ಪತ್ನಿಯ ಜೊತೆ ಜಗಳವಾಡಿ ಮೂರು ವರ್ಷದ ಪುತ್ರಿಯನ್ನೇ ಅತ್ಯಾಚಾರಗೈದ ದುಷ್ಕರ್ಮಿ

Update: 2018-12-01 07:43 GMT

ಗುರ್ಗಾಂವ್, ಡಿ. 1: ತನ್ನ ಮೂರು ವರ್ಷದ ಪುತ್ರಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಆರೋಪಿ ಉತ್ತರ ಪ್ರದೇಶದ ಕಸ್ಗಂಜ್ ನಿವಾಸಿಯೆಂದು ತಿಳಿದು ಬಂದಿದೆ.

ಆರೋಪಿಯ ಪತ್ನಿ ಆತನೊಡನೆ ಜಗಳವಾಡಿ ಅ. 28ರ ರಾತ್ರಿ ಮನೆ ಬಿಟ್ಟು ತೆರಳಿದ ನಂತರ ಆತ ಮದ್ಯದ ನಶೆಯಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಗಂಡನೊಡನೆ ಜಗಳವಾಡಿದ ಸಂದರ್ಭ ಆತನ ಪತ್ನಿ ತನ್ನ  ಒಂದು ವರ್ಷದ ಪುತ್ರಿಯನ್ನು ತನ್ನೊಂದಿಗೆ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಿದ್ದರೂ ಮೂರು ವರ್ಷದ ಮಗಳನ್ನು ಪತಿಯ ಬಳಿಯೇ ಬಿಟ್ಟು ಹೋಗಿದ್ದಳು. ಮರುದಿನ ಬೆಳಗ್ಗೆ ಆತನ ಪತ್ನಿ ವಾಪಸಾದಾಗ ಪುತ್ರಿ ಪ್ರಜ್ಞೆ ತಪ್ಪಿ ಬಿದ್ದಿದ್ದರೆ ಬೆಡ್  ಶೀಟ್ ತುಂಬಾ ರಕ್ತದ ಕಲೆಗಳಿದ್ದವು. ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಗುರಿಪಡಿಸಿದಾಗ ಅತ್ಯಾಚಾರ ಸಾಬೀತಾಗಿತ್ತು. ಮಗುವಿನ ಸ್ಥಿತಿ ಚಿಂತಾಜನಕ ವಾಗಿರುವುದರಿಂದ ದಿಲ್ಲಿಯ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಶಿಫಾರಸು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News