ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣ: ಬ್ರಿಟನ್‌ನ ಮೈಕಲ್ ಇಂದು ಕೋರ್ಟಿಗೆ ಹಾಜರು?

Update: 2018-12-05 07:22 GMT

ಹೊಸದಿಲ್ಲಿ, ಡಿ.4: ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಯ ಭಾಗವಾಗಿ ಮಂಗಳವಾರ ರಾತ್ರಿ ದುಬೈನಿಂದ ಭಾರತಕ್ಕೆ ಹಸ್ತಾಂತರಿಸಲ್ಪಟ್ಟ ಬ್ರಿಟನ್‌ನ ಮಧ್ಯವರ್ತಿ ಕ್ರಿಸ್ಟಿಯನ್ ಜೇಮ್ಸ್ ಮೈಕಲ್‌ರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.

3,600 ಕೋ.ರೂ.ನ ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಒಪ್ಪಂದದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಮೈಕಲ್ 30 ಮಿಲಿಯನ್ ಯುರೋ(ಸುಮಾರು 250 ಕೋ.ರೂ.) ಕಿಕ್‌ಬ್ಯಾಕ್ ಪಡೆದ ಆರೋಪ ಎದುರಿಸುತ್ತಿದ್ದಾರೆ.

ಮೈಕಲ್‌ರನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಕೆಳ ಹಂತದ ನ್ಯಾಯಾಲಯ ನೀಡಿದ್ದ ತೀರ್ಪನ್ನು ದುಬೈ ಕೋರ್ಟ್ ಎತ್ತಿ ಹಿಡಿದ ಬೆನ್ನಲ್ಲೇ ದುಬೈ ಕ್ರಿಮಿನಲ್ ತನಿಖಾ ಇಲಾಖೆ ಮೈಕಲ್‌ರನ್ನು ಕಸ್ಟಡಿಗೆ ಪಡೆದಿತ್ತು. ಮೂಲಗಳ ಪ್ರಕಾರ ಭಾರತ ಸರಕಾರದ ಮನವಿ ಮೇರೆಗೆ ಮೈಕಲ್‌ರನ್ನು ಹಸ್ತಾಂತರಿಸಲಾಗಿದೆ.ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ(ಇಡಿ)ಅಧಿಕೃತವಾಗಿ ಮೈಕಲ್‌ರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಕೆಲ ತಿಂಗಳುಗಳ ಹಿಂದೆ ಗಲ್ಫ್ ರಾಷ್ಟ್ರಕ್ಕೆ ಕೋರಿಕೆ ಸಲ್ಲಿಸಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News