ಕಳೆದ ವರ್ಷ ನಿರ್ಮಾಣವಾಗಿದ್ದ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆಯಲ್ಲಿ 4 ಅಡಿ ಅಗಲದ ರಂಧ್ರ!

Update: 2018-12-18 06:03 GMT

 ಗುರುಗ್ರಾಮ, ಡಿ.18: ಕಳೆದ ವರ್ಷ ನಿರ್ಮಾಣಗೊಂಡಿದ್ದ ಗುರುಗ್ರಾಮದ ರಾಷ್ಟ್ರೀಯ ಹೆದ್ದಾರಿ-8ರ ರಾಮಪುರ ಮೇಲ್ಸೇತುವೆಯ ಸಿಮೆಂಟ್ ಎದ್ದುಹೋಗಿ ನಾಲ್ಕು ಅಡಿ ಅಗಲದ ರಂಧ್ರ ಕಾಣಿಸಿಕೊಂಡಿದ್ದು,

ಇದರಿಂದಾಗಿ ಜೈಪುರ ಹಾಗೂ ದಿಲ್ಲಿ ನಡುವಿನ ರಸ್ತೆ ಸಂಚಾರ ಬಾಧಿತವಾಗಿದೆ. ಖೆರ್ಕಿ ದುಲಾಲ್ ಟೋಲ್ ಪ್ಲಾಜಾ ಹಾಗೂ ಐಎಂಟಿ ಮನೆಸರ್ ನಡುವಿನ ಮೇಲ್ಸೇತುವೆಯನ್ನು ಕಳೆದ ವರ್ಷ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ಸಂಚಾರಕ್ಕೆ ಮುಕ್ತಗೊಳಿಸಿತ್ತು.

‘‘ರಾಮಪುರ ಮೇಲ್ಸೇತುವೆಯಲ್ಲಿ ತೂತು ಬಿದ್ದಿರುವ ಮಾಹಿತಿ ನಮಗೆ ಲಭಿಸಿದೆ. ತಕ್ಷಣವೇ ರಸ್ತೆ ಸುರಕ್ಷಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ರಸ್ತೆಯನ್ನು ಬ್ಲಾಕ್ ಮಾಡಿದ್ದಾರೆ. ಉನ್ನತ ಪ್ರಾಧಿಕಾರಕ್ಕೆ ಮಾಹಿತಿ ನೀಡಲಾಗಿದ್ದು ಅವರು ರಿಪೇರಿ ಕಾರ್ಯ ಆರಂಭಿಸಲಿದ್ದಾರೆ’’ ಎಂದು ಎನ್‌ಎಚ್‌ಎಐ ಅಧಿಕಾರಿ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News