ಫೇಸ್‌ಬುಕ್‌ನಲ್ಲಿ ಉ.ಪ್ರ ಸಿಎಂಗೆ ಅವಹೇಳನ: ಯುವಕನ ವಿರುದ್ಧ ಎಫ್‌ಐಆರ್

Update: 2017-03-25 16:37 GMT

 ಸಂಭಾಲ್,ಮಾ.25: ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಪ್ರಕಟಿಸಿದ್ದನೆನ್ನಲಾದ ಯುವಕನೊಬ್ಬನ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿದೆ.

    ಶಹಝಾದ್ ಅಕ್ರಮ್ ಎಂಬಾತ ಫೇಸ್‌ಬುಕ್‌ನಲ್ಲಿ ಆದಿತ್ಯನಾಥ್‌ರನ್ನು ಅವಹೇಳನ ಮಾಡುವ ಪೋಸ್ಟ್ ಪ್ರಕಟಿಸಿದ್ದು, ಇದರಿಂದ ಒಂದು ಸಮುದಾಯದ ಭಾವನೆಗೆ ಧಕ್ಕೆಯಾಗಿದೆಯೆಂದು ಅಕ್ಷಿತ್ ಅಗರ್‌ವಾಲ್ ಎಂಬವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಂಭಾಲ್ ನಗರದ ಪೊಲೀಸರು ಶುಕ್ರವಾರ ಶಹಝಾದ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News