ವಿವಿಧ ಮತದಾನೋತ್ತರದ ಸಮೀಕ್ಷೆಗಳಲ್ಲಿ ಮೋದಿ ಮೇಲುಗೈ

Update: 2017-03-09 15:22 GMT

ಹೊಸದಿಲ್ಲಿ,ಮಾ.9: ಪಂಚರಾಜ್ಯ ವಿಧಾನಸಭಾ ಚುನಾವಣೆಗಳ ಬಹುನಿರೀಕ್ಷಿತ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶಗಳು ಗುರುವಾರ ಹೊರಬಿದ್ದಿವೆ. ಹೆಚ್ಚಿನ ಸಮೀಕ್ಷೆಗಳು ಉತ್ತರ ಪ್ರದೇಶ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಏಕೈಕ ಅತಿ ದೊಡ್ಡಪಕ್ಷವಾಗಿ ಹೊರಹೊಮ್ಮಬಹುದು ಎಂದು ಭವಿಷ್ಯ ನುಡಿದಿವೆ.

ಆರು ಸಮೀಕ್ಷೆಗಳ ಪೈಕಿ ನಾಲ್ಕು ಉತ್ತರಪ್ರದೇಶದಲ್ಲಿ ಬಿಜೆಪಿಯು 403 ಸದಸ್ಯಬಲದ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತಕ್ಕೆ ಅಗತ್ಯವಿರುವ 202 ಸ್ಥಾನಗಳ ಸಮೀಪ ನಿಲ್ಲುವುದರೊಡನೆ ಏಕೈಕ ಅತಿ ದೊಡ್ಡ ಪಕ್ಷವಾಗಿ ಮೂಡಿ ಬರಲಿದೆ ಎಂದು ಹೇಳಿವೆ.ಎಲ್ಲ ಐದೂ ರಾಜ್ಯಗಳ ಚುನಾವಣೆಗಳ ಅಧಿಕೃತ ಫಲಿತಾಂಶಗಳು ಮಾ.11ರಂದು ಪ್ರಕಟಗೊಳ್ಳಲಿವೆ.

ಪಂಜಾಬ್‌ನಲ್ಲಿ ಆಡಳಿತ ಶಿರೋಮಣಿ ಅಕಾಲಿದಳ-ಬಿಜೆಪಿ ಮೈತ್ರಿಕೂಟವು ಪರಾಭವವನ್ನಪ್ಪಲಿದೆ ಎಂದು ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ಒಮ್ಮತದ ತೀರ್ಪು ನೀಡಿವೆ. ಆದರೆ ಕಾಂಗ್ರೆಸ್ ಅಥವಾ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಚುನಾವಣಾ ಕಣಕ್ಕಿಳಿದಿರುವ ಆಮ್ ಆದ್ಮಿ ಪಾರ್ಟಿ ಮುಂದಿನ ಸರಕಾರ ರಚನೆ ಮಾಡಲಿವೆಯೇ ಎಂಬ ಬಗ್ಗೆ ಸಮೀಕ್ಷೆಗಳು ವಿಭಿನ್ನ ಅಭಿಪ್ರಾಯಗಳನ್ನು ನೀಡಿವೆ.

ಎರಡು ಸಮೀಕ್ಷೆಗಳು ಕಾಂಗ್ರೆಸ್ ಮತ್ತು ಆಪ್ ನಡುವೆ ಕತ್ತುಕತ್ತಿನ ಪೈಪೋಟಿ ನಡೆಯಲಿದೆ ಎಂದಿದ್ದರೆ, ಇತರ ಎರಡು ಸಮೀಕ್ಷೆಗಳು ಉಭಯ ಪಕ್ಷಗಳ ನಡುವೆ ಹಂಚಿ ಹೋಗಿವೆ. ಪಂಜಾಬ್ ವಿಧಾನಸಭೆ 117 ಸ್ಥಾನಗಳನ್ನು ಹೊಂದಿದ್ದು, ಅಧಿಕಾರಕ್ಕೇರಲು ಕನಿಷ್ಠ 59 ಸದಸ್ಯರ ಅಗತ್ಯವಿದೆ.

ಉತ್ತರಾಖಂಡದಲ್ಲಿ ಬಿಜೆಪಿಯು ಕಾಂಗ್ರೆಸ್‌ನಿಂದ ಅಧಿಕಾರ ಕಿತ್ತುಕೊಳ್ಳುವಂತೆ ಕಂಡು ಬರುತ್ತಿದೆ. ನಾಲ್ಕು ಸಮೀಕ್ಷೆಗಳ ಪೈಕಿ ಮೂರು ಬಿಜೆಪಿಗೆ ಸ್ಪಷ್ಟ ಬಹುಮತವನ್ನು ನೀಡಿವೆ .ಒಂದು ಚುನಾವಣೋತ್ತರ ಸಮೀಕ್ಷೆಯು ಮಾತ್ರ ನಿಕಟ ಹಣಾಹಣಿಯ ಸಂಕೇತ ನೀಡಿದೆ. ಉತ್ತರಾಖಂಡ ವಿಧಾನಸಭೆಯು 70 ಸದಸ್ಯಬಲವನ್ನು ಹೊಂದಿದೆ.

ಗೋವಾದಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದು ಎರಡು ಸಮೀಕ್ಷೆಗಳು ತಿಳಿಸಿವೆ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಸ್ಪರ್ಧಿಸಿರುವ ಆಪ್ 40 ಸದಸ್ಯಬಲದ ವಿಧಾನಸಭೆಯಲ್ಲಿ ಎದ್ದುಕಾಣುವ ಯಾವುದೇ ಪ್ರಭಾವ ಬೀರುವಲ್ಲಿ ವಿಫಲಗೊಳ್ಳುವಂತೆ ಕಂಡು ಬರುತ್ತಿದೆ.

ಮಣಿಪುರಕ್ಕೆ ಸಂಬಂಧಿಸಿದಂತೆ ಇಂಡಿಯಾ ಟಿವಿ-ಸಿ ವೋಟರ್ ಸಮೀಕ್ಷೆಯಂತೆ ಕಾಂಗ್ರೆಸ್ ಪಕ್ಷವು ಅಧಿಕಾರವನ್ನು ಕಳೆದುಕೊಳ್ಳುವ ದಾರಿಯಲ್ಲಿದೆ. 60 ಸದಸ್ಯಬಲದ ವಿಧಾನಸಭೆಯಲ್ಲಿ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಮೂಡಿಬರಲಿದೆ ಎನ್ನುತ್ತಿದೆ ಸಮೀಕ್ಷೆ.

ಮತದಾನದ ಫಲಿತಾಂಶ ಶನಿವಾರ ಪ್ರಕಟಗೊಳ್ಳಲಿದೆ.  ಸಮೀಕ್ಷೆಯಲ್ಲಿ ತಿಳಿದು ಬಂದ ಫಲಿತಾಂಶ ವಿವರ  ಇಂತಿವೆ.

ಉತ್ತರ ಪ್ರದೇಶ : ಒಟ್ಟು ಸ್ಥಾನ 403

ನ್ಯೂಸ್ ಎಕ್ಸ್ ಎಂಅರ್ ಸಿ

ಬಿಜೆಪಿ                    185

ಎಸ್ಪಿ&ಕಾಂಗ್ರೆಸ್      120

ಬಿಎಸ್ಪಿ                   090

ಇತರರು                008

,,,,,,,,,,,,

ಪಂಜಾಬ್ ಒಟ್ಟು ಸ್ಥಾನಗಳು: 117

ಪಕ್ಷ                       ಸಿ-ವೋಟರ್            ನ್ಯೂಸ್ ಎಕ್ಸ್ ಎಂಆರ್ ಸಿ   ಟುಡೇಸ್ ಚಾಣಕ್ಯ

ಆಮ್ ಆದ್ಮೀ           63                         55                                  54

ಕಾಂಗ್ರೆಸ್               45                         55                                  54

ಆಕಾಲಿ ದಳ            09                         07                                  09

,,,

ಉತ್ತರಾಖಂಡ:  ಒಟ್ಟು ಸ್ಥಾನ        70

          ಸಿ-ವೋಟರ್           ನ್ಯೂಸ್ ಎಕ್ಸ್ –ಎಂಆರ್ ಸಿ                    ಟುಡೇಸ್ ಚಾಣಕ್ಯ

ಬಿಜೆಪಿ           32                         38                                            53

ಕಾಂಗ್ರೆಸ್      32                         30                                            15

ಇತರರು       06                         02                                            02

,,,,,,,,,,

ಗೋವಾ:  ಒಟ್ಟು ಸ್ಥಾನ40

          ಸಿ-ವೋಟರ್                        ನ್ಯೂಸ್ ಎಕ್ಸ್ –ಎಂಆರ್ ಸಿ          

ಬಿಜೆಪಿ           18                         15

ಕಾಂಗ್ರೆಸ್      15                         10

ಇತರರು       05                         08

ಆಮ್ ಆದ್ಮೀ  02                         07

,,,,,,,,

ಮಣಿಪುರ: ಒಟ್ಟು ಸ್ಥಾನ 60

           ಸಿ-ವೋಟರ್           

ಬಿಜೆಪಿ           28

ಕಾಂಗ್ರೆಸ್      20

ಇತರರು       12

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News