ತಮಿಳು ನಟ ಚೀನು ಮೋಹನ್ ನಿಧನ

Update: 2018-12-27 08:56 GMT

ಚೆನ್ನೈ, ಡಿ.27: ತಮಿಳು ನಟ ಹಾಗೂ ರಂಗಭೂಮಿ ಕಲಾವಿದ ಚೀನು ಮೋಹನ್ ಗುರುವಾರ ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟರು. ಅವರಿಗೆ 62 ವಷ ವಯಸ್ಸಾಗಿತ್ತು.

ಚೀನು ಮೋಹನ್ 1980ರ ದಶಕದಲ್ಲಿ ನಟನಾವೃತ್ತಿ ಆರಂಭಿಸಿದ್ದರು. ವರುಷಂ ಪದಿನಾರು(1989), ಮಣಿ ರತ್ನರ ಅಂಜಲಿ(1990) ಹಾಗೂ ಥಲಪಥಿ(1991)ಸಹಿತ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಕ್ರೇಜಿ ಮೋಹನ್ ನಿರ್ದೇಶನದ ನಾಟಕಗಳಲ್ಲಿ ಪ್ರಮುಖ ಪಾತ್ರನಿರ್ವಹಿಸಿದ್ದರು.

 ಕ್ರೇಜಿ ಮೋಹನ್ ನಾಟಕ ಮಂಡಳಿಯಲ್ಲಿ ದೀರ್ಘ ಸಮಯ ನಟಿಸಿದ್ದರು. 'ಜುರಾಸಿಕ್ ಬೇಬಿ' ಅವರಿಗೆ ಹೆಚ್ಚು ಪ್ರಸಿದ್ದಿ ತಂದುಕೊಟ್ಟ ನಾಟಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News