ತಾಲಿಬಾನ್ ‘ನಾಯಕ’ ಸಮೀವುಲ್ ಹಕ್ ಹತ್ಯೆ

Update: 2018-11-02 16:11 GMT

ರಾವಲ್ಪಿಂಡಿ, ನ.2: ಇಲ್ಲಿ ನಡೆದ ಗುಂಡಿನ ದಾಳಿಯೊಂದರಲ್ಲಿ ತಾಲಿಬಾನ್ ನ ಪ್ರಮುಖ ನಾಯಕ ಎನ್ನಲಾದ ಮೌಲಾನ ಸಮೀವುಲ್ ಹಕ್ ಎಂಬಾತ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

ಅಫ್ಘಾನಿಸ್ತಾನ ಹಾಗು ಪಾಕಿಸ್ತಾನದಲ್ಲಿ ಈತ ಪ್ರಭಾವೀ ವ್ಯಕ್ತಿ ಎನ್ನಲಾಗಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ರ ತೆಹ್ರೀಕ್ ಇ ಇನ್ಸಾಫ್ ಪಕ್ಷದೊಂದಿಗೆ ಕೈಜೋಡಿಸಿದ್ದ ಎಂದು ವರದಿಯಾಗಿದೆ.

ಆತ ಉಳಿದುಕೊಂಡಿದ್ದ ಮನೆಯಲ್ಲೇ ಅಪರಿಚಿತರು ದಾಳೆ ನಡೆಸಿದ್ದರು. ಕೆಲವು ವರದಿಗಳು ಸಮೀವುಲ್ ಹಕ್ ನನ್ನು ಇರಿದು ಕೊಲ್ಲಲಾಗಿದೆ ಎನ್ನುತ್ತಿದೆ. ಗಂಭೀರ ಗಾಯಗೊಂಡ ಆತ ಮೃತಪಟ್ಟಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News