ನಾವು ಜಾತ್ಯಾತೀತರಾಗಬೇಕೆಂದು ತಂದೆ ಕಲಿಸಿದ್ದರು: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪೊಲೀಸ್ ಅಧಿಕಾರಿಯ ಪುತ್ರ

Update: 2018-12-04 10:16 GMT
ಫೋಟೊ ಕೃಪೆ: aninews.in

ಬುಲಂದ್ ಶಹರ್, ಡಿ.4: “ನಾವು ಒಳ್ಳೆಯ ನಾಗರಿಕರಾಗಬೇಕು ಎಂದವರು ಬಯಸಿದ್ದರು. ಧರ್ಮದ ಹೆಸರಿನಲ್ಲಿ ಗಲಭೆ ಸೃಷ್ಟಿಸುವ ವ್ಯಕ್ತಿಗಳು ನಾವಾಗಬಾರದು ಎಂದವರು ಬಯಸಿದ್ದರು. ಹಿಂದೂ, ಮುಸ್ಲಿಂ, ಕ್ರೈಸ್ತ ಅಥವಾ ಸಿಖ್ ಇಲ್ಲಿ ಎಲ್ಲರೂ ಸಮಾನರು ಎಂದವರು ಹೇಳುತ್ತಿದ್ದರು” …. ಇದು ಗೋಹತ್ಯೆ ಆರೋಪದಲ್ಲಿ ಬುಲಂದ್ ಶಹರ್ ನಲ್ಲಿ ನಡೆದ ಗಲಭೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಅವರ ಪುತ್ರ ಅಭಿಷೇಕ್ ರ ಮಾತುಗಳು.

ಈಗಷ್ಟೇ ಅವರು 12ನೆ ತರಗತಿಯ ಪರೀಕ್ಷೆ ಬರೆದಿದ್ದಾರೆ. ಅಷ್ಟರಲ್ಲೇ ತಂದೆಯ ಸಾವಿನ ಸುದ್ದಿ ಬರಸಿಡಿಲಿನಂತೆ ಎರಗಿದೆ. “ಘಟನೆ ನಡೆಯುವುದಕ್ಕಿಂತ ಮೊದಲ ದಿನ ನಾನು ಅವರೊಂದಿಗೆ ಮಾತನಾಡಿದ್ದೆ. ನಾನು ಶಿಕ್ಷಣದ ಕಡೆಗೆ ಗಮನಹರಿಸಬೇಕು. ಕಡಿಮೆ ಅಂಕ ಪಡೆದ ವಿಷಯಗಳಲ್ಲಿ ಹೆಚ್ಚು ಗಮನ ಹರಿಸಬೇಕು” ಎಂದವರು ಹೇಳಿದ್ದರು.

“ಅವರು ತುಂಬಾ ಒಳ್ಳೆಯ ಮನುಷ್ಯ. ಕರ್ತವ್ಯದಲ್ಲಿದ್ದಾಗಲೇ ಅವರು ಸಾವನ್ನಪ್ಪಿದರು. ಕೆಲವು ಪ್ರಕರಣಗಳ ತನಿಖೆ ನಡೆಸಬೇಡಿ ಎಂದು ಕೆಲವೊಂದು ಬಾರಿ ಅವರಿಗೆ ಹೇಳಲಾಗಿತ್ತು. ಆದರೆ ಅವರು ಮಾಡುತ್ತಿದ್ದರು” ಎಂದು ಗದ್ಗದಿತರಾಗುತ್ತಾ ಸುಬೋಧ್ ರ ಇನ್ನೋರ್ವ ಪುತ್ರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News