ರೂಮಿಯ ಬೆನ್ನಿಗೆ ಬಂದವರು ಹಾಫಿಝ್ ಶೀರಾಝಿ
ಹಾಫಿಝ್ ಶೀರಾಝಿ
ಯಾವುದೇ ಕಾಲ ಅಥವಾ ಸಮಾಜದಲ್ಲಿ ರೂಮಿಯಂಥ ಅಪ್ರತಿಮ ಮಹಿಮೆಯ ವ್ಯಕ್ತಿಗಳು ತಲೆ ಎತ್ತಿದಾಗ ಅದರಿಂದ ಉಂಟಾಗುವ ಒಂದು ಭಾಗಶಃ ಪರಿಣಾಮವೇನೆಂದರೆ ಅವರ ಆಸು ಪಾಸಿನಲ್ಲಿ ಹುಟ್ಟಿ ಬೆಳೆದವರು ಎಷ್ಟೇ ಎತ್ತರಕ್ಕೆ ಬೆಳೆದರೂ ತೀರಾ ಕುಬ್ಜರಾಗಿ ಕಾಣಿಸುತ್ತಾರೆ. ರೂಮಿಯವರ ಪ್ರಭಾವವು ಹಲವು ಶತಮಾನಗಳು ಉರುಳಿದರೂ ಮಾಸಿಹೋಗದಷ್ಟು ಗಾಢವಾಗಿದ್ದರಿಂದ ಈ ಕುಬ್ಜತೆಯ ಸವಾಲು ಅವರ ಸನಿಹ ಕಾಲದ ಹಲವು ದೈತ್ಯ ಪ್ರತಿಭೆಗಳನ್ನು ಬಹುಕಾಲ ಕಾಡಿದೆ. ಆದರೆ ಇದಕ್ಕೆ ಅಪವಾದವಾಗಿರುವ ವ್ಯಕ್ತಿತ್ವ ‘ಹಾಫಿಝ್’ ಎಂಬ ಕಾವ್ಯನಾಮದಿಂದ ಜಗತ್ತಿಗೆ ಪರಿಚಿತರಾಗಿರುವ ಶಂಸುದ್ದೀನ್ ಶೀರಾಝಿಯವರದ್ದು.
ಕ್ರಿ.ಶ. ಹದಿಮೂರನೆಯ ಶತಮಾನದಲ್ಲಿ ಜಲಾಲುದ್ದೀನ್ ರೂಮಿಯಯವರು ತಮ್ಮ ಅಪೂರ್ವ ಶೈಲಿಯ ಪರಮಾರ್ಥ ಸಂಪನ್ನ ಕಾವ್ಯದ ಮೂಲಕ ಪರ್ಶಿಯನ್ ಭಾಷಿಗರ ಪಾಲಿಗೆ ಒಂದು ಹೊಸ ವಿಶಾಲ, ಕುತೂಹಲಕಾರಿ ಪ್ರಪಂಚದ ಬಾಗಿಲುಗಳನ್ನು ತೆರೆದು ಕೊಟ್ಟರು. ರೂಮಿಗೆ ಸಾಟಿಯಾಗಬಲ್ಲವರು ಇನ್ನು ಈ ಜಗತ್ತಿನಲ್ಲಿ ಹುಟ್ಟಲಿಕ್ಕಿಲ್ಲ ಎಂದು ಜನರು ಆಡಿಕೊಳ್ಳುತ್ತಿದ್ದಂತೆಯೇ ಹದಿನಾಲ್ಕನೆ ಶತಮಾನದಲ್ಲಿ, ಕಾವ್ಯ ಪ್ರಿಯರ ನಾಡಾದ ಇರಾನ್‌ನಲ್ಲಿ ಪ್ರೇಮ, ಆತ್ಮ ಹಾಗೂ ಪರಮಾರ್ಥದ ಕ್ಷೇತ್ರದ ಇನ್ನೊಬ್ಬ ದಿಗ್ಗಜನ ಉಗಮವಾಯಿತು. ಅವರ ಹೆಸರು ಖ್ವಾಜಾ ಶಂಸುದ್ದೀನ್ ಹಾಫಿಝ್ ಶೀರಾಝಿ. ಯಾವುದೇ ಕಾಲ ಅಥವಾ ಸಮಾಜದಲ್ಲಿ ರೂಮಿಯಂಥ ಅಪ್ರತಿಮ ಮಹಿಮೆಯ ವ್ಯಕ್ತಿಗಳು ತಲೆ ಎತ್ತಿದಾಗ ಅದರಿಂದ ಉಂಟಾಗುವ ಒಂದು ಭಾಗಶಃ ಪರಿಣಾಮವೇನೆಂದರೆ ಅವರ ಆಸು ಪಾಸಿನಲ್ಲಿ ಹುಟ್ಟಿ ಬೆಳೆದವರು ಎಷ್ಟೇ ಎತ್ತರಕ್ಕೆ ಬೆಳೆದರೂ ತೀರಾ ಕುಬ್ಜರಾಗಿ ಕಾಣಿಸುತ್ತಾರೆ.
ರೂಮಿಯವರ ಪ್ರಭಾವವು ಹಲವು ಶತಮಾನಗಳು ಉರುಳಿದರೂ ಮಾಸಿಹೋಗದಷ್ಟು ಗಾಢವಾಗಿದ್ದರಿಂದ ಈ ಕುಬ್ಜತೆಯ ಸವಾಲು ಅವರ ಸನಿಹ ಕಾಲದ ಹಲವು ದೈತ್ಯ ಪ್ರತಿಭೆಗಳನ್ನು ಬಹುಕಾಲ ಕಾಡಿದೆ. ಆದರೆ ಇದಕ್ಕೆ ಅಪವಾದವಾಗಿರುವ ವ್ಯಕ್ತಿತ್ವ ‘ಹಾಫಿಝ್’ ಎಂಬ ಕಾವ್ಯನಾಮದಿಂದ ಜಗತ್ತಿಗೆ ಪರಿಚಿತರಾಗಿರುವ ಶಂಸುದ್ದೀನ್ ಶೀರಾಝಿಯವರದ್ದು. ಹಾಫಿಝ್ ಶೀರಾಝಿಯವರ ಕೃತಿಗಳು ಕ್ರಿ.ಶ. ಹದಿನಾಲ್ಕನೆ ಶತಮಾನ ಹಾಗೂ ಅದರ ಅನಂತರದ ಪರ್ಶಿಯನ್ ಭಾಷೆ, ಸಾಹಿತ್ಯ, ಸಂಗೀತ ಮತ್ತು ವೈಚಾರಿಕ ಜಗತ್ತನ್ನು ಅಸಾಮಾನ್ಯ ಪ್ರಮಾಣದಲ್ಲಿ ಸಂಪನ್ನಗೊಳಿಸಿದವು. ಸಾಮಾನ್ಯವಾಗಿ, ತೀರಾ ಸೀಮಿತ ಆಳ ಹಾಗೂ ವ್ಯಾಪ್ತಿ ಇರುವ ಯಾವುದಾದರೂ ಕೃತಿಯ ಕುರಿತು ಖಚಿತವಾಗಿ ಇದುವೇ ಇದರ ಆಶಯ ಎಂದು ನಿಷ್ಕರ್ಷಿಸಲು ಸಾಧ್ಯವಾಗುತ್ತದೆ. ಆದರೆ ಹಾಫಿಝ್‌ರ ಕಾವ್ಯದ ಆಶಯಗಳು ಇಂದಿನವರೆಗೂ ಅಂತಹ ಸರಳ ನಿಷ್ಕರ್ಷೆಗಳ ಪರಿಯನ್ನು ಮೀರಿ ನಿಂತಿವೆ. ಅವರ ಕೃತಿಗಳ ಕುರಿತು ಚರ್ಚೆ ಸಂವಾದಗಳು ಮತ್ತು ಗೋಷ್ಠಿಗಳು ಇಂದು ಕೂಡಾ ಅಲ್ಲಲ್ಲಿ ನಡೆಯುತ್ತಿವೆ. ಹೊಸ ಚಿಂತನ-ಮಂಥನಗಳು ಮತ್ತು ಹೊಸ ಸಂಶೋಧನೆಗಳು ಅವರ ವಿಚಾರ ಧಾರೆಯ ವಿನೂತನ ಹಾಗೂ ಸಂಕೀರ್ಣ ಆಯಾಮಗಳನ್ನು ಅನಾವರಣ ಗೊಳಿಸುತ್ತಲೇ ಇವೆ.
ರೂಮಿಯವರ ಪ್ರಭಾವದ ನೆರಳಲ್ಲೇ ಬಾನೆತ್ತರಕ್ಕೆ ಬೆಳೆದ ಹಾಫಿಝ್ ಅವರು ರೂಮಿಯಂತೆ ಇಪ್ಪತ್ತನೆ ಹಾಗೂ ಇಪ್ಪತ್ತೊಂದನೆ ಶತಮಾನದ ವರೆಗಿನ ಪೂರ್ವ-ಪಶ್ಚಿಮಗಳ ಬುದ್ಧಿ ಹಾಗೂ ಮನಸ್ಸುಗಳ ಮೇಲೆ ಪ್ರಭಾವ ಬೀರಿದವರು. ಯುರೋಪಿನಲ್ಲಿ ನವೋದಯದ ಪರ್ವ ಮುಗಿಯುವಷ್ಟರ ಹೊತ್ತಿಗೆ ರೂಮಿಯಂತೆ ಹಾಫಿಝ್‌ರ ಸಾಹಿತ್ಯ ಸಂಪತ್ತು ಕೂಡಾ ಇಂಗ್ಲಿಷ್ ಮತ್ತು ಇತರ ಹಲವು ಯುರೋಪಿಯನ್ ಭಾಷೆಗಳಿಗೆ ಅನುವಾದಗೊಂಡಿತ್ತು. ಹದಿನೆಂಟನೆ ಶತಮಾನದ ಖ್ಯಾತ ಜರ್ಮನ್ ಸಾಹಿತಿ ಗೋಯೆಥೆ, ಹಾಫಿಝ್‌ರಿಂದ ಎಷ್ಟು ಪ್ರಭಾವಿತರಾಗಿದ್ದರೆಂದರೆ ಅವರನ್ನು ತಮ್ಮ ಅವಳಿ ಸಹೋದರ ಎಂದು ಗುರುತಿಸಿದ್ದರು. ಹತ್ತೊಂಬತ್ತನೆ ಶತಮಾನದಲ್ಲಿ ಜರ್ಮನಿಯ ನೀಟ್ಶೆ ಮತ್ತು ಅಮೆರಿಕದ ಎಮರ್ಸನ್ ಮುಂತಾದ ದಿಗ್ಗಜರು ಹಾಫಿಝ್‌ರ ಅಭಿಮಾನಿಗಳಾಗಿದ್ದರು. ನಮ್ಮದೇ ನೆಲದ ಮಹಾಕವಿ ರವೀಂದ್ರನಾಥ ಟಾಗೋರ್ ಇರಾನಿನ ಶೀರಾಝ್ ನಗರದಲ್ಲಿರುವ ಹಾಫಿಝ್ ಶೀರಾಝಿಯ ಸಮಾಯನ್ನು ಸಂದರ್ಶಿಸಿ ತಮ್ಮ ಗೌರವ ಸಲ್ಲಿಸಿದ್ದರು. ಹಾಫಿಝ್ ಸೃಷ್ಟಿಸಿದ ಕಾವ್ಯವು ವಿದ್ವಾಂಸರು ಮತ್ತು ಬುದ್ಧಿ ಜೀವಿಗಳ ಕಪಾಟುಗಳಲ್ಲಿ ದನವಾಗದೆ 21ನೆ ಶತಮಾನದಲ್ಲೂ ಸಾಮಾನ್ಯ ಪರ್ಶಿಯನ್ ಭಾಷಿಗರ ದೈನಂದಿನ ಸಂಗಾತಿಯಾಗಿ ಉಳಿದಿದೆ. ಹಾಫಿಝ್‌ರ ಕಾವ್ಯದ ಪದಗಳಾಗಲಿ ಆಶಯಗಳಾಗಲಿ ಶೇಖ್ ಸಅದಿಯವರ ‘ಗುಲಿಸ್ತಾನ್’ ಅಥವಾ ‘ಬೂಸ್ತಾನ್’ಗಳಷ್ಟು ಸರಳವೇನಲ್ಲ. ಆದರೂ ಪರ್ಶಿಯನ್ ಭಾಷೆ ಬಲ್ಲ ಜನ ಸಾಮಾನ್ಯರ ಮನಸ್ಸುಗಳನ್ನು ತಲುಪುವಲ್ಲಿ ಅವರು ಭಾರೀ ಯಶಸ್ಸು ಸಾಸಿದ್ದಾರೆ.
ಇಂದು ಕೂಡಾ ಇರಾನ್, ಅ್ಘಾನಿಸ್ತಾನ್, ಉಜ್ಬೆಕಿಸ್ತಾನ್ ಮುಂತಾದೆಡೆ ಜನರು ತಮ್ಮ ನಿತ್ಯದ ಸಂಭಾಷಣೆಗಳಲ್ಲಿ ಹಾಫಿಝ್ ಅವರ ಕಾವ್ಯದ ತುಣುಕುಗಳನ್ನು ಉದ್ಧರಿಸುವ ಮೂಲಕ ತಮ್ಮ ವಾದಗಳಿಗೆ ಬಲ ಹಾಗೂ ತಮ್ಮ ಅಭಿವ್ಯಕ್ತಿಗೆ ಬಣ್ಣ ತುಂಬುತ್ತಾರೆ. ವಿದ್ವಾಂಸರು, ಸಾಹಿತಿಗಳು ಮತ್ತು ಬುದ್ಧಿ ಜೀವಿಗಳ ಪಾಲಿಗಂತೂ ಹಾಫಿಝ್ ಒಂದು ಅಕ್ಷಯ ಪಾತ್ರೆಯಂತಿದ್ದಾರೆ. ಅವರ ಯಾವ ನುಡಿಗೆ ಯಾವ ವ್ಯಾಖ್ಯಾನ ಒಗ್ಗುತ್ತದೆ? ಯಾವುದನ್ನು ಅಕ್ಷರಶಃ ಸ್ವೀಕರಿಸಬೇಕು ಮತ್ತು ಯಾವುದನ್ನು ಸೂಚ್ಯವೆಂದು ಪರಿಗಣಿಸಬೇಕು? ಹಾಫಿಝ್ ಬೆಳೆಸಿದ್ದು ಜಾಗೃತಿಯನ್ನೋ ಉನ್ಮಾದವನ್ನೋ? ಅವರು ಧರ್ಮದ ಸಮರ್ಥಕರೋ ವಿಮರ್ಶಕರೋ? ಅವರು ಸಂಪ್ರದಾಯ ನಿಷ್ಠರೋ ಬಂಡುಕೋರರೋ? ಅವರ ವ್ಯಂಗ್ಯದ ಗುರಿ ಕೇವಲ ಪುರೋಹಿತರೋ ಅಥವಾ ಪುರೋಹಿತರು ಪ್ರತಿನಿಸುವ ಸಂಪ್ರದಾಯಗಳೋ? ಇವೇ ಮುಂತಾದ ಪ್ರಶ್ನೆಗಳ ಕುರಿತು ಇಂದಿಗೂ ನಿತ್ಯ ಚರ್ಚೆ, ವಾದ ಹಾಗೂ ವಿವಾದಗಳು ನಡೆಯುತ್ತಿವೆ. ಅವರ ‘ದೀವಾನ್’ ಅನ್ನು ಹಲವರು ಪವಿತ್ರ ಧರ್ಮ ಗ್ರಂಥವೆಂಬಂತೆ ಗೌರವಿಸುತ್ತಾರೆ. ಅದನ್ನು ಜಾತಕದ ವಸ್ತುವಾಗಿ ಬಳಸುವವರೂ ಇದ್ದಾರೆ. ‘‘ಇಶ್ಕ್ ಆಸಾನ್ ನಮೂದ್ ಅವ್ವಲ್ ವಲೇ ಉ್ತಾದ್ ಮುಶ್ಕಿಲ್ ಹಾ’’ (ಆರಂಭದಲ್ಲಿ ಪ್ರೇಮವು ಬಹಳ ಸುಲಭವಾಗಿ ಕಾಣಿಸುತ್ತದೆ. ಆದರೆ ಅದರೊಳಗೆ ಬಿದ್ದು ಬಿಟ್ಟರೆ ಮತ್ತೆ ಕಷ್ಟವೇ ಗತಿ) ಎಂಬಂತಹ ಹಾಫಿಝ್‌ರ ಗಝಲ್‌ನ ಪದಗಳು ಪರ್ಶಿಯನ್ ಭಾಷೆಯ ಅತ್ಯಂತ ಜನಪ್ರಿಯ ನಾಣ್ಣುಡಿಗಳ ಸಾಲಿಗೆ ಸೇರಿವೆ. ಸೂಫಿಗಳ ವಲಯದಲ್ಲಿ ಹಾಫಿಝ್‌ರಿಗೆ ವಿಶೇಷ ಮನ್ನಣೆ ಇದೆ. ಕೆಲವು ಸೂಫಿ ಪಂಥಗಳಲ್ಲಿ ಅವರನ್ನು ಸಂತರ ಸಾಲಲ್ಲಿ ಗಣಿಸಲಾಗುತ್ತದೆ.
ಹಾಫಿಝ್‌ರ ಕೃತಿಗಳ ಐತಿಹಾಸಿಕ ನಿಖರತೆಯ ಕುರಿತಂತೆ ಒಂದಷ್ಟು ಗೊಂದಲಗಳಿವೆ. ವಿರಕ್ತ ಸ್ವಭಾವದ ಹಾಫಿಝ್ ತಮ್ಮ ಕೃತಿಗಳನ್ನು ಸಂರಕ್ಷಿಸುವ ಕುರಿತಂತೆ ವಿಶೇಷ ಮುತುವರ್ಜಿ ವಹಿಸಿರಲಿಲ್ಲ. ಆದ್ದರಿಂದ ಅವರ ನಂತರದ ಪೀಳಿಗೆಗಳಲ್ಲಿ ಹಲವರು, ಯಾರು ಯಾರದೋ ಕೃತಿಗಳನ್ನು ಹಾಫಿಝ್ ಅವರ ಕೃತಿಗಳ ಜೊತೆ ಬೆರೆಸಿ ಮಾರುಕಟ್ಟೆಗೆ ಇಳಿಸಿದರು. ಮೂಲತಃ ಅವರು ರಚಿಸಿದ ಗಝಲ್‌ಗಳ ಸಂಖ್ಯೆ ಸುಮಾರು ಐನೂರರಷ್ಟಿದ್ದರೂ ಒಟ್ಟು ಎಂಟು ನೂರಕ್ಕೂ ಅಕ ಗಝಲ್‌ಗಳು ಅವರ ಹೆಸರಲ್ಲಿ ಚಲಾವಣೆಗೆ ಬಂದವು. ಆದರೆ ಈ ಆಟ ಹೆಚ್ಚು ಕಾಲವೇನೂ ನಡೆಯಲಿಲ್ಲ. ಹಾಫಿಝ್‌ರ ಪದ ಸಂಪನ್ನತೆ ಹಾಗೂ ಅವರ ಅನನ್ಯ ಶೈಲಿಯ ಪರಿಚಯ ಉಳ್ಳವರು ಜಳ್ಳನ್ನು ಕಾಳಿನಿಂದ ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಕಳೆದ ಏಳು ಶತಮಾನಗಳ ಅವಯಲ್ಲಿ ಹಾಫಿಝ್ ಶೀರಾಝಿಯ ವ್ಯಕ್ತಿತ್ವ ಮತ್ತು ಚಾರಿತ್ರ್ಯದ ಸುತ್ತ ವದಂತಿಗಳ ಒಂದು ಬೃಹತ್ ಕಾನನವೇ ಬೆಳೆದಿದೆ. ಅವರು ಶಾಖ್ ಎ ನಬಾತ್ ಎಂಬ ಶ್ರೀಮಂತ ಹೆಣ್ಣುಮಗಳ ಸೌಂದರ್ಯಕ್ಕೆ ಮನಸೋತಿದ್ದರು ಮತ್ತು ಅವರ ಹೆಚ್ಚಿನ ಸೃಜನಶೀಲತೆಯು ಆ ಪ್ರೇಮದ ಗುಂಗಿನ ಲವಾಗಿತ್ತು ಎಂಬ ಐತಿಹ್ಯಗಳಿವೆ.
ಹಾಗೆಯೇ ಅವರ ಕಾವ್ಯದಲ್ಲಿ ಹೆಜ್ಜೆ ಹೆಜ್ಜೆಗೂ ಎದುರಾಗುವ ಮದಿರೆ, ಮದಿರೆ ಕುಡಿಯಲು ಬಳಸುವ ಲೋಟೆ, ಮದಿರೆ ಸಂಗ್ರಹಿಸುವ ಮದಿರಾ ಪಾತ್ರೆ, ಮದಿರೆ ಸುರಿದು ಕೊಡುವಾತ, ಮದಿರೆ ಸೇವಿಸಲಿಕ್ಕೆಂದೇ ಜಮಾಯಿಸಿದ ಮದಿರಾಭಿಮಾನಿಗಳ ಕೂಟ ಇತ್ಯಾದಿಗಳ ಪ್ರಸ್ತಾಪವು ಅವರೊಬ್ಬ ಮದ್ಯ ವ್ಯಸನಿಯಾಗಿದ್ದರು ಎಂಬ ದೂಷಣೆಗೆ ಕಾರಣವಾಗಿದೆ. ಹಾಗೆಯೇ ತಮ್ಮ ಕಾಲದ ಧರ್ಮದ ಗುತ್ತಿಗೆದಾರರ, ವಿದ್ವಾಂಸರ, ಪುರೋಹಿತರ ಮತ್ತು ಉಪದೇಶಕರ ವಿರುದ್ಧ ಅವರು ಸಿಡಿಸಿರುವ ಬಂಡಾಯದ ತುಪಾಕಿಗಳು ಅವರೊಬ್ಬ ನಾಸ್ತಿಕರಾಗಿದ್ದರು, ಧರ್ಮದ್ರೋಹಿಯಾಗಿದ್ದರು ಎಂಬಿತ್ಯಾದಿ ನಿಂದನೆಗಳಿಗೆ ಸಬೂಬಾಗಿದೆ. ಆದರೆ ಸಂಪ್ರದಾಯಸ್ಥ ವಿದ್ವಾಂಸರಲ್ಲೇ ಒಂದು ಗಣ್ಯ ವರ್ಗವು ಹಾಫಿಝ್‌ರ ಕಾವ್ಯದಲ್ಲಿ ಆಕ್ಷೇಪಕ್ಕೆ ತುತ್ತಾಗಿರುವ ಅಂಶಗಳನ್ನು, ಅವೆಲ್ಲಾ ಗಾಢವಾದ ಆಧ್ಯಾತ್ಮಿಕ ಹಾಗೂ ಪಾರಮಾರ್ಥಿಕ ಅರ್ಥವುಳ್ಳ ಸಾಂಕೇತಿಕ ಹಾಗೂ ಮಾರ್ಮಿಕ ಪದಗಳು ಎಂದು ಸಮರ್ಥಿಸಿದ್ದು, ಹಾಫಿಝ್ ಅವರ ಕೃತಿಗಳಲ್ಲಿ ಕಾಣಿಸಿಕೊಳ್ಳುವ ಪ್ರೀತಿ, ಪ್ರಿಯತಮೆ, ಮದಿರೆ, ಅಮಲು ಇತ್ಯಾದಿ ಯಾವುದನ್ನೂ ಕೇವಲ ಶಬ್ದಾರ್ಥ ಪ್ರಕಾರ ಅರ್ಥೈಸುವವರನ್ನು ಮೂರ್ಖರೆಂದು ಟೀಕಿಸಿದ್ದಾರೆ. ಉಪ ಭೂ ಖಂಡದ ಮಹಾ ವಿದ್ವಾಂಸ ಹಝ್ರತ್ ಅಶ್ರ್ ಅಲಿ ಥಾನವಿ ಅವರು ಹಾಫಿಝ್ ಅವರ ಅಭಿಮಾನಿಯಾಗಿದ್ದರು. ಅವರು ಹಾಫಿಝ್ ರ ಸಾಲುಗಳನ್ನು ಅಲ್ಲಲ್ಲಿ ಉಲ್ಲೇಖಿಸಿ ಅವುಗಳನ್ನು ತಮ್ಮದೇ ಶೈಲಿಯಲ್ಲಿ ಉರ್ದು ಭಾಷೆಗೆ ಅನುವಾದಿಸಿರುವುದು ಮಾತ್ರವಲ್ಲ, ಅವುಗಳಿಗೆ ಸವಿಸ್ತಾರ ಭಾಷ್ಯವನ್ನೂ ಬರೆದಿದ್ದಾರೆ. ಈ ರೀತಿ ದೀವಾನ್ ಹಾಗೂ ಅದಕ್ಕೆ ವಿದ್ವಾಂಸರು ಬರೆದಿರುವ ಭಾಷ್ಯಗಳು ವಿವಿಧ ಕಾಲಗಳಲ್ಲಿ ಮತ್ತು ಬೇರೆ ಬೇರೆ ದೇಶಗಳಲ್ಲಿ ಮದ್ರಸಾಗಳ ಪಟ್ಯದ ಭಾಗವಾಗಿದ್ದೂ ಇದೆ.
ಹಾಫಿಝ್‌ರ ಬಾಲ್ಯ ಹಾಗೂ ಯೌವನದ ಬದುಕನ್ನು ನೋಡಿದರೆ ಅಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮಿಕತೆಯ ಛಾಪು ಬಹಳ ಗಹನವಾಗಿದೆ. ಅರಬಿ ಮತ್ತು ಪರ್ಶಿಯನ್ ಭಾಷೆಗಳಲ್ಲಿ ಹಾಫಿಝ್ ಎಂದರೆ ರಕ್ಷಕ ಎಂದರ್ಥ. ಸಾಮಾನ್ಯವಾಗಿ ಕುರ್‌ಆನ್ ಗ್ರಂಥವನ್ನು ಕಂಠ ಪಾಠ ಮಾಡಿಕೊಂಡು ಅದನ್ನು ತಮ್ಮ ನೆನಪಿನ ಗೂಡಿನಲ್ಲಿ ಸಂರಕ್ಷಿಸಿಟ್ಟವರನ್ನು ಹಾಫಿಝ್ ಎಂದು ಕರೆಯುತ್ತಾರೆ. ಹಾಫಿಝ್ ಶೀರಾಝಿಯ ತಂದೆ ಕುರ್‌ಆನಿನ ಪಂಡಿತರಾಗಿದ್ದರು. ಅನುಪಮ ಸ್ಮರಣ ಶಕ್ತಿ ಇದ್ದ ಹಾಫಿಝ್ ಬಾಲ್ಯದಲ್ಲಿ ತಮ್ಮ ತಂದೆ ಕುರ್‌ಆನ್ ಓದುವುದನ್ನು ಕೇವಲ ಆಲಿಸಿ ಅದನ್ನು ಸಂಪೂರ್ಣ ಕಂಠ ಪಾಠ ಮಾಡಿಕೊಂಡಿದ್ದರು. ಅವರು ಕುರ್‌ಆನ್ ಗ್ರಂಥವನ್ನು ಏಳು ವಿಭಿನ್ನ ಶೈಲಿ ಗಳಲ್ಲಿ ಸುಶ್ರಾವ್ಯವಾಗಿ ಓದುತ್ತಿದ್ದರು. ಯೌವನದಲ್ಲಿ, ಮದ್ರಸಾದಲ್ಲಿ ಕುರ್‌ಆನ್ ಕಲಿಸುವ ಶಿಕ್ಷಕರಾಗಿಯೂ ಅವರು ದುಡಿದಿದ್ದರು.ಪಾರ್ಸಿ ಅಥವಾ ಪರ್ಶಿಯನ್ ಭಾಷೆ ಮಾತ್ರವಲ್ಲದೆ ಅರಬಿ ಹಾಗೂ ತುರ್ಕಿ ಭಾಷೆಗಳಲ್ಲೂ ಅವರಿಗೆ ಸಾಕಷ್ಟು ಪಾಂಡಿತ್ಯವಿತ್ತು. ಅವರ ಹಲವು ಗಝಲ್ ಗಳಲ್ಲಿ ಕುರ್‌ಆನ್ ಅಥವಾ ಹದೀಸ್ ಮೂಲದ ಮತ್ತು ಇತರ ಅರಬಿ ಪದಗಳನ್ನು ಬಳಸಿರುವುದು ಕಾಣಸಿಗುತ್ತದೆ.
ಜಲಾಲುದ್ದೀನ್ ರೂಮಿ
ಕೆಲವೆಡೆ ದ್ವಿಪದಿಗಳ ಮೊದಲ ಅಥವಾ ಕೊನೆಯ ಒಂದಿಡೀ ಸಾಲು ಅರಬಿ ಭಾಷೆಯಲ್ಲಿರುತ್ತದೆ. ಕಾವ್ಯದಲ್ಲಿ ಇಷ್ಟೊಂದು ಸೊಗಸಾಗಿ ಎರಡು ಭಿನ್ನ ಭಾಷೆಗಳನ್ನು ವಿಲೀನಗೊಳಿಸುವ ಕಲೆಯಲ್ಲಿ ಹಾಫಿಝ್ ರಂತಹ ಪ್ರಾವೀಣ್ಯ ಮೆರೆಯಲು ಬೇರಾರಿಗೂ ಸಾಧ್ಯವಾಗಿಲ್ಲ. ಹಾಫಿಝ್ ಅವರ ಕೆಲವು ಆಯ್ದ ಸಾಲುಗಳು ಇಲ್ಲಿವೆ: ತರೀಖತ್ ಬೆಜುಝ್ ಖಿದ್ಮತ್ ಎ ಖಲ್ಖ್ ನೀಸ್ತ್: ಬೆ ತಸ್ಬೀಹ್ ಒ ಸಜ್ಜಾದ ಒ ದಿಲಖ್ ನೀಸ್ತ್
(ಪರಮಾರ್ಥದ ಹಾದಿಯ ಸಾಧಕನಿಗೆ ಜನಸೇವೆ ಬಿಟ್ಟರೆ ಬೇರೆ ದಾರಿ ಇಲ್ಲ. ಮಣಿಗಳನ್ನುರುಳಿಸಿ ಉಚ್ಚರಿಸುವ ಮಂತ್ರಗಳಾಗಲಿ, ಪ್ರಾರ್ಥನೆಯ ಹಾಸಾಗಲಿ, ಸಾಧಕರು ತೊಡುವ ಉಡುಗೆಯಾಗಲಿ ಯವುದೂ ದಾರಿಗಳಲ್ಲ.)
ಬಹ್ರೇಸ್ತ್ ಬಹ್ರೆ ಇಶ್ಕ್, ಕೆ ಬೆ ಹೇಚಶ್ ಕಿನಾರ ನೀಸ್ತ್ : ಆನ್ ಜಾ ಬಜುಝ್ ಈಂಕೆ ಜಾನ್ ಬೆಸಿಪಾರಂದ್ ಚಾರ ನೀಸ್ತ್
(ಪ್ರೇಮದ ಕಡಲೇ ನಿಜವಾದ ಕಡಲು, ಏಕೆಂದರೆ ಅದಕ್ಕೆ ದಡವೆಂಬುದೇ ಇಲ್ಲ : ಅಲ್ಲಿ ಜೀವವನ್ನೇ ಅರ್ಪಿಸಿ ಬಿಡುವುದ ಬಿಟ್ಟರೆ ಬೇರೆ ದಾರಿ ಇಲ್ಲ.)
ಹುಝೂರೀ ಗರ್ ಹಮೀ ಖ್ವಾಹೀ ಎಝೂ ಘಾಫಿಲ್ ಮೆಶೋ ಹಾಫಿಝ್: ಮತಾ ಮಾ ತಲ್ಖ ಮನ್ ತಹ್ವಾ ದಯಿದ್ದುನ್ಯಾ ವ ಅಹ್ಮಿಲ್ ಹಾ (ನಿನಗೆ ಸಾನ್ನಿಧ್ಯ ಬೇಕಿದ್ದರೆ ಅವನನ್ನೆಂದೂ ಮರೆಯ ಬೇಡ, ನೀನು ಅಪೇಕ್ಷಿಸುತ್ತಿರುವಾತನು ನಿನಗೆ ಸಿಕ್ಕಿ ಬಿಟ್ಟರೆ, ಈ ಲೋಕವನ್ನು ತ್ಯಜಿಸು ಮತ್ತು ಅದರಿಂದ ದೂರ ಹೊರಟು ಹೋಗು)
ಇಲ್ಲಿ ಮೊದಲ ಸಾಲು ಪಾರ್ಸಿ ಭಾಷೆಯಲ್ಲಿದ್ದರೆ ಎರಡನೆಯ ಸಾಲು ಅರಬಿ ಭಾಷೆಯಲ್ಲಿದೆ.
ಶಬ್ ಎ ತಾರೀಕ್ ಒ ಬೀಮ್ ಎ ಮೌಜ್ ಒ ಗರ್ದಾಬ್ ಎ ಚುನೀನ್ ಹಾಯಿಲ್: ಕುಜಾ ದಾನಂದ್ ಹಾಲ್ ಎ ಮಾ ಸುಬುಕ್ ಸಾರಾನ್ ಎ ಸಾಹಿಲ್ ಹಾ (ಇರುಳಿನ ಕಾರ್ಗತ್ತಲು, ಹೆದ್ದೆರೆಗಳ ಭೀತಿ ಮತ್ತು ಸುಳಿಯ ಅಪಾಯ: ದಡದಲ್ಲಿ ವಿಶ್ರಮಿಸುತ್ತಿರುವವರಿಗೆ ಹೇಗೆ ತಾನೇ ಅರ್ಥವಾದೀತು ನನ್ನ ಸನ್ನಿವೇಶ?)
ದೂರಸ್ತ್ ಸರೆ ಆಬ್ ಎಝ್ ಈನ್ ಬಾದಿಯೆ ಹುಶ್ಯಾರ್: ತಾ ಘೌಲ್ ಎ ಬಿಯಾಬಾನ್ ಬೆ ರೇಬದ್ ಬೆ ಸರಾಬತ್
(ನೀನು ತುಂಬಾ ಎಚ್ಚರ ಪಾಲಿಸಬೇಕು, ನೀರಿನ ಸೆಲೆ ಈ ಮರುಭೂಮಿಯಿಂದ ತುಂಬಾ ದೂರವಿದೆ: ಮರೀಚಿಕೆಯು ನಿನ್ನನ್ನು ವಂಚಿಸದಿರಲಿ.)
ಸಲಾಹ್ ಎ ಕಾರ್ ಕುಜಾ ಒ ಮನ್ ಖೆರಾಬ್ ಕುಜಾ: ಬೆಬೀನ್ ತೆಾಉತೆ ರೆಹ್ ಕೆಝ್ ಕುಜಾಸ್ತ್ ತಾ ಕುಜಾ !
(ಸುಧಾರಣೆ ಎಲ್ಲಿ, ಹಾಳಾದ ನಾನೆಲ್ಲಿ? ಸಮ್ಮ ನಡುವಣ ಅಂತರ ಎಷ್ಟೊಂದು ದೀರ್ಘವಾಗಿದೆ ಎಂಬುದನ್ನು ನೋಡು.)
ಖೆರಾರ್ ಒ ಖ್ವಾಬ್ ಝೆ ಹಾಫಿಝ್ ತುಮಾ ಮೆದಾರ್ ಎಯ್ ದೋಸ್ತ್, ಖೆರಾರ್ ಚೀಸ್ತ್, ಸೆಬೂರಿ ಕುದಾಮ್ ಒ ಖ್ವಾಬ್ ಕುಜಾ?
(ಓ ನನ್ನ ಮಿತ್ರ! ಹಾಫಿಝ್‌ನಿಂದ ವಿಶ್ರಾಂತಿ ಮತ್ತು ನಿದ್ದೆಯನ್ನು ನಿರೀಕ್ಷಿಸಬೇಡ. ಎಲ್ಲಿಯ ವಿಶ್ರಾಂತಿ? ಎಂತಹ ಸಹನೆ? ನಿದ್ದೆ ಎಲ್ಲಿಯದು ?) ತಾ ದರ್ ರಹೆ ಪೀರೀ ಬೆ ಚೆ ಆಯೀನ್ ರವೀ ಅಯೆ ದಿಲ್ : ಬಾರೇ ಬೆ ಘಲತ್ ಸೆರ್ ಶುದ್ ಅಯ್ಯೆಮೆ ಶಬಾಬತ್
(ಓ ಮನಸ್ಸೇ, ವಾರ್ಧಕ್ಯದಲ್ಲಿ ನೀನು ಯಾವ ದಾರಿಯಲ್ಲಿ ನಡೆಯುವೆ ಎಂಬುದನ್ನು ಕಾದು ನೋಡೋಣ: ನಿನ್ನ ಯವ್ವನದ ಯುಗವಂತೂ ಅನಾಚಾರಗಳಲ್ಲೇ ಕಳೆದು ಹೋಯಿತು.)
ದೆರ್ ಖೆರಾಬಾತ್ ಎ ಮುಘಾನ್ ನೂರ್ ಎ ಖುದಾ ಮೀ ಬೀನಮ್: ಈನ್ ಎಜಬ್ ಬೀನ್ ಕೆ ಚೆ ನೂರೇ ವ ಝೆ ಕೊಜಾ ಮೀ ಬೀನಮ್
(ಮುಘಾನ್ ಎಂಬಲ್ಲಿನ ಮದಿರಾಲಯದಲ್ಲಿ ನಾನು ದೇವರ ಬೆಳಕನ್ನು ನೋಡಿದೆ: ಇದೆಷ್ಟು ವಿಚಿತ್ರವಾಗಿದೆ ಎಂಬುದನ್ನು ನೋಡಿರಿ, ನಾನು ನೋಡಿದ್ದು ಯಾರ ಬೆಳಕನ್ನು ಮತ್ತು ನಾನು ಅದನ್ನು ನೋಡಿದ್ದು ಅದೆಂತಹ ಸ್ಥಳದಲ್ಲಿ!) ಜಲ್ವೆ ಬೆರ್ ಮೆನ್ ಮೆ್ರೆೆಶ್ ಅಯೆ ಮಲಿಕುಲ್ ಹಾಜ್ ಕೆ ತೂ: ಖಾನ ಮೀ ಬೀನೀ ವ ಮನ್ ಖಾನ ಇ ಖುದಾ ಮೀ ಬೀನಮ್
(ಹಜ್ಜ್ ಯಾತ್ರಿಕರ ಮಾನ್ಯ ನಾಯಕರೇ ನನ್ನ ಮುಂದೆ ನಿಮ್ಮ ಮಹಿಮೆ ಪ್ರದರ್ಶಿಸಬೇಡಿ: ನೀವು ಕಂಡಿರುವುದು ಕೇವಲ ಆಲಯವನ್ನು-ಅಂದರೆ, ಮಕ್ಕಾದಲ್ಲಿರುವ ಕಅಬಾ ಮಸೀದಿಯನ್ನು- ಮಾತ್ರ, ನಾನಂತು ಆಲಯದ ಒಡೆಯನನ್ನು ಕಂಡಿದ್ದೇನೆ)
ಸೆಖುನ್ ಖ್ವಾನೀ ವ ಖುಶ್ ಖ್ವಾನೀ ನೆಮೀ ವೆರ್ಝಂದ್ ದೆರ್ ಶೀರಾಝ್: ಬೆಯಾ ಹಾಫಿಝಾ ಕೆ ತಾ ಖುದ್ ರಾ ಬೆ ಮುಲ್ಕೆ ದೀಗರ್ ಅಂದಾಝೇಮ್
(ಇದೀಗ ಶೀರಾಝ್‌ನಲ್ಲಿ ಶ್ರೇಷ್ಠ ಕಾವ್ಯಕ್ಕಾಗಲಿ ಶ್ರೇಷ್ಠ ಹಾಡಿಗಾಗಲಿ ಅನುಮತಿ ಇಲ್ಲ, ಹಾಫಿಝ್, ನೀನು ಬಾ, ನಾವು ಬೇರೊಂದು ನಾಡಿಗೆ ಹೊರಟು ಹೋಗೋಣ.)
ಹಸದ್ ಚೆ ಮೀ ಬರೀ ಅಯ್ ಸುಸ್ತ್ ನಝಮ್ ಬೆರ್ ಹಾಫಿಝ್: ಖುಬೂಲೆ ಖಾತಿರ್ ಒ ಲುತ್ ಎ ಸಖುನ್ ಖುದಾ ದಾದ್ ಅಸ್ತ್.
(ಕಳಪೆ ಸಾಹಿತ್ಯ ರಚಿಸುವವರೇ, ಹಾಫಿಝ್ ಬಗ್ಗೆ ಯಾಕೆ ಮತ್ಸರ ಪಡುತ್ತೀರಿ? ಜನಪ್ರಿಯತೆ ಮತ್ತು ಸವಿಯಾದ ಮಾತುಗಾರಿಕೆ ದೇವ ದತ್ತ ವಾಗಿರುತ್ತದೆ.)