ಮೂರನೇ ಟೆಸ್ಟ್ : ಭಾರತ ತಂಡದಿಂದ ರಾಹುಲ್, ವಿಜಯ್ ಹೊರಕ್ಕೆ

Update: 2018-12-25 09:19 GMT

ಹೊಸದಿಲ್ಲಿ, ಡಿ.25: ಆಸ್ಟ್ರೇಲಿಯ ವಿರುದ್ಧ ಮೂರನೇ ಕ್ರಿಕೆಟ್ ಟೆಸ್ಟ್ ಗೆ(ಬಾಕ್ಸಿಂಗ್ ಡೇ ಟೆಸ್ಟ್ ) ಭಾರತದ ಕ್ರಿಕೆಟ್ ತಂಡ ಪ್ರಕಟಗೊಂಡಿದ್ದು, ಆರಂಭಿಕ ದಾಂಡಿಗರಾದ ಲೋಕೇಶ್ ರಾಹುಲ್ ಮತ್ತು ಮುರಳಿ ವಿಜಯ್ ಅವರನ್ನು ಕೈ ಬಿಡಲಾಗಿದೆ.

ಇನ್ನು ಟೆಸ್ಟ್ ಕ್ಯಾಪ್ ಧರಿಸದ ಮಯಾಂಕ್ ಅಗರ್ ವಾಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಏಕದಿನ ತಂಡದ ಉಪನಾಯಕ ರೋಹಿತ್ ಶರ್ಮಾ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ವೇಗಿ ಉಮೇಶ್ ಯಾದವ್ ಬದಲಿಗೆ ಆಲ್ ರೌಂಡರ್ ರವೀಂದ್ರ ಜಡೇಜ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಆರಂಭಿಕ ದಾಂಡಿಗರಾದ  ಮುರಳಿ ವಿಜಯ್  ಎರಡು ಟೆಸ್ಟ್  ಗಳಲ್ಲಿ  49ರನ್ (11, 18, 0,20) ಗಳಿಸಿದರೆ, ರಾಹುಲ್  48 ರನ್ (2, 44, 2, 0)  ಗಳಿಸಿದ್ದಾರೆ. ಕಳಪೆ ಫಾರ್ಮ್ ನ ಕಾರಣದಿಂದಾಗಿ ಇವರನ್ನು ತಂಡದಿಂದ ಕೈ ಬಿಡಲಾಗಿದೆ.

ಪ್ರಥ್ವಿ ಶಾ    ಗಾಯಗೊಂಡಿದ್ದಾರೆ. ಆದರೆ ಇವರ ಬದಲಿಗೆ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ಮಯಾಂಕ್ ಅಗರ್ ವಾಲ್ ಇನಿಂಗ್ಸ್ ಆರಂಭಿಸುವ ಸಾಧ್ಯತೆಯ ಬಗ್ಗೆ ಕೋಚ್ ರವಿ ಶಾಸ್ತ್ರಿ ಅವರಲ್ಲಿ ಪ್ರಶ್ನಿಸಿದಾಗ ಟೆಸ್ಟ್ ಆರಂಭಗೊಳ್ಳುವ 24 ಗಂಟೆಗಳ ಒಳಗಾಗಿ ಟೀಮ್ ಮ್ಯಾನೇಜ್ ಮೆಂಟ್ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.

ಮೂರನೇ ಟೆಸ್ಟ್ ಗೆ ತಂಡ

ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಮಯಾಂಕ್ ಅಗರ್ ವಾಲ್ , ಹನುಮ ವಿಹಾರಿ, ಚೇತೇಶ್ವರ್ ಪೂಜಾರ , ರೋಹಿತ್ ಶರ್ಮಾ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜ, ಮುಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್ ಪ್ರೀತ್ ಬುಮ್ರಾ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News