ಜಮ್ಮುಕಾಶ್ಮೀರ: ಕಮರಿಗೆ ಬಿದ್ದ ಬಸ್: 11 ಮಂದಿ ಮೃತ್ಯು

Update: 2018-12-08 06:43 GMT

ಶ್ರೀನಗರ, ಡಿ.8: ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಪರ್ವತ ಪ್ರದೇಶದಲ್ಲಿ ಕಣಿವೆಯೊಂದಕ್ಕ ಪ್ರಯಾಣಿಕರ ಬಸ್‌ವೊಂದು ಉರುಳಿ ಬಿದ್ದ ಪರಿಣಾಮ ಕನಿಷ್ಠ 11 ಜನರು ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿದ್ದಾರೆ.

ಲೊರನ್‌ನತ್ತ ತೆರಳುತ್ತಿದ್ದ ಬಸ್ ರಸ್ತೆಯಲ್ಲಿ ಸ್ಕಿಡ್ ಆಗಿ ಮಂಡಿ ಪ್ರದೇಶದ ಆಳವಾದ ಕಣಿವೆಗೆ ಉರುಳಿಬಿದ್ದಿದೆ. ರಕ್ಷಣೆ ಹಾಗೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಗಾಯಗೊಂಡಿರುವ ಪ್ರಯಾಣಿಕರನ್ನು ಹತ್ತಿರದ ಉಪ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಲ್ಲಿ ಮೃತಪಟ್ಟಿರುವ ಎಲ್ಲ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಬಸ್ ಭಗ್ನಾವಶೇಷ ನದಿಯ ಸಮೀಪ ಬಿದ್ದಿದೆ. ಗ್ರಾಮಸ್ಥರು ಮೃತದೇಹಗಳನ್ನು ಕಣಿವೆಯಿಂದ ಮೇಲಕ್ಕೆ ರಸ್ತೆಯತ್ತ ಒಯ್ಯಲು ನೆರವಾಗಿದ್ದಾರೆ.

ಘಟನೆ ಹೇಗಾಯಿತು ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಪ್ರಾಥಮಿಕ ವರದಿ ಪ್ರಕಾರ ಬಸ್ ಚಾಲಕ ತಿರುವಿನಲ್ಲಿ ವಾಹನ ಮೇಲಿನ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News