ರಾಮಮಂದಿರ ನಿರ್ಮಾಣಕ್ಕೆ ಯಾವುದೇ ತ್ಯಾಗಕ್ಕೂ ಸಿದ್ಧ: ಉಮಾಭಾರತಿ
Update: 2017-04-19 08:26 GMT
ಹೊಸದಿಲ್ಲಿ, ಎ.19: ‘‘ಕಾಂಗ್ರೆಸ್‌ಗೆ ನನ್ನ ರಾಜೀನಾಮೆ ಕೇಳುವ ನೈತಿಕತೆ ಇಲ್ಲ. ಕಾಂಗ್ರೆಸ್‌ನ ಯಾವುದೇ ಪ್ರಶ್ನೆಗೆ ನಾನು ಉತ್ತರಿಸುವುದಿಲ್ಲ. ಪ್ರಾಮಾಣಿಕತೆಯಿಂದ ಅಯೋಧ್ಯೆ ಆಂದೋಲನದಲ್ಲಿ ಭಾಗಿಯಾಗಿದ್ದೆ. ಅಯೋಧ್ಯೆ ವಿಚಾರದಲ್ಲಿ ನಾನು ಯಾವುದೇ ತ್ಯಾಗಕ್ಕೂ, ಶಿಕ್ಷೆ ಅನುಭವಿಸಲೂ ಸಿದ್ಧ. ರಾಮಮಂದಿರ ನಿರ್ಮಿಸುವ ಸಮಯ ಈಗ ಬಂದಿದೆ. ಮಂದಿರ ನಿರ್ಮಾಣವನ್ನು ಯಾರಿಗೂ ತಡೆಯಲು ಸಾಧ್ಯವಿಲ್ಲ’’ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾಭಾರತಿ ಹೇಳಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನಾನು ಸಂಚು ರೂಪಿಸಿರಲಿಲ್ಲ. ಎಲ್ಲವೂ ಬಹಿರಂಗವಾಗಿ ನಡೆದಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಉಮಾಭಾರತಿ ತಿಳಿಸಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಪಿತೂರಿ ನಡೆಸಿದ ಆರೋಪದಲ್ಲಿ ಕೇಂದ್ರ ಸಚಿವೆ ಉಮಾಭಾರತಿ, ಹಿರಿಯ ಮುಖಂಡರಾದ ಎಲ್.ಕೆ.ಅಡ್ವಾಣಿ ಹಾಗೂ ಮುರಳಿಮನೋಹರ್ ಜೋಶಿ ಸಹಿತ ಹಲವರ ವಿರುದ್ಧ ಸುಪ್ರೀಂಕೋರ್ಟ್ ಕ್ರಿಮಿನಲ್ ಕೇಸ್ ದಾಖಲಿಸಲು ಅಸ್ತು ಎಂದಿದೆ.