ಮೂಡುಬಿದಿರೆ ಮೂಲದ ಅಬ್ದುಲ್ ಸಮೀ ಪ್ರಥಮ ಸ್ಥಾನದೊಂದಿಗೆ ಶುಭಾರಂಭ
Update: 2018-11-03 06:07 GMT
ಬಹರೈನ್, ನ. 2: ಇಲ್ಲಿ ಶುಕ್ರವಾರ ಆರಂಭವಾದ ಪ್ರತಿಷ್ಠಿತ ಬಹರೈನ್ ಸೂಪರ್ ಸ್ಪೋರ್ಟ್ ಚಾಂಪಿಯನ್ ಶಿಪ್ ಸೂಪರ್ ಸ್ಪೋರ್ಟ್ ಬೈಕ್ ರೇಸ್ ಮೊದಲ ಹಂತದ ಮೊದಲ ರೇಸ್ ನಲ್ಲಿ ಅಬ್ದುಲ್ ಸಮೀ ಸಯ್ಯದ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಇವರು ಮೂಡುಬಿದಿರೆ ಮೂಲದ ದುಬೈ ಉದ್ಯಮಿ ಹಾಗು ಬೈಕ್ ರೇಸ್ ಚಾಂಪಿಯನ್ ಸಯ್ಯದ್ ನಾಸಿರ್ ಅವರ ಸುಪುತ್ರ.
ಎಪ್ರಿಲಿಯ 125 ಸಿಸಿ ಬೈಕ್ ಚಲಾಯಿಸಿದ ಅಬ್ದುಲ್ ಸಮೀ ಮೊದಲ ರೇಸ್ ನಲ್ಲಿ ಪ್ರಥಮ ಸ್ಥಾನ ಪಡೆದು ಶುಭಾರಂಭ ಮಾಡಿದ್ದಾರೆ. ಒಟ್ಟು 6 ಹಂತಗಳಲ್ಲಿ ರೇಸ್ ನಡೆಯಲಿದ್ದು, ಪ್ರತಿ ಹಂತದಲ್ಲಿ ಎರಡು ರೇಸ್ ಗಳಿರುತ್ತವೆ.
ಕುವೈಟ್ ನ ಸಾಲೆಹ್ ಅಲ್ ಖಂದರಿ ಎರಡನೇ ಸ್ಥಾನ ಹಾಗು 3ನೆ ಸ್ಥಾನವನ್ನು ಯೂಸುಫ್ ಖೈದ್ ಪಡೆದಿದ್ದಾರೆ.