ಪರ್ಯಾಯ ನೀರಿನ ಮೂಲಗಳನ್ನು ಅಭಿವೃದ್ಧಿಪಡಿಸಿ
ಮಾನ್ಯರೆ,
ಎತ್ತಿನಹೊಳೆ ತಿರುವು ಯೋಜನೆ ಮೂಲಕ 24 ಟಿಎಂಸಿ ನೀರು ಪಡೆದು ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರು ಹರಿಸುವ ಉದ್ದೇಶ ಸರಕಾರದ್ದು. ಆದರೆ 13 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿದರೂ ಈ ನಾಲ್ಕು ಜಿಲ್ಲೆಗಳಿಗೆ ನೀರು ಪೂರೈಸಲು ಕಷ್ಟವೆಂದು ಸ್ವತಹ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಟಿ.ವಿ. ರಾಮಚಂದ್ರ ನೇತೃತ್ವದ ಸಮಿತಿ ಹೇಳಿದೆ. ಹೀಗಾಗಿ ಸರಕಾರ ತೆಗೆದುಕೊಂಡಿರುವ ನಿರ್ಧಾರ ಲೋಪದಿಂದ ಕೂಡಿದೆ ಎಂಬುದು ಮೇಲ್ನೋಟಕ್ಕೆ ಬಹಿರಂಗವಾಗಿದೆ.
13 ಸಾವಿರ ಕೋಟಿ ರೂ. ಖರ್ಚು ಮಾಡಿದರೂ ಸಿಗುವುದು ಕೇವಲ 9.05 ಟಿಎಂಸಿ ನೀರು. ಹಾಗಾದರೆ ಸರಕಾರ ಉಳಿದ 14.95 ಟಿಎಂಸಿ ನೀರನ್ನು ಎಲ್ಲಿಂದ ತರುತ್ತೆ..? ಈ ಪ್ರಶ್ನೆಗೆ ಸರಕಾರ ಉತ್ತರ ನೀಡಬೇಕು. ಹೀಗೆ ಕೋಟಿ ಕೋಟಿ ರೂ. ಖರ್ಚು ಮಾಡಿ ವಿವಾದ ಸೃಷ್ಟಿಸಿ ಜಿಲ್ಲೆಗಳ ಮಧ್ಯೆ ಮನಸ್ತಾಪವುಂಟು ಮಾಡುವ ಬದಲು ನಾಲ್ಕು ಜಿಲ್ಲೆಗಳಲ್ಲಿರುವ ಪರ್ಯಾಯ ನೀರಿನ ಮೂಲಗಳನ್ನು ಅಭಿವೃದ್ಧಿಪಡಿಸಲು ಯಾಕೆ ಸರಕಾರ ಮುಂದಾಗುತ್ತಿಲ್ಲ..?