ಬಹುಸಂಖ್ಯಾತ ವಾದದ ವಿರುದ್ಧ ಕಟ್ಟೆಚ್ಚರ ಅಗತ್ಯ : ಪ್ರಣವ್ ಮುಖರ್ಜಿ

Update: 2017-03-18 15:05 GMT

  ಪಣಜಿ,ಮಾ.12: ಬಹುಸಂಖ್ಯಾತವಾದದ ವಿರುದ್ಧ ಕಟ್ಟೆಚ್ಚರ ವಹಿಸುವ ಅಗತ್ಯವಿರುವುದಾಗಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಶುಕ್ರವಾರ ಒತ್ತಿ ಹೇಳಿದ್ದು, ಅಧಿಕಾರದಲ್ಲಿರುವವರು ಇಡೀ ದೇಶವನ್ನು ತಮ್ಮಿಂದಿಗೆ ಕೊಂಡೊಯ್ಯಬೇಕಾದ ಅಗತ್ಯವಿರುವುದಾಗಿ ಹೇಳಿದ್ದಾರೆ. ‘ಇಂಡಿಯಾಟುಡೆ ’ ಪತ್ರಿಕೆ ಮುಂಬೈಯಲ್ಲಿ ಶುಕ್ರವಾರ ಆಯೋಜಿಸಿದ ಸಮಾವೇಶದಲ್ಲಿ ಮಾತನಾಡಿದ ಮುಖರ್ಜಿ, ಸಂಸದೀಯ ಪ್ರಜಾಪ್ರಭುತ್ವದಲ್ಲಿ, ನಾವು ಯಾವತ್ತೂ ಬಹುಸಂಖ್ಯಾತವಾದದ ವಿರುದ್ಧ ಎಚ್ಚರವಹಿಸಬೇಕಾಗಿದೆ. ಅಧಿಕಾರದಲ್ಲಿರುವರು ಇಡೀ ದೇಶದ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಮುಂದಕ್ಕೊಯ್ಯಬೇಕಾಗುತ್ತದೆ’’ ಎಂದರು. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ಭರ್ಜರಿ ಗೆಲುವಿನ ಬಳಿಕ ಮೋದಿ ಮಾಡಿದ ಅಭಿನಂದನಾ ಭಾಷಣವನ್ನು ರಾಷ್ಟ್ರಪತಿ ಶ್ಲಾಘಿಸಿದರು. ‘‘ ವಿಧಾನಸಭಾ ಚುನಾವಣೆಗಳಲ್ಲಿ ಭರ್ಜರಿ ಗೆಲುವನ್ನು ಪಕ್ಷವು ವಿನಮ್ರತೆಯಿಂದ ಸ್ವೀಕರಿಸುವ ಅಗತ್ಯ ಬಗ್ಗೆ ಮೋದಿ ಮಾತನಾಡಿರುವುದಕ್ಕೆ ನನಗೆ ತುಂಬಾ ಸಂತಸವಾಗಿದೆ’’ೆ ಎಂದವರು ಹೇಳಿದ್ದಾರೆ.

ಚುನಾವಣಾ ಫಲಿತಾಂಶಗಳು ಬಹುಮತದ ಆಧಾರದಲ್ಲಿ ನಿರ್ಧರಿಸಲ್ಪಟ್ಟಿದ್ದರೆ, ಸರ್ವಮತದೊಂದಿಗೆ ರಾಜ್ಯಗಳ ಆಡಳಿತ ನಡೆಸುವ ಅಗತ್ಯವಿದೆ. ಇದು ನಿಜಕ್ಕೂ ಭಾರತದ ಪರಂಪರೆಯಾಗಿದೆ ಹಾಗೂ ಇದು ಕಾರ್ಯಗತಗೊಳ್ಳಬೇಕೆಂಬುದೇ ನಮ್ಮ ದೇಶದ ಬಹುತೇಕ ಜನರ ನಿರೀಕ್ಷೆಯಾಗಿದೆ ಎಂದರು.

 ಚರಣ್‌ಸಿಂಗ್‌ರಿಂದ ಹಿಡಿದು ಚಂದ್ರಶೇಖರ್‌ವರೆಗೆ, ಪ್ರತಿಯೊಬ್ಬರ ಸಂಸತ್ ಬಗ್ಗೆ ಅಗಾಧವಾದ ಅನುಭವವನ್ನು ಹೊಂದಿದವರಾಗಿದ್ದರು. ಆದರೆ ನೇರವಾಗಿ ರಾಜ್ಯ ಸರಕಾರ ಅನುಭವವಿದ್ದರೂ, ವಿದೇಶ ಸಂಬಂಧಗಳು, ಸಂಕೀರ್ಣವಾದ ಬಾಹ್ಯ ಆರ್ಥಿಕತೆ ಇತ್ಯಾದಿ ವಿಷಯಗಳ ಬಗ್ಗೆ ಪಾರಂಗತರಾಗಿರುವುದು ಅವರ ಹೆಚ್ಚುಗಾರಿಕೆಯನ್ನು ತೋರಿಸುತ್ತದೆ ಎಂದು ಮುಖರ್ಜಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ವಾಣಿಜ್ಯ,ಹಣಕಾಸು ಇತ್ಯಾದಿ ವಿಷಯಗಳನ್ನು ನಿರ್ವಹಿಸುವ ಪ್ರಭಾವಿ ಜಿ-20 ಬಳಗವನ್ನು ಮೋದಿ ಸಮರ್ಥವಾಗಿ ನಿಭಾಯಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News