ಎಟಿಎಂ ಬಳಕೆ: ಏನು ಮಾಡಬೇಕು? ಏನು ಮಾಡಬಾರದು?

Update: 2016-10-23 05:26 GMT

ಮಾಲ್ವೇರ್ ವೈರಸ್ ಹಾಕಿದ ಎಟಿಎಂ ಭದ್ರತಾ ಸಮಸ್ಯೆಯಿಂದಾಗಿ ಭಾರತದ ಹಲವು ಬ್ಯಾಂಕ್‌ಗಳ ಸುಮಾರು 3.2 ದಶಲಕ್ಷ ಡೆಬಿಟ್ ಕಾರ್ಡುಗಳು ಈಗ ಸಮಸ್ಯೆಯಲ್ಲಿದೆ. ಭಾರತದ ಅತೀ ದೊಡ್ಡ ಕಮರ್ಶಿಯಲ್ ಬ್ಯಾಂಕ್ ಎಸ್‌ಬಿಐ 6 ಲಕ್ಷ ಡೆಬಿಟ್ ಕಾರ್ಡ್‌ಗಳನ್ನು ಭದ್ರತಾ ಸಮಸ್ಯೆಯಿಂದಾಗಿ ಬ್ಲಾಕ್ ಮಾಡಿದೆ ಎಂದು ಹೇಳಿರುವ ಕಾರಣ ಈ ವಿಷಯ ಬೆಳಕಿಗೆ ಬಂದಿದೆ. ಕಾರ್ಡ್ ನೆಟ್‌ವರ್ಕ್ ಕಂಪೆನಿಗಳಾದ ಎನ್‌ಪಿಸಿಐ, ಮಾಸ್ಟರ್‌ಕಾರ್ಡ್ ಮತ್ತು ವೀಸಾಗಳು ಭಾರತದಲ್ಲಿ ಭದ್ರತೆ ಸಮಸ್ಯೆ ಇರುವ ಬಗ್ಗೆ ಸುದ್ದಿ ನೀಡಿದ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಎಸ್‌ಬಿಐ ಈ ಕ್ರಮ ಕೈಗೊಂಡಿದೆ.

ಈ ವಿಷಯ ಕೇವಲ ಎಸ್‌ಬಿಐಗೆ ಮಾತ್ರವಲ್ಲ, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ಗಳಿಗೂ ಸೈಬರ್ ದಾಳಿಯ ಭಯ ಆವರಿಸಿದೆ. ಹೀಗೆ ಭದ್ರತೆ ಸಮಸ್ಯೆ ಹೇಗಾಗುತ್ತದೆ ಮತ್ತು ಆದಲ್ಲಿ ಏನು ಮಾಡಬಹುದು ಎನ್ನುವ ವಿವರ ಇಲ್ಲಿದೆ.

ಕೀಪ್ಯಾಡ್ ಜ್ಯಾಮಿಂಗ್

ವಂಚಕರು ಎಂಟರ್ ಮತ್ತು ಕ್ಯಾನ್ಸಲ್ ಬಟನ್‌ಗಳನ್ನು ಅಂಟಿನಲ್ಲಿ ಜ್ಯಾಂ ಮಾಡುತ್ತಾರೆ ಮತ್ತು ಪಿನ್ ಅಥವಾ ಬ್ಲೇಡನ್ನು ಬಟನ್ಸ್ ತುದಿಯಲ್ಲಿ ತೂರಿಸುತ್ತಾರೆ. ಗ್ರಾಹಕ ಪಿನ್ ಎಂಟರ್/ ಒಕೆ ಮಾಡುವಾಗ ಅದು ಒಕೆ ಆಗುವುದಿಲ್ಲ. ಯಂತ್ರ ಕೆಲಸ ಮಾಡುವುದಿಲ್ಲ ಎಂದು ಕ್ಯಾನ್ಸಲ್ ಕೊಡಲು ಹೋಗುತ್ತಾರೆ ಮತ್ತು ಹಣ ಬರುವುದಿಲ್ಲ. ಹಲವು ಪ್ರಕರಣದಲ್ಲಿ ಗ್ರಾಹಕ ತಕ್ಷಣವೇ ಹೊರ ಹೋದಾಗ ವಂಚಕ ಅದನ್ನು ಬದಲಿಸುತ್ತಾನೆ. ಕಾರ್ಡ್ ಹೋಲ್ಡರ್‌ಗೆ ಆದ ನಷ್ಟವೆಂದರೆ ಒಂದು ವಿತ್‌ಡ್ರಾವಲ್ ಮಾತ್ರ ಆಗಿರುತ್ತದೆ. ಏಕೆಂದರೆ ಕಾರ್ಡನ್ನು ಮತ್ತೆ ಸ್ವೈಪ್ ಮಾಡದೆ ಪಿನ್ ಅನ್ನು ಒಮ್ಮೆ ಮಾತ್ರ ಮರಳಿ ಹಾಕಬಹುದು. ಹಣ ವಿತ್‌ಡ್ರಾ ಮಾಡಲು ಅಪರಿಚಿತರ ನೆರವು ಕೇಳಬೇಡಿ. ಪೂರ್ಣ ವ್ಯವಹಾರ ಆಗದೆ ಎಟಿಎಂ ಬಾಕ್ಸ್ ಬಿಡಬೇಡಿ. ಅಂತಹ ವಂಚನೆಗೆ ಬ್ಯಾಂಕ್ ಜವಾಬ್ದಾರರಾಗುವುದಿಲ್ಲ.

ಕಾರ್ಡು ಅದಲಿಬದಲಿ

ಕೆಲವೊಮ್ಮೆ ಗ್ರಾಹಕ ಡೆಬಿಟ್ ಕಾರ್ಡ್ ಅನ್ನು ಬಳಸಿದಾಗ ವಂಚಕ ಪಿನ್ ಅನ್ನು ಗುರುತಿಸುತ್ತಾನೆ. ಕಾರ್ಡ್ ಮರಳಿಸಿ ಅಂತಹುದೇ ನಕಲಿ ಬಳಸುತ್ತಾನೆ. ಕಾರ್ಡ್ ಇದ್ದವರು ಅದನ್ನು ಬ್ಲಾಕ್ ಮಾಡುವವರೆಗೂ ಹೀಗೆ ನಗದು ತೆಗೆಯುತ್ತಾ ಇರಬಹುದು. ತಮ್ಮ ಕಾರ್ಡನ್ನು ಬೇರೆಯವರ ಕೈಗೆ ಕೊಡದಂತೆ ಬ್ಯಾಂಕ್‌ಗಳು ಸದಾ ಹೇಳುತ್ತವೆ. ಮಾರಾಟದ ಮಳಿಗೆಗಳಲ್ಲಿ ಪಿನ್ ನೀವೇ ಹಾಕಬೇಕೇ ವಿನಾ ವ್ಯಾಪಾರಿಗೆ ಹೇಳಿಬಿಡಬೇಡಿ. ಸ್ಕಿಮ್ಮಿಂಗ್

ಇದು ಬಹಳ ಅತ್ಯಾಧುನಿಕ ವಂಚನೆ. ಒಂದು ಸಣ್ಣ ಸ್ಕಿಮ್ಮಿಂಗ್ ವಿನ್ಯಾಸವನ್ನು ಎಟಿಎಂ ಡೆಬಿಟ್ ಕಾರ್ಡ್ ಸ್ಲಾಟ್‌ನಲ್ಲಿ ಇಡಲಾಗುತ್ತದೆ. ಅದು ಕಾರ್ಡ್‌ನ ಮ್ಯಾಗ್ನೆಟಿಕ್ ಟೇಪ್ ನಲ್ಲಿರುವ ಮಾಹಿತಿ ಓದುತ್ತದೆ. ಮಾಹಿತಿ ಒಮ್ಮೆ ನಕಲಾದಲ್ಲಿ ಯಾವುದೇ ಕಾರ್ಡಲ್ಲೂ ಬೇಕಾದರೂ ಅದನ್ನು ಹಾಕಿ ಹಣ ತೆಗೆಯಬಹುದು. ಗ್ರಾಹಕರ ಪಿನ್ ಅನ್ನು ಎಟಿಎಂ ಕಿಯೋಸ್ಕ್‌ನಲ್ಲಿಟ್ಟ ಸಣ್ಣ ಕ್ಯಾಮರಾ ಗಳಿಂದ ಪಡೆಯಲಾಗುತ್ತದೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್‌ಗಳು ಗ್ರಾಹಕರ ನಷ್ಟ ಭರಿಸುತ್ತವೆ. ಆದರೆ ಹಣ ಮೊದಲ ಸಲ ಕಳೆದು ಹೋದಾಗಲೇ ಗ್ರಾಹಕರು ಬ್ಯಾಂಕಿಗೆ ದೂರು ನೀಡಬೇಕು.

ಡೆಬಿಟ್ ಕಾರ್ಡು ಬಳಸುವಾಗ ಗಮನವಿರಲಿ...

ನಿಮ್ಮ ಪಿನ್ ಯಾರೂ ನೋಡದಂತೆ ಜಾಗ್ರತೆವಹಿಸಿ

ವ್ಯವಹಾರ ಮುಗಿದು ಸ್ಕ್ರೀನ್ ಮೇಲೆ ಸ್ವಾಗತ ಎಂದು ಡಿಸ್ಪ್‌ಲೇ ಆಗುವವರೆಗೂ ಕಾಯಿರಿ.

ಬ್ಯಾಂಕ್ ಬಳಿ ನಿಮ್ಮ ಈಗಿನ ಮೊಬೈಲ್ ಸಂಖ್ಯೆ ಇದ್ದು, ವ್ಯವಹಾರ ಅಲರ್ಟ್ ಸಂದೇಶ ಬರುವುದನ್ನು ಖಚಿತಪಡಿಸಿ.

ಎಟಿಎಂ ಸುತ್ತ ಸಂಶಯಾತ್ಮಕವಾಗಿ ಓಡಾಡುವ ಅಪರಿಚಿತರ ಬಗ್ಗೆ ಎಚ್ಚರವಾಗಿರಿ.

ವ್ಯಾಪಾರಿಗೆ ಖರೀದಿಗಾಗಿ ಕೊಟ್ಟಿರುವ ಕಾರ್ಡ್ ಮರಳಿ ಪಡೆಯುವಾಗ ನಿಮ್ಮದೇ ಎಂದು ಖಾತರಿಪಡಿಸಿಕೊಳ್ಳಿ

ಎಟಿಎಂನಲ್ಲಿ ಹೆಚ್ಚುವರಿ ಡಿವೈಸ್‌ಗಳಿವೆಯೇ ಎಂದು ಗಮನಿಸಿ

ನಿಮ್ಮ ಎಟಿಎಂ/ಡೆಬಿಟ್ ಕಾರ್ಡ್ ಕದ್ದು ಹೋದಲ್ಲಿ ಅಥವಾ ಕಳೆದು ಹೋದಲ್ಲಿ ತಕ್ಷಣ ಬ್ಯಾಂಕಿಗೆ ಮಾಹಿತಿ ಕೊಡಿ. ಅದರಲ್ಲಿ ನೀವು ಅಥವಾ ಇತರರ ವ್ಯವಹಾರ ಕಂಡಲ್ಲಿ ಅಥವಾ ಕಾಣದಿದ್ದರೂ ಹೀಗೆ ಮಾಡಿ.

ವ್ಯವಹಾರ ಅಲರ್ಟ್ ಎಸ್‌ಎಂಎಸ್‌ಗಳು ಮತ್ತು ಬ್ಯಾಂಕ್ ಹೇಳಿಕೆಗಳನ್ನು ಆಗಾಗ್ಗೆ ಪರೀಕ್ಷಿಸಿ

ಹೀಗೆ ಮಾಡಬೇಡಿ...

ನಿಮ್ಮ ಪಿನ್ ಅನ್ನು ಕಾರ್ಡ್ ಮೇಲೆ ಬರೀಬೇಡಿ. ಅದನ್ನು ನೆನಪಿಟ್ಟುಕೊಳ್ಳಿ

ಅಪರಿಚಿತರ ಸಹಾಯವನ್ನು ಪಡೆಯಬೇಡಿ ಅಥವಾ ಅವರಿಗೆ ನಿಮ್ಮ ಕಾರ್ಡು ಕೊಡಬೇಡಿ.

ನಿಮ್ಮ ಪಿನ್ ಯಾರಿಗೂ ಕೊಡಬೇಡಿ. ಬ್ಯಾಂಕ್ ಉದ್ಯೋಗಿ ಮತ್ತು ಕುಟುಂಬದ ಸದಸ್ಯರಿಗೂ ಕೊಡಬೇಡಿ.

ಕಾರ್ಡನ್ನು ನಿಮ್ಮ ಗಮನದಿಂದ ದೂರ ಹೋಗಲು ಬಿಡಬೇಡಿ.

ವ್ಯವಹರಿಸುವಾಗ ಮೊಬೈಲ್‌ನಲ್ಲಿ ಮಾತನಾಡಬೇಡಿ, ಅದು ನಿಮ್ಮ ಗಮನವನ್ನು ಬೇರೆಡೆಗೆ ಚಲಿಸುವಂತೆ ಮಾಡುತ್ತದೆ.

ಕೃಪೆ: http://indianexpress.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News