ಸಾರಿಗೆ ನಿಯಮ ಉಲ್ಲಂಘನೆ ನಿರಂತರ!
ಮಾನ್ಯರೆ,
ಬೆಂಗಳೂರಿನಲ್ಲಿ ಯಾವ ರೀತಿ ಜನದಟ್ಟಣೆ ಇದೆಯೋ, ಅದೇ ರೀತಿ ಸಂಚಾರ ದಟ್ಟಣೆ ಸಾಮಾನ್ಯ. ಹೀಗಾಗಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಕೂಡಾ ಇತ್ತೀಚೆಗೆ ಹೆಚ್ಚಾಗುತ್ತಿದೆ.
ಬೆಂಗಳೂರಿನ ಬನಶಂಕರಿ, ಕನಕಪುರ ರಸ್ತೆ, ರಿಂಗ್ ರಸ್ತೆಗಳಲ್ಲಿ ಅನಧಿಕೃತ ಖಾಸಗಿ ಬಸ್‌ಗಳ ಸಂಚಾರ ಹೆಚ್ಚಾಗಿದೆ. ಈ ವಿಷಯ ಅರಿತ ಸಾರಿಗೆ ಇಲಾಖೆಯ ಅಧಿಕಾರಿಗಳು ಮೊನ್ನೆ 10 ಖಾಸಗಿ ಬಸ್‌ಗಳನ್ನು ಜಪ್ತಿ ಮಾಡಿದ್ದರು. ಇಷ್ಟಕ್ಕೆ ಈ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಮುಕ್ತಿ ಸಿಕ್ಕಿಲ್ಲ. ಪದೇ ಪದೇ ಬಸ್ ಮಾಲಕರು, ಚಾಲಕರು ನಿಯಮ ಉಲ್ಲಂಘಿಸುತ್ತಿದ್ದಾರೆ. ದಿನಾಲೂ ಐವತ್ತಕ್ಕಿಂತ ಹೆಚ್ಚು ಬಸ್‌ಗಳು ನಿಯಮ ಉಲ್ಲಂಘಿಸುತ್ತಿವೆೆ ಎಂಬ ಆರೋಪ ಇದೆ.
ಪ್ರತಿದಿನ ಬೆಂಗಳೂರಿನಲ್ಲಿ ಸಾವಿರಾರು ಬಸ್‌ಗಳು ಓಡಾಡುತ್ತವೆ. ಕೆಲವು ಬಸ್‌ಗಳಿಗೆ ಪರವಾನಿಗೆಯೇ ಇಲ್ಲ. ಇವುಗಳ ಬಗ್ಗೆ ಸಾರಿಗೆ ಇಲಾಖೆಗೆ ಮಾಹಿತಿ ಇಲ್ಲವೇ..? ಅಲ್ಲದೆ ಬಿಎಂಟಿಸಿ ಸೇರಿ ಕೆಲ ಖಾಸಗಿ ಬಸ್‌ಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿದೆ. ಈ ಮೂಲಕ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಲಾಗುತ್ತಿದೆ. ಕೂಡಲೇ ಸಾರಿಗೆ ಇಲಾಖೆ ಇದಕ್ಕೆ ಕಡಿವಾಣ ಹಾಕಬೇಕಾಗಿದೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.