ಸೋತವರು ಮನಸ್ಸು ಚಿಕ್ಕದು ಮಾಡಬೇಡಿ : ಮಮತಾ ಬ್ಯಾನರ್ಜಿ

Update: 2017-03-11 12:45 GMT

ಕೋಲ್ಕತಾ,ಮಾ.11: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಗೆದ್ದವರನ್ನು ಅಭಿನಂದಿಸಿದ್ದಾರೆ. ಮತ್ತು ಸೋತವರು ಮನಸ್ಸು ಚಿಕ್ಕದು ಮಾಡಿಕೊಳ್ಳಬೇಕಿಲ್ಲ ಎಂದು ಕಿವಿಮಾತನ್ನೂ ಹೇಳಿದ್ದಾರೆ.

ಹೀಗೆ ಹೇಳುವಾಗ ಅವರು ಯಾವುದೇ ಪಕ್ಷ ಅಥವಾ ನಾಯಕರ ಹೆಸರನ್ನು ಸೂಚಿಸಲಿಲ್ಲ. ಬ್ಯಾನರ್ಜಿ ಟ್ವೀಟ್ ಮಾಡಿ" ಬೇರೆ ಬೇರೆ ರಾಜ್ಯಗಳಲ್ಲಿ ಗೆದ್ದು ಬಂದವರಿಗೆ ಅಭಿನಂದನೆಗಳು, ಮತದಾರರು ತಾವಿಚ್ಛಿಸುವವರನ್ನು ಆಯ್ಕೆ ಮಾಡುವ ಸಂಕಲ್ಪ ತೊಟ್ಟಿದ್ದಾರೆ. ಅವರಿಗೆ ಅಭಿನಂದನೆಗಳು" ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಸೋತವರು ಕುಗ್ಗಬೇಕಿಲ್ಲ ಪ್ರಜಾಪ್ರಭುತ್ವದಲ್ಲಿ ಒಬ್ಬರು ಇನ್ನೊಬ್ಬರನ್ನು ಗೌರವಿಸಬೇಕಾಗಿದೆ. ಯಾಕೆಂದರೆ ಕೆಲವರು ಗೆಲ್ಲುತ್ತಾರೆ. ಕೆಲವರು ಸೋಲುಣ್ಣುತ್ತಾರೆ. ಜನರಲ್ಲಿ ಭರವಸೆ ಇರಿಸಬೇಕು.

ಮಮತಾ ಬ್ಯಾನರ್ಜಿ ಬಂಗಾಳದ ತೃಣಮೂಲ ಕಾಂಗ್ರೆಸ್‌ನ ಇಬ್ಬರು ಸಂಸದರನ್ನು ಚಿಟ್‌ಫಂಡ್ ಹಗರಣದಲ್ಲಿ ಸಿಬಿಐ ಬಂಧಿಸಿದ ನಂತರ ಮೋದಿ ಸರಕಾರದೊಂದಿಗೆ ನಿರಂತರ ಟೀಕಿಸುತ್ತಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News