ಒಬಿಸಿ ಉಪಶ್ರೇಣೀಕರಣ ಆಯೋಗದ ಅವಧಿ ವಿಸ್ತರಣೆ

Update: 2018-11-22 16:24 GMT

ಹೊಸದಿಲ್ಲಿ, ನ.22: ಕೇಂದ್ರ ಸರಕಾರದ ಮೀಸಲಾತಿ ಪಟ್ಟಿಯಿಂದ ಇತರ ಹಿಂದುಳಿದ ವರ್ಗಗಳು (ಒಬಿಸಿ) ಉಪಶ್ರೇಣಿಕರಿಸುವ ವಿಷಯವನ್ನು ಪರಿಶೀಲಿಸುವ ಆಯೋಗದ ಅವಧಿಯನ್ನು 2019ರ ಮೇ 31ರವರೆಗೆ ವಿಸ್ತರಿಸಲು ಕೇಂದ್ರ ಸರಕಾರವು ಗುರುವಾರ ಅನುಮೋದನೆ ನೀಡಿದೆ.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ರಚನೆಯಾದ ಆಯೋಗದ ಅವಧಿ ಯನ್ನು ಕೇಂದ್ರ ಸರಕಾರ ವಿಸ್ತರಿಸಿರುವುದು ಇದು ನಾಲ್ಕನೆ ಸಲವಾಗಿದೆ.

ಆಯೋಗವು ರಚನೆಯಾದಾಗಿನಿಂದ ಅದು ರಾಜ್ಯ ಸರಕಾರಗಳು, ರಾಜ್ಯ ಹಿಂದುಳಿದ ವರ್ಗಗಳ ಆಯೋಗಗಳು, ಸಾಮುದಾಯಿಕ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸೇರಿದಂತೆ ಸಂಬಂಧಪಟ್ಟವರ ಜೊತೆ ವಿಸ್ತೃತ ಮಾತುಕತೆ, ಸಮಾಲೋಚನೆಗಳನ್ನು ನಡೆಸುತ್ತಾ ಬಂದಿದೆ.

ಆಯೋಗವು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೇರ್ಪಡೆಗೊಂಡ ಒಬಿಸಿಗಳ ದಾಖಲೆಗಳು ಹಾಗೂ ಅವರ ಜಾತಿವಾರು ದತ್ತಾಂಶ ಮತ್ತು ಕೇಂದ್ರ ಸರಕಾರ, ಹಾಗೂ ಕೇಂದ್ರ ಸಾರ್ವಜನಿಕ ರಂಗದ ಸಂಸ್ಥೆಗಳು ಹಾಗೂ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಹಾಗೂ ವಿತ್ತೀಯ ಸಂಸ್ಥೆಗಳಲ್ಲಿ ನೇಮಕಗೊಂಡ ಉದ್ಯೋಗಿಗಳ ಜಾತಿವಾರು ದತ್ತಾಂಶವನ್ನು ಕೂಡಾ ಅದು ಕಲೆಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News