ಚರ್ಚ್ ದಾಳಿಕೋರ ಉಗ್ರ ಸಂಪರ್ಕ ಹೊಂದಿದ್ದ ದೇಶಭ್ರಷ್ಟ

Update: 2017-04-13 14:54 GMT

ಕೈರೋ, ಎ. 13: ಈಜಿಪ್ಟ್‌ನ ಅಲೆಕ್ಸಾಂಡ್ರಿಯದಲ್ಲಿರುವ ಚರ್ಚ್ ಮೇಲೆ ದಾಳಿ ನಡೆಸಿದ ಆತ್ಮಹತ್ಯಾ ಬಾಂಬರ್‌ನನ್ನು ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ದೇಶಭ್ರಷ್ಟ ಎಂಬುದಾಗಿ ಅಧಿಕಾರಿಗಳು ಗುರುತಿಸಿದ್ದಾರೆ.

ಆತ ಸಂಪರ್ಕ ಹೊಂದಿದ್ದ ಸಂಘಟನೆಗಳು ಈ ಹಿಂದೆಯೂ ದೇಶಾದ್ಯಂತ ದಾಳಿ ನಡೆಸಿವೆ ಎಂದು ಅವರು ಹೇಳಿದ್ದಾರೆ.

ಸೈಂಟ್ ಮಾರ್ಕ್ಸ್ ಕತೀಡ್ರಲ್‌ನಲ್ಲಿ ಪ್ರಾರ್ಥನೆ ನಡೆಯುತ್ತಿದ್ದಾಗ ಆತ ಚರ್ಚ್‌ನ ದ್ವಾರದಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡನು. ಈ ದಾಳಿಯಲ್ಲಿ 17 ಮಂದಿ ಮೃತಪಟ್ಟಿದ್ದಾರೆ.

ಕೆಲವು ಗಂಟೆಗಳ ಮೊದಲು ಟಾಂಡ ನಗರದಲ್ಲಿರುವ ಚರ್ಚೊಂದರಲ್ಲಿ ಇನ್ನೊಂದು ಬಾಂಬ್ ಸ್ಫೋಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News