ಕೇರಳದ ಸಾರಿಗೆ ಸಚಿವ ಶಶೀಂದ್ರನ್ ರಾಜೀನಾಮೆ
Update: 2017-03-26 10:45 GMT
ತಿರುವನಂತಪುರ, ಮಾ.26: ಕೇರಳದ ಸಾರಿಗೆ ಸಚಿವ ಎ.ಕೆ. ಶಶೀಂದ್ರನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಹಿಳೆ ಜೊತೆ ದೂರವಾಣಿಯಲ್ಲಿ ಅನುಚಿತವಾಗಿ ವರ್ತಿಸಿದ ಕಾರಣಕ್ಕಾಗಿ ಅವರ ವಿರುದ್ಧ ಕೇರಳದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಎನ್ ಪಿಸಿ ಶಾಸಕರಾಗಿರುವ ಶಶೀಂದ್ರನ್ ಅವರು ಮುಖ್ಯ ಮಂತ್ರಿ ಪಿಣರಾಯಿ ವಿಜಯ್ ಸೂಚನೆಯಂತೆ ಸಾರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.