ವೀಡಿಯೊ ಮೂಲಕ ನಾನು ಅಮಾಯಕ ಎಂದ ಬಜರಂಗದಳ ನಾಯಕ

Update: 2018-12-05 16:40 GMT

ಹೊಸದಿಲ್ಲಿ, ಡಿ. 5: ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ಗೋಹತ್ಯೆ ವದಂತಿಗೆ ಸಂಬಂಧಿಸಿ ನಡೆದ ಗುಂಪು ಹಿಂಸಾಚಾರದ ಸಂದರ್ಭ ಪೊಲೀಸ್ ಇನ್ಸ್‌ಪೆಕ್ಟರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಜರಂಗ ದಳದ ನಾಯಕ ಯೋಗೇಶ್ ರಾಜ್ ಬುಧವಾರ ತಾನು ಅಡಗಿರುವ ಸ್ಥಳದಿಂದ ವೀಡಿಯೊ ಬಿಡುಗಡೆ ಮಾಡಿ ಅಮಾಯಕ ಎಂದು ಪ್ರತಿಪಾದಿಸಿದ್ದಾನೆ. ವಿಶ್ವ ಹಿಂದೂ ಪರಿಷತ್‌ನ ಸದಸ್ಯನೂ ಆಗಿರುವ ಯೋಗೇಶ್ ರಾಜ್ ವೀಡಿಯೊದಲ್ಲಿ ಹಿಂಸಾಚಾರದ ಸಂದರ್ಭ ತಾನು ಅಲ್ಲಿರಲಿಲ್ಲ ಹಾಗೂ ಪ್ರತಿಭಟನಕಾರರೊಂದಿಗೆ ಏನನ್ನೂ ಮಾಡಿಲ್ಲ ಎಂದಿದ್ದಾನೆ. ಉತ್ತರಪ್ರದೇಶ ಪೊಲೀಸರು ತನ್ನನ್ನು ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ ಎಂದು ಕೂಡ ಆತ ಹೇಳಿದ್ದಾನೆ. ಸೋಮವಾರ ಸಂಜೆಯಿಂದ ಯೋಗೇಶ್ ಎಲ್ಲಿದ್ದಾನೆ ಎಂದು ತಿಳಿದಿಲ್ಲ. ಈ ವೀಡಿಯೊ ಚಿತ್ರೀಕರಿಸಿದ ಸ್ಥಳವನ್ನು ಪೊಲೀಸರು ಶೋಧಿಸುತ್ತಿದ್ದಾರೆ.

ಸಿಯಾನ ಪೊಲೀಸ್ ಠಾಣೆಯ ಹೊರಗಡೆ ಬೀದಿಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ತನ್ನ ಬಜರಂಗ ದಳ ಸಹೋದ್ಯೋಗಿಗಳು ಹಾಗೂ ತಾನು ಹೊರಗಡೆ ಕುಳಿತಿದ್ದೆವು ಎಂದು ಯೋಗೇಶ್ ರಾಜ್ ವೀಡಿಯೊದಲ್ಲಿ ಹೇಳಿದ್ದಾನೆ. ತಾನು ಬಜರಂಗದಳದ ಜಿಲ್ಲಾ ಸಂಚಾಲಕ ಎಂದು 28 ಹರೆಯದ ಯೋಗೇಶ್ ವೀಡಿಯೊದಲ್ಲಿ ಒಪ್ಪಿಕೊಂಡಿದ್ದಾನೆ. ‘‘ನಾನು ಸೋಮವಾರ ಬೆಳಗ್ಗೆ ಮನೆಯಲ್ಲಿ ಇದ್ದೆ. ಕಬ್ಬಿನ ಗದ್ದೆಯಲ್ಲಿ ಗೋ ಮಾಂಸ ಪತ್ತೆಯಾಗಿದೆ ಎಂದು ಕೆಲವು ಗ್ರಾಮ ನಿವಾಸಿಗಳು ನನಗೆ ಫೋನ್ ಮಾಡಿ ತಿಳಿಸಿದರು. ನಾನು ಅಲ್ಲಿಗೆ ತೆರಳಿದೆ ಹಾಗೂ ಅನಂತರ ಅಲ್ಲಿಂದ ನೇರವಾಗಿ ಪೊಲೀಸ್ ಠಾಣೆಗೆ ಹೋದೆ’’ ಎಂದು ಆತ ವೀಡಿಯೊದಲ್ಲಿ ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News