ದೇಶದ ಮೊತ್ತಮೊದಲ ಹವಾನಿಯಂತ್ರಿತ ರೈಲು ಆ್ಯಂಬುಲೆನ್ಸ್ ಆರಂಭ
Update: 2017-03-10 17:54 GMT
ಮುಂಬೈ, ಮಾ.10: ದೇಶದ ಮೊತ್ತಮೊದಲ ಹವಾನಿಯಂತ್ರಿತ ರೈಲು ಆ್ಯಂಬುಲೆನ್ಸ್ ಸೇವೆಯನ್ನು ಕೇಂದ್ರ ರೈಲ್ವೆ ಆರಂಭಿಸಿದೆ. ಅಪಘಾತ ಸಂದರ್ಭದಲ್ಲಿ ಗಾಯಾಳುಗಳ ಪಾಲಿನ ಗೋಲ್ಡನ್ ಅವರ್‌ನಲ್ಲಿ ಅವರ ರಕ್ಷಣೆಗೆ ಇದು ಧಾವಿಸಲಿದೆ.
ಒಂದು ಗಂಟೆ ಅಥವಾ ಮುಂಚಿತವಾಗಿ ಸೂಕ್ತ ಚಿಕಿತ್ಸೆ ದೊರೆತಲ್ಲಿ, ಅಪಘಾತಗಳಲ್ಲಿ ಗಾಯಗೊಂಡ ಸಂತ್ರಸ್ತರು ಬದುಕಿ ಉಳಿಯುವ ಸಾದ್ಯತೆ ಇದ್ದು, ಇದನ್ನು ಗೋಲ್ಡನ್ ಅವರ್ ಎಂದು ಪರಿಣಿಸಲಾಗುತ್ತದೆ. ಕಲ್ಯಾಣ್‌ನಲ್ಲಿ ಈ ರೈಲು ಆ್ಯಂಬುಲೆನ್ಸ್ ಲಭ್ಯವಿದ್ದು, ಹವಾನಿಯಂತ್ರಿಕ ಬೋಗಿಯನ್ನು ಆಧುನೀಕರಿಸಿ ಆಂಬುಲೆನ್ಸ್ ಆಗಿ ಪರಿವರ್ತಿಸಲಾಗಿದೆ.
ಇದು ಭಾರತೀಯ ರೈಲ್ವೆಯ ಮೊತ್ತಮೊದಲ ಸುಸಜ್ಜಿತ ಹಾಗೂ ಹವಾನಿಯಂತ್ರಿತ ವೈದ್ಯಕೀಯ ನೆರವು ವ್ಯಾನ್ ಆಗಿದ್ದು, ನಾಲ್ಕು ಬೋಗಿಗಳನ್ನು ಹೀಗೆ ಪರಿವರ್ತಿಸಲಾಗಿದೆ ಎಂದು ಕೇಂದ್ರ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ನರೇಂದ್ರ ಪಾಟೀಲ್ ವಿವರಿಸಿದ್ದಾರೆ.