ಲೋಕಸಭೆ ಚುನಾವಣೆಯಲ್ಲಿ ಮೋದಿ ನಾಯಕತ್ವದಲ್ಲಿ ಬಿಜೆಪಿ ಸ್ಪರ್ಧೆ: ಅಮಿತ್ ಶಾ

Update: 2018-12-19 16:22 GMT

ಮುಂಬೈ, ಡಿ. 17: 2019ರ ಲೋಕಸಭೆ ಚುನಾವಣೆಯನ್ನು ಆಡಳಿತಾರೂಢ ಎನ್‌ಡಿಎ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಎದುರಿಸಲಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬುಧವಾರ ಸ್ಪಷ್ಟಪಡಿಸಿದ್ದಾರೆ.

ರಿಪಬ್ಲಿಕ್ ಟಿ.ವಿ.ಯ ‘ಸರ್ಜಿಂಗ್ ಇಂಡಿಯಾ’ದಲ್ಲಿ ಅವರು ಮಾತನಾಡಿದರು. ‘‘ನಾಯಕತ್ವ ಬದಲಾವಣೆಯ ಯಾವುದೇ ಪ್ರಶ್ನೆ ಇಲ್ಲ. 2019ರ ಲೋಕಸಭೆ ಚುನಾವಣೆಯನ್ನು ಎನ್‌ಡಿಎ ಹಾಗೂ ಬಿಜೆಪಿ ಮೋದಿ ಅವರ ನಾಯಕತ್ವದಲ್ಲಿ ಎದುರಿಸಲಿದೆ. ನಾವು ಬಹುಮತದಲ್ಲಿ ಜಯ ಗಳಿಸಲಿದ್ದೇವೆ’’ ಎಂದು ಅವರು ಹೇಳಿದರು. 2014ರಲ್ಲಿ 6 ರಾಜ್ಯಗಳಲ್ಲಿ ಬಿಜೆಪಿ ಸರಕಾರವಿತ್ತು. ಈಗ 16 ರಾಜ್ಯಗಳಲ್ಲಿ ಬಿಜೆಪಿ ಸರಕಾರ ಇದೆ. ಹಾಗಾದರೆ ಹೇಳಿ ಯಾರು ಜಯ ಗಳಿಸುತ್ತಾರೆ ? ಎಂದು ರಿಪಬ್ಲಿಕ್ ಟಿವಿಯ ಪ್ರಶ್ನೆಗೆ ಅಮಿತ್ ಶಾ ಪ್ರತಿಕ್ರಿಯಿಸಿದರು.

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಬೇಕಾದರೆ ಅಹಂಕಾರದ ಮೋದಿ ಸ್ಥಾನಕ್ಕೆ ಸೌಮ್ಯ ಸ್ವಭಾವದ ನಿತಿನ್ ಗಡ್ಕರಿ ಅವರನ್ನು ಕೂಡಲೇ ತರುವಂತೆ ಆಗ್ರಹಿಸಿ ಮಹಾರಾಷ್ಟ್ರದ ರೈತ, ವಸಂತರಾವ್ ನಾಕ್ ಶೇತಿ ಸ್ವಾವಲಂಬನ ಮಿಶನ್‌ನ ಅಧ್ಯಕ್ಷ ಕಿಶೋರ್ ತಿವಾರಿ ಆರ್‌ಎಸ್‌ಎಸ್ ವರಿಷ್ಠ ಮೋಹನ್ ಭಾಗವತ್ ಹಾಗೂ ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಸುರೇಶ್ ಜೋಷಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಅಮಿತ್ ಶಾ ಅವರ ಈ ಹೇಳಿಕೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಲೋಕಸಭೆ ಹಾಗೂ ವಿಧಾನ ಸಭೆ ಚುನಾವಣೆಗಳಲ್ಲಿ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಪಕ್ಷ ಸ್ಪರ್ಧಿಸಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ದೇಶದ ಹಿತಾಸಕ್ತಿ ಮುಂದಿಟ್ಟುಕೊಂಡು ಸ್ಪರ್ಧಿಸಲಿದೆ ಎಂದು ಶಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News