ಬಿಜೆಪಿ ಮರ ವಿಜಯದ ಹಣ್ಣುಗಳಿಂದ ತುಂಬಿ ಬಾಗತೊಡಗಿದೆ: ಪ್ರಧಾನಿ ನರೇಂದ್ರ ಮೋದಿ
ಹೊಸದಿಲ್ಲಿ, ಮಾ.12: ಬಿಜೆಪಿ ವಟವೃಕ್ಷದಂತೆ. ತುಂಬಾ ಹಣ್ಣು ಬಿಟ್ಟಾಗ ಮರ ಬಾಗಲು ಆರಂಭವಾಗುತ್ತದೆ. ಬಿಜೆಪಿಗೆ ಹಣ್ಣುಗಳು ಸಿಕ್ಕಿವೆ.ಬಿಜೆಪಿ ಮರ ಗೆಲುವಿನ ಹಣ್ಣುಗಳಿಂದ ಬಾಗತೊಡಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರಪ್ರದೇಶ ಹಾಗೂ ಉತ್ತರಾಖಂಡ್ ನಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಇಂದು ಸಂಜೆ ಹೊಸದಿಲ್ಲಿಯಲ್ಲಿ ವಿಜಯೋತ್ಸವ ಯಾತ್ರೆಯ ಬಳಿಕ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ನವ ಭಾರತ ನಿರ್ಮಾಣಕ್ಕೆ ಬುನಾದಿಯಾಗಲಿದೆ ಎಂದು ಅಭಿಪ್ರಾಯಪಟ್ಟರು..
ಜನರು ಕೇವಲ ಮತ ಹಾಕುವುದಕ್ಕೆ ಸೀಮಿತವಾಗುವುದು ಬೇಡ. ಅವರು ದೇಶದ ಅಭಿವೃದ್ಧಿ ಕಾರ್ಯದಲ್ಲಿ ಭಾಗಿಯಾಗಬೇಕು. ಕಳೆದ 50 ವರ್ಷಗಳಿಂದ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಭಾವನಾತ್ಮಕ ವಿಚಾರಗಳನ್ನೇ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದವು. . ಆದರೆ ಈ ಬಾರಿ ಯಾವ ಭಾವನಾತ್ಮಕ ಅಲೆ ಇಲ್ಲದೆಯೇ ಕೇವಲ ಅಭಿವೃದಿಗಾಗಿ ಬಿಜೆಪಿಗೆ ಅಭೂತಪೂರ್ವ ಜಯ ಸಿಕ್ಕಿದೆ ಎಂದರು.