ಮಧ್ಯಪ್ರದೇಶ ಚುನಾವಣೆ: 745 ಇವಿಎಂ ಮತ್ತು ವಿವಿ ಪ್ಯಾಟ್ ಯಂತ್ರಗಳ ಬದಲಾವಣೆ

Update: 2018-11-28 16:28 GMT

ಭೋಪಾಲ,ನ.28: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗಾಗಿ ಮತದಾನ ಬುಧವಾರ ನಡೆದಿದ್ದು,ದೋಷಪೂರಿತ 745 ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿ ಪ್ಯಾಟ್ ಯಂತ್ರಗಳನ್ನು ಬದಲಾಯಿಸಲಾಗಿತ್ತು.

ಹಲವಾರು ಕಡೆಗಳಲ್ಲಿ ಇವಿಎಂಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಕಾಂಗ್ರೆಸ್ ದೂರಿಕೊಂಡ ಬಳಿಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಎಲ್.ಕಾಂತರಾವ್ ಅವರು ಅವುಗಳನ್ನು ಬದಲಿಸುತ್ತಿರುವುದಾಗಿ ಪ್ರಕಟಿಸಿದರು.

ಚುನಾವಣಾ ಕಣದಲ್ಲಿ ಒಟ್ಟು 2,899 ಅಭ್ಯರ್ಥಿಗಳಿದ್ದು,ರಾಜ್ಯದಲ್ಲಿ 5.04 ಕೋಟಿ ಅರ್ಹ ಮತದಾರರಿದ್ದಾರೆ.

ಚುನಾವಣೆಗಾಗಿ 65,341 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು,45,904 ಮಹಿಳೆಯರು ಸೇರಿದಂತೆ ಒಟ್ಟು 3,00,782 ಸರಕಾರಿ ನೌಕರರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News