ಈಗ ಐಟಿ ರಿಟರ್ನ್ ಸಲ್ಲಿಸಲು ಮತ್ತು ಪಾನ್ ಕಾರ್ಡ್ ಅರ್ಜಿಗೆ ಆಧಾರ್ ಕಡ್ಡಾಯ

Update: 2017-03-21 14:55 GMT

ಹೊಸದಿಲ್ಲಿ,ಮಾ.21: ಸರಕಾರವು ಮಂಗಳವಾರ ಆದಾಯ ತೆರಿಗೆ ರಿಟರ್ನ್ (ಯಟಿಆರ್) ಸಲ್ಲಿಸಲು ಮತ್ತು ಪಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಜುಲೈ 1ರಿಂದ ಆಧಾರ್ ಕಡ್ಡಾಯಗೊಳಿಸಿದೆ.

ಸಂಸತ್ತಿನಲ್ಲಿ ಸದ್ಯ ಚರ್ಚೆಗೊಳಪಟ್ಟಿರುವ ಹಣಕಾಸು ಮಸೂದೆಗೆ ತಿದ್ದುಪಡಿಯ ಮೂಲಕ ಸರಕಾರವು ಈ ಹೊಸ ನಿಯಮವನ್ನು ತಂದಿದೆ.
ಐಟಿಆರ್ ಸಲ್ಲಿಕೆ ಸಂದರ್ಭ ಆಧಾರ್‌ಗೆ ಅರ್ಜಿ ಸಲ್ಲಿಸಿದ್ದರೂ ಸಾಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ವಿತ್ತಸಚಿವ ಅರುಣ್ ಜೇಟ್ಲಿ ಅವರು ಬುಧವಾರ ಹಣಕಾಸು ಮಸೂದೆಗೆ ಉತ್ತರಿಸಲಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಐಟಿಆರ್ ಸಲ್ಲಿಕೆಗೆ ಆಧಾರ್ ಐಚ್ಛಿಕವಾಗಿತ್ತು. ಹೊಸ ನಿಯಮದಿಂದ ಭಾರತದಲ್ಲಿ ತೆರಿಗೆಗಳನ್ನು ಪಾವತಿಸುವ ವಿದೇಶಿಯರಿಗೆ ಸಮಸ್ಯೆ ಯಾಗಲಿದೆ. ತಿದ್ದುಪಡಿಯ ಪರಿಣಾಮಗಳನ್ನು ತಿಳಿದುಕೊಳ್ಳಲು ನಾವದನ್ನು ನೋಡಬೇಕಾಗುತ್ತದೆ ಎಂದು ಪಿಡಬ್ಲುಸಿ ಇಂಡಿಯಾದ ವೈಯಕ್ತಿಕ ತೆರಿಗೆ ವಿಭಾಗದ ಮುಖ್ಯಸ್ಥ ಕುಲದೀಪ್ ಕುಮಾರ್ ತಿಳಿಸಿದರು.

ಐಟಿಆರ್ ಮತ್ತು ಪಾನ್ ಕಾರ್ಡ್‌ಗಳಿಗೆ ಆಧಾರ ಕಡ್ಡಾಯಗೊಳಿಸಿರುವುದು ಈ ಕಾರ್ಡ್ ಅಗತ್ಯವಾಗಿರುವ ಸೇವೆಗಳ ಸುದೀರ್ಘ ಸರಣಿಗೆ ಇತ್ತೀಚಿನ ಸೇರ್ಪಡೆಯಾಗಿದೆ.

ಆಧಾರ್‌ಗಾಗಿ ಸಾರ್ವಜನಿಕ ಸೇವೆಗಳನ್ನು ನಿರಾಕರಿಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟವಾಗಿ ಆದೇಶಿಸಿದೆ. ಆದರೂ ಸರಕಾರವು ಅದರ ಉಲ್ಲಂಘನೆಯನ್ನು ಮುಂದುವರಿಸಿದೆ ಎಂದು ಸತ್ರಾಕ್ ನಾಗರಿಕ ಸಂಘಟನೆಯ ಸ್ಥಾಪಕಿ ಅಂಜಲಿ ಭಾರದ್ವಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News