ಬಸ್‌ಪ್ರಯಾಣಿಕನಲ್ಲಿ 50 ಲಕ್ಷರೂ. ಕಪ್ಪುಹಣ ಪತ್ತೆ, ಬಂಧನ

Update: 2017-03-12 12:19 GMT

ಕಲ್ಪಟ್ಟ,ಮಾ.12: ವಯನಾಡ್ ತೊಲ್‌ಪ್ಪೆಟ್ಟಿ ಎಂಬಲ್ಲಿ ಐವತ್ತು ಲಕ್ಷ ರೂಪಾಯಿ ಕಪ್ಪುಹಣವನ್ನು ಬಸ್‌ನಲ್ಲಿ ಕೊಂಡೊಯ್ಯುತ್ತಿದ್ದ ಪ್ರಯಾಣಿಕನನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ಕಲ್ಲಿಕೋಟೆ ಕೊಡುವಲ್ಲಿ ಅಬ್ದುಲ್ ರಝಾಕ್ ಬಂಧಿಸಲಾದ ಆರೋಪಿಯಾಗಿದ್ದಾನೆ.

ಬೆಂಗಳೂರಿನಿಂದ ಕಲ್ಪಟ್ಟಕ್ಕೆ ಹೋಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಆತ ಪ್ರಯಾಣಿಸುತ್ತಿದ್ದ ಎಂದು ತಿಳಿದು ಬಂದಿದೆ. ಬೆಳಗ್ಗಿನ ವೇಳೆ ಮೂರು ಗಂಟೆಗೆ ಬಸ್ ತೊಲ್ಪೆಟ್ಟಿ ತಪಾಸಣಾ ಕೇಂದ್ರಕ್ಕೆ ಬಂದಾಗ ನಡೆಸಲಾದ ತಪಾಸಣೆಯಲ್ಲಿ ಕಪ್ಪುಹಣ ಪತ್ತೆಯಾಗಿದೆ. ಈತನನ್ನು ನಂತರ ತಿರುನೆಲ್ಲಿ ಪೊಲೀಸರ ವಶಕ್ಕೆ ಹಸ್ತಾಂತರಿಸಿಲಾಯಿತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News