ಸಂಸತ್ತಿನಲ್ಲಿ ಪ್ರಧಾನಿಗೆ ಓಪನ್ ಬುಕ್ ಪರೀಕ್ಷೆ: ನಾಲ್ಕು ಪ್ರಶ್ನೆ ಮುಂದಿಟ್ಟ ರಾಹುಲ್ ಗಾಂಧಿ

Update: 2019-01-03 05:49 GMT

ಹೊಸದಿಲ್ಲಿ, ಜ.3: ರಫೇಲ್ ಒಪ್ಪಂದದಲ್ಲಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಆಡಿಯೋ ಟೇಪ್ ಒಂದನ್ನು ಬುಧವಾರ ಬಿಡುಗಡೆ ಮಾಡಿತ್ತು. ಈ ವಿಚಾರ ಸಂಸತ್ ಅಧಿವೇಶನದಲ್ಲೂ ಮೊಳಗಿತು. ಅಧಿವೇಶನ ಮುಗಿದ ಮೂರನೇ ಗಂಟೆಗಳಲ್ಲಿ ರಾಹುಲ್ ಟ್ವೀಟ್ ಮಾಡಿದ್ದು, ‘‘ಸಂಸತ್ತಿನಲ್ಲಿ ಮೋದಿ ಗುರುವಾರ ಓಪನ್ ಪರೀಕ್ಷೆ ಎದುರಿಸಬೇಕು’’ ಎಂದು ಬರೆದುಕೊಂಡಿರುವ ಅವರು, ನಾಲ್ಕು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

1.ಭಾರತೀಯ ವಾಯುಪಡೆಗೆ 126 ಯುದ್ಧ ವಿಮಾನಗಳ ಅಗತ್ಯತೆ ಇರುವಾಗ ಕೇವಲ 36 ವಿಮಾನಗಳನ್ನು ತರಿಸಿಕೊಳ್ಳುತ್ತಿರುವುದೇಕೆ?

2.ಪ್ರತಿ ಯುದ್ಧ ವಿಮಾನಕ್ಕೆ 560 ಕೋ.ರೂ. ಬದಲು 1,600 ಕೋ.ರೂ. ಪಾವತಿಸುತ್ತಿರುವುದೇಕೆ?

3.ಎಚ್‌ಐಎಲ್ ಬದಲು ಎಎ ಆಯ್ಕೆ ಮಾಡಿಕೊಂಡಿದ್ದೇಕೆ?

ಈ ಪ್ರಶ್ನೆಗಳಿಗೆ ಮೋದಿ ಉತ್ತರಿಸುತ್ತಾರೋ ಅಥವಾ ಬೇರೆಯವರಿಂದ ಉತ್ತರ ಹೇಳಿಸುತ್ತಾರೋ ಎಂದು ಪ್ರಶ್ನಿಸಿದ್ದಾರೆ.

ಇನ್ನು ಮೂರನೇ ಪ್ರಶ್ನೆಯನ್ನು ಕೇಳದೇ ಇರುವುದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ. ‘‘ಆಡಿಯೋ ಟೇಪ್ ಬಗ್ಗೆ ಮಾತನಾಡದಂತೆ ಸ್ಪೀಕರ್ ಅವರು ಸೂಚಿಸಿದ್ದಾರೆ. ಹಾಗಾಗಿ ಆ ಕುರಿತು ಮಾತನಾಡಿಲ್ಲ. ಆದರೂ ಈಗ ಕೇಳುತ್ತಿದ್ದೇನೆ. ರಫೇಲ್ ಕಡತಗಳನ್ನು ಮನೋಹರ್ ಪಾರಿಕ್ಕರ್ ಅವರು ತಮ್ಮ ಬೆಡ್ ರೂಮ್‌ನಲ್ಲಿ ಏಕೆ ಇರಿಸಿಕೊಂಡಿದ್ದರು? ಅದರಲ್ಲೇನಿತ್ತು? ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News