ಅಮೆರಿಕ: ಕಾರಿನಲ್ಲಿ ಪಂಜಾಬ್ ಯುವಕನ ಮೃತದೇಹ ಪತ್ತೆ
Update: 2018-11-14 17:32 GMT
ಲ್ಯಾನ್ಸಿಂಗ್ (ಮಿಶಿಗನ್), ನ. 14: ಪಂಜಾಬ್‌ನ ಲುಧಿಯಾನ ಜಿಲ್ಲೆಯ ಮಚ್ಚಿವಾರ ಪಟ್ಟಣದ ಯುವಕನೊಬ್ಬ ಅಮೆರಿಕದ ಮಿಶಿಗನ್ ರಾಜ್ಯದಲ್ಲಿ ಮಂಗಳವಾರ ನಿಗೂಢ ಸನ್ನಿವೇಶದಲ್ಲಿ ಮೃತಪಟ್ಟಿದ್ದಾರೆ.
21 ವರ್ಷದ ಅಭಿ ಬ್ರಾರ್ ಅವರ ಮೃತದೇಹ ಅವರು ಕಲಿಯುತ್ತಿದ್ದ ಮಿಶಿಗನ್ ಸ್ಟೇಟ್ ವಿಶ್ವವಿದ್ಯಾನಿಲಯದ ಆವರಣದಲ್ಲಿ ಕಾರೊಂದರಲ್ಲಿ ಪತ್ತೆಯಾಗಿದೆ.
ಆದಾಗ್ಯೂ, ಅಭಿಯ ಅಜ್ಜನ ಅಂತ್ಯಸಂಸ್ಕಾರಕ್ಕೆ ಪಂಜಾಬ್‌ಗೆ ಬಂದಿದ್ದ ಅವರ ಹೆತ್ತವರಿಗೆ ಈ ದುರಂತದ ಸುದ್ದಿಯನ್ನು ಬುಧವಾರ ರಾತ್ರಿ ಅವರು ಅಮೆರಿಕ ತಲುಪಿದ ಬಳಿಕವಷ್ಟೇ ತಿಳಿಸಲಾಗಿದೆ.
ಅವರ ಹೆತ್ತವರು ಮಿಶಿಗನ್‌ನ ಕ್ಯಾಂಟನ್ ಟೌನ್‌ಶಿಪ್‌ನಲ್ಲಿ ವಾಸಿಸುತ್ತಿದ್ದಾರೆ. ಆದರೆ, ಅಭಿ ವಿಶ್ವವಿದ್ಯಾಲಯ ಸಮೀಪದಲ್ಲೇ ಪೇಯಿಂಗ್ ಗೆಸ್ಟ್ ಆಗಿ ವಾಸಿಸುತ್ತಿದ್ದರು.