6-7 ತಿಂಗಳುಗಳಲ್ಲಿ ಸುಪ್ರೀಂಕೋರ್ಟ್ ಪೇಪರ್‌ಲೆಸ್ ಆಗಲಿದೆ: ಸಿಜೆಐ ಕೇಹರ್

Update: 2017-03-23 17:00 GMT

 ಹೊಸದಿಲ್ಲಿ,ಮಾ.24:ಮುಂದಿನ 6-7 ತಿಂಗಳುಗಳ ಬಳಿಕ ನ್ಯಾಯಾಲಯಕ್ಕೆ ಕಂತೆಗಟ್ಟಲೆಗಳಷ್ಟು ಅರ್ಜಿಗಳನ್ನು ಹಾಗೂ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿರುವುದಿಲ್ಲವೆಂದು ಭಾರತದ ಮುಖ್ಯ ನ್ಯಾಯಾಧೀಶ(ಸಿಜೆಐ) ಜೆ.ಎಸ್. ಕೇಹರ್ ತಿಳಿಸಿದ್ದು, ಆ ಮೂಲಕ ಸುಪ್ರೀಂಕೋರ್ಟ್ ಪೇಪರ್‌ಲೆಸ್ ಆಗುವ ಸೂಚನೆಯನ್ನು ನೀಡಿದ್ದಾರೆ.

    ಬುಧವಾರ ಸುಪ್ರೀಂಕೋರ್ಟ್‌ನ ರೂಂ.ನಂ.1ರಲ್ಲಿ ನ್ಯಾಯವಾದಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಸುಪ್ರೀಂಕೋರ್ಟ್ ಮುಂಬರುವ ದಿನಗಳಲ್ಲಿ ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್‌ನಿಂದ ಪ್ರಕರಣಗಳ ದಾಖಲೆಗಳನ್ನು ಇಲೆಕ್ಟ್ರಾನಿಕ್ ಮಾಧ್ಯಮದ ಮುಖಾಂತರ ಪಡೆಯಲಿರುವುದರಿಂದ, ಕಾಗದದಲ್ಲಿ ಮುದ್ರಿತವಾದ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿರುವುುದಿಲ್ಲವೆಂದು ಹೇಳಿದರು.

 ಈ ಪ್ರಕರಣಗಳಲ್ಲಿ ನ್ಯಾಯವಾದಿಗಳು ತಾವು ಯಾವ ನೆಲೆಯಲ್ಲಿ ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸುತ್ತೇವೆ ಎಂಬುದಾಗಿ ವಿವರಿಸುವ ಅರ್ಜಿಯನ್ನಷ್ಟೇ ಸಲ್ಲಿಸಿದರೆ ಸಾಕಾಗುತ್ತದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News