ಚೀನಾಕ್ಕೆ ಕತ್ತೆ ರಫ್ತು ಮಾಡಲಿರುವ ಪಾಕ್
Update: 2017-04-09 14:58 GMT
ಪೇಷಾವರ, ಎ.9: ಒಂದು ಬಿಲಿಯನ್ ರೂಪಾಯಿ ಬಂಡವಾಳದ ‘ಕತ್ತೆ ಅಭಿವೃದ್ಧಿ ಕಾರ್ಯಕ್ರಮ‘ದಲ್ಲಿ ಚೀನಾಕ್ಕೆ ಕತ್ತೆಗಳನ್ನು ರಫ್ತು ಮಾಡಲು ಪಾಕಿಸ್ತಾನ ಚಿಂತನೆ ನಡೆಸಿದೆ.
ಕತ್ತೆಯ ಚರ್ಮವನ್ನು ಔಷಧ ತಯಾರಿಕೆಗೆ ಬಳಸಲಾಗುವ ಕಾರಣ ಕತ್ತೆಗೆ ಚೀನಾದಲ್ಲಿ ಹೆಚ್ಚಿನ ಬೇಡಿಕೆಯಿದೆ. ಈ ಹಿನ್ನೆಲೆಯಲ್ಲಿ ವಾಯುವ್ಯ ಪಾಕಿಸ್ತಾನದ ಖೈಬರ್- ಫಖ್ತೂನ್‌ಕ್ವ ಪ್ರದೇಶದಲ್ಲಿ ಕತ್ತೆ ಅಭಿವೃದ್ಧಿ ಕಾರ್ಯಕ್ರಮದಡಿ ಚೀನಾದಿಂದ ಬಂಡವಾಳ ಆಕರ್ಷಿಸಲು ಪಾಕಿಸ್ತಾನ ಯೋಜನೆ ರೂಪಿಸಿದೆ.
46 ಬಿಲಿಯನ್ ಡಾಲರ್ ವೆಚ್ಚದ ಮಹಾತ್ವಾಕಾಂಕ್ಷೆಯ ಯೋಜನೆಯಾಗಿರುವ ಚೀನಾ-ಪಾಕಿಸ್ತಾನ ಆರ್ಥಿಕ ವಲಯ ಯೋಜನೆಯಡಿ ಕತ್ತೆಗಳನ್ನು ಅಭಿವೃದ್ಧಿಗೊಳಿಸಿ ರಫ್ತು ಮಾಡುವ ಯೋಜನೆ ರೂಪಿಸಲಾಗಿದೆ.
ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಕತ್ತೆಗಳ ವಂಶಾಭಿವೃದ್ಧಿಗೊಳಿಸುವ ಮತ್ತು ಕತ್ತೆಗಳ ಕಾರ್ಯನಿರ್ವಹಣೆ ಹೆಚ್ಚಿಸುವ ಕಾರ್ಯ ನಡೆಸಲಾಗುವುದು ಎಂದು ‘ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.