2018ರಲ್ಲಿ 7.25 ಲಕ್ಷ ಕೋಟಿ ರೂ. ಕಳೆದುಕೊಂಡ ಹೂಡಿಕೆದಾರರು

Update: 2018-12-31 15:57 GMT

ಹೊಸದಿಲ್ಲಿ,ಡಿ.31: ಸೂಕ್ಷ್ಮ ಮಾರುಕಟ್ಟೆ ಪರಿಸ್ಥಿತಿಯ ಕಾರಣ 2018ರಲ್ಲಿ ಹೂಡಿಕೆದಾರರು 7.25 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ ಎಂದು ಶೇರುಪೇಟೆ ವರದಿ ತಿಳಿಸಿದೆ. ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಕಂಪೆನಿಗಳ ಮಾರುಕಟ್ಟೆ ಬಂಡವಾಳೀಕರಣವು ಈ ವರ್ಷ 7,25,401.31 ಕೋಟಿ ರೂ. ಕುಸಿದಿದೆ ಎಂದು ವರದಿ ತಿಳಿಸಿದೆ.

2018ರ ಆಗಸ್ಟ್ 29ರಂದು 38,989.65ಕ್ಕೆ ಏರಿದ್ದ ಸೆನ್ಸೆಕ್ಸ್ ವರ್ಷದ ಕೊನೆಯಲ್ಲಿ 2,921.32 ಅಂಕಗಳನ್ನು ಕಳೆದುಕೊಂಡು 36,068.33ಕ್ಕೆ ಕುಸಿದಿತ್ತು. ವರ್ಷದ ಕೊನೆಯ ದಿನ ಮಾರುಕಟ್ಟೆ ಏರುಗತಿಯಲ್ಲಿ ತೆರೆದುಕೊಂಡರೂ ಜಾಗತಿಕ ಮಾರುಕಟ್ಟೆಯಲ್ಲಿ ಮಿಶ್ರ ಪ್ರತಿಕ್ರಿಯೆ, ಯಾವುದೇ ಹೊಸ ಸುದ್ದಿ ಇಲ್ಲದಿರುವ ಕಾರಣ ಯಾವುದೇ ಏರಿಕೆ ಕಾಣದೆ ಪೇಲವವಾಗಿ ಕೊನೆಯಾಯಿತು ಎಂದು ಎಂಕೆ ವೆಲ್ತ್ ಮ್ಯಾನೆಜ್ಮೆಂಟ್‌ನ ಮುಖ್ಯಸ್ಥ ಜೋಸೆಫ್ ಥೋಮಸ್. 2018 ಶೇರು ಮಾರುಕಟ್ಟೆಗೆ ದೇಶೀಯ ಮತ್ತು ಜಾಗತಿಕವಾಗಿ ಸವಾಲಿನಿಂದ ಕೂಡಿತ್ತು. 2019ರಲ್ಲಿ ತಕ್ಷಣದ ಗಮನ ಲೋಕಸಭೆ ಚುನಾವಣೆಯ ಮೇಲಿದ್ದರೂ, ಫೆಡ್ ಮತ್ತು ಆರ್‌ಬಿಐಯ ಬಡ್ಡಿದರ ನೀತಿ, ತೈಲಬೆಲೆ, ಅಮೆರಿಕ-ಚೀನಾ ದರ ಸಮರ ಮತ್ತು ಬ್ರೆಕ್ಸಿಟ್ ಆತಂಕ ಈ ಅಂಶಗಳು ಮುಖ್ಯವಾಗಿ ಮಾರುಕಟ್ಟೆಯ ದಿಕ್ಕನ್ನು ನಿರ್ಧರಿಸಲಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News