ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ 2 ಗಂಟೆಗಳಲ್ಲೇ ರೈತರ ಸಾಲಮನ್ನಾ ಮಾಡಿದ ಕಮಲ್ ನಾಥ್

Update: 2018-12-17 17:23 GMT

ಭೋಪಾಲ,ಡಿ.17: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಎರಡು ಗಂಟಗಳ ಒಳಗೆ ಕಮಲ್ ನಾಥ್ ಮಧ್ಯ ಪ್ರದೇಶ ರೈತರ ಸಾಲ ಮನ್ನಾ ಮಾಡಿದ್ದಾರೆ. ರಾಜ್ಯದ ರೈತರ ಎರಡು ಲಕ್ಷ ರೂ.ವರೆಗಿನ ಸಾಲವನ್ನು ಮನ್ನಾ ಮಾಡುವ ದಾಖಲೆ ಪತ್ರಗಳಿಗೆ ಕಮಲ್ ನಾಥ್ ಸೋಮವಾರ ಸಹಿ ಹಾಕಿದ್ದಾರೆ.

ಈ ಸ್ಥಾನವನ್ನು ಅಲಂಕರಿಸಿದ ನಂತರ ಮೊದಲು ನಾನು ಸಹಿ ಹಾಕಿರುವುದು ರೈತರಿಗೆ ಭರವಸೆ ನೀಡಿದಂತೆ, ಅವರ ಎರಡು ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡುವ ದಾಖಲೆ ಪತ್ರಗಳಿಗೆ ಎಂದು ಕಮಲ್ ನಾಥ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಹೂಡಿಕೆಗಳ ಲಾಭಗಳನ್ನು ನೀಡುವ ನಮ್ಮ ಯೋಜನೆಗಳನ್ನು ಮಧ್ಯ ಪ್ರದೇಶದ ಶೇ.70 ಮಂದಿ ಉದ್ಯೋಗ ಗಳಿಸಿದ ನಂತರವೇ ಜಾರಿಗೆ ತರಲಾಗುವುದು. ಇತರ ರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶ ಮುಂತಾದೆಡೆಗಳಿಂದ ಇಲ್ಲಿಗೆ ಜನರು ಆಗಮಿಸುತ್ತಾರೆ ಮತ್ತು ಸ್ಥಳೀಯ ಜನರಿಗೆ ಕೆಲಸವಿರುವುದಿಲ್ಲ. ಅದಕ್ಕಾಗಿ ನಾನು ದಾಖಲೆ ಪತ್ರಗಳಿಗೆ ಸಹಿ ಹಾಕಿದ್ದೇನೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News