ಪತ್ರಿಕಾ ಜಾಹೀರಾತುಗಳಿಗಾಗಿ 1,856 ಕೋಟಿ ರೂ. ವೆಚ್ಚ ಮಾಡಿದ ಕೇಂದ್ರ ಸರಕಾರ

Update: 2019-01-01 08:11 GMT

ಹೊಸದಿಲ್ಲಿ, ಜ.1: ಕಳೆದ ಮೂರು ವರ್ಷಗಳಲ್ಲಿ ದಿನಪತ್ರಿಕೆಗಳು ಹಾಗೂ ನಿಯತಕಾಲಿಕಗಳಲ್ಲಿ ಜಾಹೀರಾತು ಪ್ರಕಟಿಸಲು ಸರಕಾರ 1,856.82 ಕೋಟಿ ರೂ. ವ್ಯಯಿಸಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ರಾಜ್ಯವರ್ಧನ್ ರಾಥೋಡ್ ಸೋಮವಾರ  ರಾಜ್ಯಸಭೆಗೆ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದ್ದಾರೆ.

ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳ ಪರವಾಗಿ  ಬ್ಯುರೋ ಆಫ್ ಔಟ್ರೀಚ್ ಆ್ಯಂಡ್ ಕಮ್ಯುನಿಕೇಶನ್ಸ್ ಈ ಹಣ ಖರ್ಚು ಮಾಡಿದೆ ಎಂದು ಸಚಿವರು ತಿಳಿಸಿದ್ದಾರೆ.

ಆರ್ಥಿಕ ವರ್ಷ 2015-16ರಲ್ಲಿ ಒಟ್ಟು 20,111 ಜಾಹೀರಾತುಗಳಿಗಾಗಿ ರೂ 579.88 ಕೋಟಿ ವೆಚ್ಚ ಮಾಡಲಾಗಿದ್ದರೆ, ಮುಂದಿನ ವರ್ಷ 21,576 ಜಾಹೀರಾತುಗಳಿಗಾಗಿ ರೂ 626.82 ಕೋಟಿ ವೆಚ್ಚ ಮಾಡಲಾಗಿತ್ತು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

2017-18ರಲ್ಲಿ ಒಟ್ಟು 11,798 ಜಾಹೀರಾತು ರಿಲೀಸ್ ಆರ್ಡರ್ ಇತ್ತು ಹಾಗೂ ಇದರ ಒಟ್ಟು ವೆಚ್ಚ ರೂ 648.82 ಕೋಟಿಯಾಗಿದೆ ಎಂಬ ಮಾಹಿತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News