘ಏನಮ್ಮ ನಿನ್ನ ಲೈು, ಬರೀ ಅಡುಗೆ ಮಾಡೋದು, ಊಟಕ್ಕೆ ಬಡಿಸೋದು, ಗಂಡನ ಕಾಯೋದು, ಮಕ್ಕಳನ್ನು ನೋಡ್ಕೊಳೋದು ಇಷ್ಟೇ ಆಗೋಯ್ತು’’ ಎನ್ನುತ್ತಿದ್ದಳು. ಇಷ್ಟಾದರೂ ನಮ್ಮ ತಾಯಿ ತಂದೆಯೊಂದಿಗೆ ಜಗಳ ಆಡಿದವರಲ್ಲ. ಸಂಸಾರ ಎಂದಮೇಲೆ ಇದ್ದೇ ಇರುತ್ತಿದ್ದ ಸಣ್ಣ ಪುಟ್ಟ ಮಾತುಕತೆಯಷ್ಟೆ. ಅದು ಬಿಟ್ಟರೆ ದೊಡ್ಡ ಮಟ್ಟದ ಜಗಳ, ಮುನಿಸು, ಕಿತ್ತಾಟ ಇಲ್ಲವೇ ಇಲ್ಲ. ಅಷ್ಟಕ್ಕೂ ನಮ್ಮ ತಂದೆಗೆ ಜಗಳವಾಡಲು ಸಮಯವೆಲ್ಲಿತ್ತು?
ಮಹಾರಾಜರ ವಾಚ್
ಅಪ್ಪಾಜಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ, ಮೈಸೂರಿನ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅಪ್ಪಾಜಿಯನ್ನು ಅರಮನೆಗೆ ಕರೆಸಿಕೊಂಡಿದ್ದರು. ಮೈಸೂರು ಮಹಾರಾಜರು ನಮ್ಮನ್ನು ಕರೆದು ಮಾತನಾಡಿಸುತ್ತಾರೆ ಎಂದರೆ, ಅದೇನು ಸಣ್ಣ ವಿಷಯವೇ? ಸಹಜವಾಗಿಯೇ ಥ್ರಿಲ್ ಆಗಿದ್ದೆವು. ನಮ್ಮ ಕುಟುಂಬ ಅರಮನೆಗೆ ಹೋದಾಗ ರಾತ್ರಿ 10:30. ಮಹಾರಾಜರು ಊಟವೆಲ್ಲ ಆಗಿ ಕೂತಿದ್ದರು. ನಾವು ಹೋಗಿ ಅವರ ಮುಂದೆ ನಿಂತುಕೊಂಡೆವು. ಅಪ್ಪಾಜಿಯನ್ನು ಕಂಡೊಡನೆ ಮಹಾರಾಜರು ಕೂತಿದ್ದ ಕುರ್ಚಿಯಿಂದ ಕೆಳಗಿಳಿದು ಬಂದು, ‘‘ಯೂ ಆರ್ ಸೆಲ್ ಮೇಡ್ ಮ್ಯಾನ್, ನೀವು ನಿಮ್ಮ ಜೀವನದಲ್ಲಿ ಕಷ್ಟಪಟ್ಟು ಮೇಲೆ ಬಂದಿದ್ದೀರ, ಶುಡ್ ಬಿ ಕಾನ್ಷಿಯಸ್ ಆ್ ಕಾಲಚಕ್ರ’’ ಎಂದು ಬಹಳ ಹೆಮ್ಮೆಯಿಂದ ಹೇಳಿ ಅಪ್ಪಾಜಿಯ ಕೈಗೆ ವಾಚ್ ಕಟ್ಟಿದರು. ಆ ವಾಚ್ ನೋಡಿಕೊಂಡಾಗೆಲ್ಲ ಮಹಾರಾಜರ ಮಾತು ನೆನಪಾಗಬೇಕು ಎಂಬುದೇ ಅವರ ಆಸೆಯಾಗಿತ್ತು. ಅವತ್ತು ಅಪ್ಪಾಜಿಯ ಮುಖದಲ್ಲಿ ಧನ್ಯತೆಯ ಭಾವವಿತ್ತು. ನಮಗೆಲ್ಲ ಆಕಾಶವೇ ಕೆಳಗಿಳಿದು ಬಂದಷ್ಟು ಖುಷಿಯಾಗಿತ್ತು.
ಅವಕಾಶ ಕೊಡಬೇಕು
ಅಪ್ಪಾಜಿ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು ‘‘ಅಕಾರ ಎನ್ನುವುದು ಜನ ನನಗೆ ಕೊಟ್ಟಿರುವುದು, ಅದು ನನ್ನದಲ್ಲ. ಅವರು ಕೊಟ್ಟಿರುವ ಅಕಾರ ಅವರಿಗಾಗಿಯೇ ಬಳಕೆಯಾಗಬೇಕು; ಎಲ್ಲರೂ ಚೆನ್ನಾಗಿರಬೇಕು; ಎಲ್ಲರಿಗೂ ಅವಕಾಶ ಕೊಡಬೇಕು. ಅವಕಾಶನೇ ಇಲ್ಲದಿದ್ದರೆ ಅವರು ಮುಂದೆ ಬರಲು ಹೇಗೆ ಸಾಧ್ಯ’’ ಎನ್ನುತ್ತಿದ್ದರು. ಆ ಕಾರಣಕ್ಕಾಗಿಯೇ ರಾಜಕೀಯದಲ್ಲಿ ಮೀಸಲಾತಿಯನ್ನು ಜಾರಿಗೆ ತಂದರು. ಆದರೆ ಆ ಮೀಸಲಾತಿ ಕಾಯ್ದೆಯ ಮೂಲಕ ಮೇಲ್ಜಾತಿಯವರನ್ನು ಕಡೆಗಣಿಸಲಿಲ್ಲ, ಬಗ್ಗುಬಡಿಯಲು ಬಳಸಿಕೊಳ್ಳಲಿಲ್ಲ. ನಮ್ಮ ತಂದೆಯ ಕ್ಯಾಬಿನೆಟ್‌ನಲ್ಲಿ ಬ್ರಾಹ್ಮಣರ ಗುಂಡೂರಾವ್, ಲಿಂಗಾಯತರ ಕೆ.ಎಚ್.ಪಾಟೀಲ್, ಒಕ್ಕಲಿಗರ ಎಸ್.ಎಂ.ಕೃಷ್ಣ.. ಹೀಗೆ ಎಲ್ಲ ಜಾತಿಯ ಜನರೂ ಇದ್ದರು. ಅವರಿಗೆಲ್ಲ ಫ್ರೀ ಹ್ಯಾಂಡ್ ಕೊಟ್ಟಿದ್ದರು. ಅಪ್ಪಾಜಿ ಕೊಟ್ಟ ಫ್ರೀಡಂ ಅನ್ನು ಕೆಲವರು ದುರುಪಯೋಗಪಡಿಸಿಕೊಂಡರು. ಸರಕಾರಕ್ಕೆ ಕೆಟ್ಟ ಹೆಸರು ತಂದರು. ಆದರೆ ಅಪ್ಪಾಜಿ ಎಂದೂ ಕರಪ್ಟ್ ಆಗಲಿಲ್ಲ. ನಮಗಾಗಿ ಆಸ್ತಿ ಮಾಡಲಿಲ್ಲ್ಲ. ‘‘ಏನು ಮಾಡೋಕ್ರಿ ಆಸ್ತಿ, ಮೂರು ಹೆಣ್ಣು ಮಕ್ಕಳು ಅವರವರ ಗಂಡನ ಮನೆಗೆ ಹೋಗ್ತ್ತಾರೆ, ನಾನು ನನ್ನ ಹೆಂಡ್ತಿ ಜನರು ರಾಜಕೀಯ ಮಾಡಿ ಎನ್ನುವವರೆಗೆ ಮಾಡ್ತೀವಿ, ಬೇಡ ಅಂದ್ರೆ ಊರಿಗೆ ಹೋಗ್ತೀವಿ, ಜಮೀನಿದೆ, ಕೃಷಿ ಗೊತ್ತಿದೆ. ಎರಡು ಹೊತ್ತು ಊಟಕ್ಕೇನು ತೊಂದರೆ ಇಲ್ಲ’’ ಎನ್ನುತ್ತಿದ್ದರು. ನಿರೀಕ್ಷೆಗಳಿರಲಿಲ್ಲ, ಲೆಕ್ಕಾಚಾರವಿರಲಿಲ್ಲ, ದ್ವೇಷ ಅಸೂಯೆಗಳಿರಲಿಲ್ಲ, ಸ್ವಾರ್ಥವಿರಲಿಲ್ಲ, ಅವರ ಬಳಿ ಕ್ಷಮೆಗೂ ಒಂದು ಅವಕಾಶ ವಿತ್ತು... ಅದನ್ನೆಲ್ಲ ಈಗ ನೆನೆದರೆ ಅವರು ನನ್ನ ತಂದೆ ಎನ್ನುವುದಕ್ಕೆ ಬಹಳ ಹೆಮ್ಮೆ ಆಗುತ್ತದೆ.
ತೊಟ್ಟಿಲು ತೂಗಿದ ಸಿಎಂ
ನನಗೆ ಹೆರಿಗೆ ಆಗಿ ಬಾಣಂತನ ಬೆಂಗಳೂರಿನ ತಂದೆಯ ಮನೆಯಲ್ಲಿಯೇ ಆಯಿತು. ಅಪ್ಪಾಜಿ ದಿನ ಬೆಳಗ್ಗೆ ವಾಕಿಂಗ್ ಮಾಡಿ ಬಂದ ತಕ್ಷಣವೇ ಮಗೂನ ತೊಡೆಯ ಮೇಲೆ ಕೂರಿಸಿಕೊಳ್ಳುತ್ತಿದ್ದರು. ಅಜ್ಜ ಮೊಮ್ಮಗಳದ್ದು ಸೈಲೆಂಟ್ ಲವ್. ಬರೀ ನೋಟ. ನೋಟದಾಟದ ನಂತರ ಜೇನುತುಪ್ಪಬೆರೆಸಿದ ಗ್ರೀನ್ ಟೀ ಕುಡಿದು, ಪೇಪರ್ ಓದುತ್ತಿದ್ದರು. ಅಪ್ಪಾಜಿಯದು, ನನ್ನ ಮಗಳದು ಒಂದೇ- ಮೂಲ ನಕ್ಷತ್ರ. ಆಕೆಗೆ ಚಾಮುಂಡಿಯ ಮತ್ತೊಂದು ಹೆಸರಾದ ಯಶಸ್ವಿನಿ ಎಂದು ನಾಮಕರಣ ಮಾಡಿದ್ದೆವು. ಆದರೆ ಅಪ್ಪಾಜಿ ‘ಯಶೋಮತಿ’ ಎಂದು ಕರೆಯುತ್ತಿದ್ದರು. ನಾನು ‘ಅವಳು ಯಶಸ್ವಿನಿ’ ಎಂದರೂ ‘ಯಶೋಮತಿ’ ಎಂದೇ ಕರೆಯುತ್ತಿದ್ದರು. ಅವರಿಗೆ ‘ಆಡಿಸಿದಳು ಯಶೋದ’ ಹಾಡು ಬಹಳ ಪ್ರಿಯವಾಗಿತ್ತು. ಹಾಗಾಗಿ ನಾಲಗೆಯ ಮೇಲೆ ಯಶೋದ ನಲಿದಾಡುತ್ತಿತ್ತು. ಮಗೂನ ಬಿದಿರಿನ ತೊಟ್ಟಿಲಲ್ಲಿ ಮಲಗಿಸಿ ಒಮ್ಮಿಮ್ಮೆ ಅಪ್ಪಾಜಿ ತೂಗುತ್ತಿದ್ದರು. ಆ ಸಮಯದಲ್ಲಿ ಈ ಹಾಡನ್ನು ಹಾಡುತ್ತ ತೂಗುತ್ತಿದ್ದರು. ಅವಳು ನಿದ್ರೆ ಮಾಡುತ್ತಿದ್ದಳು.
ನನ್ನ ಮಗಳು ಹುಟ್ಟಿದ ಸಂದರ್ಭದಲ್ಲಿಯೇ ಮಂಡ್ಯದಲ್ಲಿ ವರುಣಾ ನಾಲೆ ಸಂಬಂಧ ಅಪ್ಪಾಜಿ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದವು. ಮಂಡ್ಯದ ಜನ ಅವರನ್ನು ಸುಟ್ಟುಹಾಕುವಷ್ಟು ಸಿಟ್ಟಿನಲ್ಲಿದ್ದರು. ಆದರೆ ಅಪ್ಪಾಜಿ ವರುಣಾ ನಾಲೆಯಲ್ಲಿ ನೀರು ಹರಿಸಿಯೇ ಸಿದ್ಧ, ಮೈಸೂರಿನ ಜನಕ್ಕೆ ಕಾವೇರಿ ನೀರು ಕೊಟ್ಟೆ ತೀರುತ್ತೇನೆ ಎಂದು ಶಪಥ ಮಾಡಿದ್ದರು. ನೀರು ಹರಿಸಿದ ದಿನ ಅವರು ಸಿಕ್ಕಾಪಟ್ಟೆ ಸಂತೋಷದಲ್ಲಿದ್ದರು. ಆ ಸಂದರ್ಭ ನಾನು ಕೂಡ ಅವರ ಸಂತೋಷದಲ್ಲಿ ಭಾಗಿಯಾಗಿದ್ದು ಮರೆಯಲಾಗದ ಕ್ಷಣ.
ಅವರು ನನ್ನಮ್ಮ..
1977ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಗಾಂಯವರು ಸೋತಾಗ ಅಪ್ಪಾಜಿ ತುಂಬಾನೆ ಬೇಜಾರು ಮಾಡಿಕೊಂಡಿದ್ದರು. ತಮ್ಮ ಮಂತ್ರಿ ಮಂಡಲದ ಸದಸ್ಯರನ್ನೆಲ್ಲ ಕರೆದು, ‘‘ಅವರು ನನ್ನಮ್ಮ, ನನ್ನನ್ನು ಸಿಎಂ ಮಾಡಿದ್ದಾರೆ, ಅವರೀಗ ಸೋತು ಮನೆಯಲ್ಲಿ ಕೂತಿದ್ದಾರೆ, ಅವರನ್ನು ಮತ್ತೆ ಲೈಮ್ ಲೈಟ್‌ಗೆ ತರಬೇಕು, ಅದು ನನ್ನ ಮನೋಧರ್ಮ. ಆಕೆಗೆ ನೀವೆಲ್ಲ ಬೆಂಬಲಿಸಿದರೆ ಸರಿ, ಇಲ್ಲದಿದ್ದರೆ ನನಗೇನು ಬೇಸರವಿಲ್ಲ’, ಎಂದರು. ಅದಕ್ಕೆ ಉತ್ತರವಾಗಿ, ‘‘ಇಲ್ಲಿಗೆ ಕರೆತಂದು ನಿಲ್ಲಿಸಿ, ಸೋತರೆ.. ಅವರೂ ಹೋಗಿ, ನೀವೂ ಹೋಗಿ..’’ ಎಂದು ಅಪಸ್ವರ ಎತ್ತಿದರು. ‘‘ಅದು ನನಗೆ ಬಿಟ್ಟ ವಿಚಾರ, ನನಗವರು ಸಿಎಂ ಮಾಡಿದ್ದಾರೆ, ನಾನವರಿಗೆ ಮಾಡಬೇಕು, ಅಷ್ಟೆ’’ ಎಂದರು. ಚಿಕ್ಕಮಗಳೂರಿಗೆ ಕರೆತಂದು ನಿಲ್ಲಿಸುವುದೆಂದು ತೀರ್ಮಾನಿಸ ಲಾಯಿತು. ಒಂದು ವರ್ಷ ತಾಲೀಮು ನಡೆಯಿತು. ಅಲ್ಲಿ ಎಂಪಿಯಾಗಿದ್ದ ಡಿ.ಬಿ.ಚಂದ್ರೇಗೌಡರ ಮನವೊಲಿಸುವ ಸಂದರ್ಭದಲ್ಲಿ ಅವರು ನಮ್ಮನೆಯಲ್ಲಿಯೇ ಇದ್ದರು. ಅಪ್ಪಾಜಿ ಹಿಂದಿಂದೆಯೇ ಸುತ್ತಾಡೋರು, ‘‘ನಾನೀಗ ಕಣ್ಣು ಬಿಡುತ್ತಿದ್ದೇನೆ’’ ಎಂದು ಅಳೋರು. ಅವರ ದೈನ್ಯ ಸ್ಥಿತಿ ನೋಡಿ ನಮಗೆಲ್ಲ ನಗು. ಅಪ್ಪಾಜಿ ಅವರನ್ನು ಕೂರಿಸಿಕೊಂಡು ಇಡೀ ಒಂದು ದಿನ ಕೌನ್ಸಿಲಿಂಗ್ ಮಾಡಿದರು. ಸಾಲದು ಎಂದು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಕೈಯಿಂದ ಹೇಳಿಸಿದರು. ಆಗ ಅವರು ಮನಸ್ಸಿಲ್ಲದ ಮನಸ್ಸಿನಿಂದ ಹೂಂ ಅಂದರು. ಅಲ್ಲಿಯೇ ಮೊದಲ ಪೂಜೆಯೂ ಆಯಿತು.
ಮುಂದಿನದು ರಣರಂಗ. ದೇವರಾಜ ಅರಸು ವರ್ಸಸ್ ಇಂಡಿಯಾದ ರಾಜಕೀಯ ಪಕ್ಷಗಳು ಎಂಬಂತಹ ವಾತಾವರಣ ನಿರ್ಮಾಣವಾಯಿತು. ಅಷ್ಟಾದರೂ ಅಪ್ಪಾಜಿಯ ಅವಿರತ ಶ್ರಮದ ಲವಾಗಿ ಇಂದಿರಾ ಮೇಡಂ ಗೆದ್ದರು. ಗೆದ್ದಾಗ ಲಂಡನ್ ಟೈಮ್ಸ್ ಪತ್ರಿಕೆ ‘ಅರಸ್, ರ್ಪೆಕ್ಟ್ ಮ್ಯಾಚ್ ಟು ಮಿಸೆಸ್ ಗಾಂ’ ಎಂಬ ತಲೆಬರಹದಲ್ಲಿ ದೊಡ್ಡ ಲೇಖನ ಪ್ರಕಟಿಸಿತು. ವಿಜಯೋತ್ಸವ ಆಚರಿಸಲು ದಿಲ್ಲಿಯಲ್ಲಿ ದೊಡ್ಡ ಸಮಾವೇಶ ಹಮ್ಮಿಕೊಳ್ಳಲಾಯಿತು. ಆ ಸಮಾವೇಶಕ್ಕೆ ಹೋಗುವ ದಿನ ‘‘ಮನೆಗೆ ಬನ್ನಿ, ಒಟ್ಟಿಗೆ ಹೋಗೋಣ’’ ಎಂದಿದ್ದರು ಮೇಡಂ. ಅಪ್ಪಾಜಿ ಮೇಡಂ ಮನೆಗೆ ಹೋದರೆ, ಜನವೋ ಜನ. ಅಪ್ಪಾಜಿಯನ್ನು ಕಾರಿನಿಂದ ಇಳಿಯಲೂ ಬಿಡುತ್ತಿಲ್ಲ. ಹಾಗೆ ಅನಾಮತ್ತಾಗಿ ಎತ್ತಿಕೊಂಡು ಮೆರೆಸಿದರು, ಹೊತ್ತುಕೊಂಡು ಹೋಗಿ ವೇದಿಕೆಯ ಮೇಲೆ ಕೂರಿಸಿಬಿಟ್ಟರು. ಅದು ಇಂದಿರಾ ಗಾಂಗೆ ಸಹಿಸಿಕೊಳ್ಳಲಾಗಲಿಲ್ಲ. ಇವರನ್ನು ಹೀಗೆ ಬಿಟ್ಟರೆ, ನನ್ನ ಕುರ್ಚಿಗೇ ಕಂಟಕ ಎಂದರಿತು, ಅಪ್ಪಾಜಿ ವಿರುದ್ಧ ಒಳಗೊಳಗೇ ತಂತ್ರ ಹೆಣೆಯತೊಡಗಿದರು. ಮಗ ಸಂಜಯ ಗಾಂಯನ್ನು ಅಪ್ಪಾಜಿಯ ಮೇಲೆ ಎತ್ತಿಕಟ್ಟಿದರು. ಆತ ಇಲ್‌ಟ್ರೀಟ್ ಮಾಡಲು ಶುರುಮಾಡಿದ. ಅಪ್ಪಾಜಿ ಭಾರೀ ನೊಂದುಕೊಂಡರು. ಮುಂದುವರಿದು ಪಾರ್ಟಿಯಿಂದ ಅಮಾನತು ಮಾಡಿದರು. ಅಪ್ಪಾಜಿ ಸೆಟೆದುನಿಂತು ಪಾರ್ಟಿ ಕಟ್ಟಿದರು, ಚುನಾವಣೆಗೆ ಸ್ಪರ್ಸಿ ಸೋತರು, ರಾಜೀನಾಮೆ ನೀಡಿದರು. ಆ ಸಮಯದಲ್ಲಿ ಅಪ್ಪಾಜಿ ಮಾನಸಿಕವಾಗಿ, ದೈಹಿಕವಾಗಿ ಸೊರಗಿದ್ದರು. ಇಂದಿರಾ ಗಾಂಯವರನ್ನು ಕರೆದುಕೊಂಡು ಬಂದು ಚಿಕ್ಕಮಗಳೂರಿನಲ್ಲಿ ನಿಲ್ಲಿಸಿ ಗೆಲ್ಲಿಸಿದರಲ್ಲ, ಆ ಓಡಾಟ, ಶ್ರಮಕ್ಕೆ ಅಪ್ಪಾಜಿಯ 10 ವರ್ಷ ಆಯುಸ್ಸು ಕಡಿಮೆಯಾಗಿತ್ತು.
ಅಪ್ಪಾಜಿ ಅಕಾರದಿಂದ ಕೆಳಗಿಳಿದಾಗಲೂ ಆತ್ಮಸ್ಥೈರ್ಯ ಕಳೆದುಕೊಂಡಿರಲಿಲ್ಲ. ಬದಲಿಗೆ ರಾಷ್ಟ್ರೀಯ ಮಟ್ಟದ ನಾಯಕರಾದ ವಾಜಪೇಯಿ, ಚರಣ್‌ಸಿಂಗ್, ದೇವಿಲಾಲ್, ಬಿಜು ಪಟ್ನಾಯಕ್, ಾರುಖ್‌ಅಬ್ದುಲ್ಲ, ಕರುಣಾ ನಿ, ಎನ್‌ಟಿಆರ್ ಇವರ ಬೆನ್ನಿಗಿದ್ದು, ಇವರನ್ನೇ ನ್ಯಾಷನಲ್ ್ರಂಟ್ ಅಧ್ಯಕ್ಷರನ್ನಾಗಿ ಮಾಡಿದ್ದರು. ಮುಂದಿನ ಪ್ರಧಾನ ಮಂತ್ರಿ ಅರಸು ಅನ್ನುವ ಮಾತು ಚಲಾವಣೆಗೆ ಬಂದಿತು. ಎಲ್ಲವೂ ಚೆನ್ನಾಗಿದೆ ಎನ್ನುವಾಗ, ಚುನಾವಣೆ ಇನ್ನೇನು ಮೂರು ತಿಂಗಳು ಎನ್ನುವಷ್ಟರಲ್ಲಿ ತೀರಿಹೋದರು. ಜನಕ್ಕೆ ಅರಸು ಬೇಕು ಎನ್ನುವ ಸಮಯಕ್ಕೆ ಸರಿಯಾಗಿ ಮಾಯವಾದರಲ್ಲ, ಅದೇ ನಮ್ಮ ದುಃಖ. ಕೆಲವರಿಗೆ ಯೋಗ್ಯತೆ ಇರುತ್ತೆ, ಯೋಗ ಇರಲ್ಲ. ಕೆಲವರಿಗೆ ಯೋಗ ಇರುತ್ತೆ, ಯೋಗ್ಯತೆ ಇರುವುದಿಲ್ಲ. ಅಪ್ಪಾಜಿಗೆ ಎರಡೂ ಇತ್ತು ಆಯುಷ್ಯವಿರಲಿಲ್ಲ.
ಅಪ್ಪಾಜಿ ಅಂದರೆ ಸಾಗರ
ಅಪ್ಪಾಜಿಯದು ಅಪರೂಪದ ಅಸಾಮಾನ್ಯ ವ್ಯಕ್ತಿತ್ವ. ಸಾಮಾನ್ಯರಲ್ಲಿ ಸಾಮಾನ್ಯರು, ರಾಜರಲ್ಲಿ ರಾಜರು. ಆಲ್‌ವೇಸ್ ಪಾಸಿಟಿವ್, ನೆಗಟಿವ್ ಯೋಚನೆ ಮಾಡಿದ್ದೇ ಇಲ್ಲ. ದೊಡ್ಡತನ, ಧಾರಾಳತನ. ಅದು ಈ ಕಾಲಕ್ಕೆ ದಡ್ಡತನದಂತೆ ಕಾಣಬಹುದು. ಅವರಿಂದಲೇ ರಾಜಕಾರಣಕ್ಕೆ ಬಂದವರು ತಿರುಗಿ ನೋಡದಿದ್ದಾಗ, ‘‘ನಾನು ಕಾರ್ಖಾನೆ, ತಯಾರು ಮಾಡುತ್ತಲೇ ಇರುತ್ತೇನೆ’’ ಎಂದಿದ್ದರು. ನನ್ನ ಪ್ರಕಾರ ಅಪ್ಪಾಜಿ ಸಾಗರವಿದ್ದಂತೆ. ಸಾಗರದೊಡಲಲ್ಲಿ ಏನುಂಟು, ಏನಿಲ್ಲ? ದೊಡ್ಡ ಹಡಗಿರಲಿ, ಚಿಕ್ಕ ತೆಪ್ಪವಿರಲಿ, ಎರಡನ್ನೂ ತನ್ನ ಮೇಲೆ ತೇಲಲು ಬಿಡುತ್ತದೆ. ದಡ ಸೇರಿಸುತ್ತದೆ. ಹಾಗೆಯೇ ನಮ್ಮ ತಂದೆ, ಬಲಾಢ್ಯರಾಗಲಿ, ಬಡವರಾಗಲಿ ಎಲ್ಲರನ್ನು ತಬ್ಬಿದರು, ಎಲ್ಲರೂ ಚೆನ್ನಾಗಿರಲಿ ಎಂದು ಆಶಿಸಿದರು.
ನನಗೆ ಇನ್ನೊಂದು ಜನ್ಮ ಅಂತ ಇದ್ದರೆ ಮತ್ತೆ ನಮ್ಮ ತಂದೆ-ತಾಯಿಗೆ ಮಗಳಾಗಿ ಹುಟ್ಟಬೇಕು ಎನ್ನುವುದು ನನ್ನ ಆಸೆ. ಅಂತಹ ೀಮಂತ ವ್ಯಕ್ತಿಗೆ ಮಗಳಾಗಿ ಹುಟ್ಟುವುದು ನಿಜಕ್ಕೂ ನನ್ನ ಪುಣ್ಯ.
ಭಾರತಿ ಅರಸು