ಮುಸ್ಲಿಮರ ವಿರುದ್ಧದ ಟ್ವಿಟ್ಟರ್ ಟ್ರೋಲ್ ಗಳ ಬಾಯಿ ಮುಚ್ಚಿಸಿದ ಲೆಫ್ಟಿನೆಂಟ್ ಜನರಲ್ ಸಯ್ಯದ್ ಅತಾ ಹಸ್ನೈನ್

Update: 2018-12-28 08:20 GMT

ಹೊಸದಿಲ್ಲಿ, ಡಿ.28: ‘‘ನಾನು ಕೂಡ ಅದೇ ಸಮುದಾಯದವ’’ ಎಂಬ ಸರಳ ಸತ್ಯವನ್ನು ಮುಂದಿಡುವ ಮೂಲಕ ದೇಶದ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿರುವ ಟ್ವಿಟ್ಟರ್ ಟ್ರೋಲ್ ಗಳ ಬಾಯ್ಮುಚ್ಚಿಸಿದ್ದಾರೆ ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಸಯ್ಯದ್ ಅತಾ ಹಸ್ನೈನ್ 

ಇಸ್ಲಾಂ ಧರ್ಮ ಒಂದು ತೀವ್ರವಾದಿ ಧರ್ಮ ಹಾಗೂ ಉಗ್ರವಾದ ಅದರಲ್ಲಿ ವ್ಯಾಪಕವಾಗಿದೆ ಎಂದು ಇಸ್ಲಾಂ ಧರ್ಮವನ್ನು ಗುರಿಯಾಗಿಸಿ ಟ್ವೀಟುಗಳ ಮಹಾಪೂರವೇ ಹರಿದಿದ್ದನ್ನು ಕಂಡು ಹಸ್ನೈನ್ ಮೇಲಿನಂತೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಉತ್ತರ ಪ್ರದೇಶ ಹಾಗೂ ದಿಲ್ಲಿಯಲ್ಲಿ ಇತ್ತೀಚೆಗೆ ಐಸಿಸ್ ಜಾಲವನ್ನು ಎನ್‌ಐಎ ಬೇಧಿಸಿದ ಕುರಿತಾಗಿ ದೂರದರ್ಶನದಲ್ಲಿ ನಡೆಯುವ ಚರ್ಚಾ ಕಾರ್ಯಕ್ರಮದಲ್ಲಿ ತಾನು ಭಾಗವಹಿಸುವುದಾಗಿ ಅವರು ಹೇಳಿಕೊಂಡ ನಂತರ ಈ ವಾದ ವಿವಾದ ಎದ್ದಿತ್ತು. ಆರಂಭದಲ್ಲಿ ಚೆನ್ನಾಗಿಯೇ ನಡೆದ ಟ್ವಿಟ್ಟರ್ ಚರ್ಚೆ ನಂತರ ವಿಕೋಪಕ್ಕೆ ತಿರುಗಿತ್ತಲ್ಲದೆ ಕೆಲ ಬಲಪಂಥೀಯರು ಮುಸ್ಲಿಂ ಸಮುದಾಯವನ್ನೇ ಅವಹೇಳನ ಮಾಡಲು ಆರಂಭಿಸಿದ್ದರು.

ಆದರೆ ನಿವೃತ್ತ ಲೆಫ್ಟಿನೆಂಟ್ ಜನರಲ್ ಮಾತ್ರ ತಾಳ್ಮೆ ಕಳೆದುಕೊಳ್ಳದೆ ಉತ್ತರಿಸಿದರಲ್ಲದೆ, ‘‘ನನ್ನ ಹೇಳಿಕೆಗಳು ಯಾವುದೇ ಒಂದು ಕಡೆ ವಾಲಿದ್ದನ್ನು ನೋಡಿದ್ದೀರಾ?"’ ಎಂದು ತಮ್ಮ ಟ್ವೀಟ್ ನಲ್ಲಿ ಪ್ರಶ್ನಿಸಿದರು. ಸೇನೆಯವರು ತಮ್ಮ ನಿಲುವಿನಿಂದ ಕದಲುವುದಿಲ್ಲ, ಎಂದು ಹೇಳಿದ ಅವರು ಕೊನೆಗೆ ‘‘ನಾನು ಕೂಡ ಅದೇ ಸಮುದಾಯದವ. ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡಬೇಡಿ. ನೀವು ಎಲ್ಲರಿಗೂ ಹಣೆಪಟ್ಟಿ ಹಚ್ಚಿ ಒಂದೇ ಬ್ರಶ್ ನಿಂದ ಬಣ್ಣ ಹಚ್ಚಿ ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲ, ಅದೇ ತಪ್ಪು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News