ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧದ ಹರತಾಳ: ಕೇರಳ ಸಿಎಂ ಪಿಣರಾಯಿ ವಿಜಯನ್

Update: 2019-01-03 11:05 GMT

ಕೊಚ್ಚಿ, ಜ.3: ಶಬರಿಮಲೆಗೆ 50 ವರ್ಷ ಕೆಳಗಿನ ಇಬ್ಬರು ಮಹಿಳೆಯರು ಪ್ರವೇಶಿಸಿರುವುದನ್ನು ವಿರೋಧಿಸಿ ಬಿಜೆಪಿ ಹಾಗೂ ಆರೆಸ್ಸೆಸ್ ಬೆಂಬಲಿತ ಸಂಘಟನೆಗಳು ಇಂದು ನೀಡಿರುವ  ಬಂದ್ ಕರೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಂದ ತೀವ್ರ ಟೀಕೆಗೆ ಗುರಿಯಾಗಿದೆ.

"ಎಲ್ಲಾ ವಯಸ್ಸಿನ ಮಹಿಳೆಯರಿಗೂ ದೇವಳಕ್ಕೆ ಪ್ರವೇಶಿಸಲು ಅನುಮತಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿರುವಾಗ ಮಹಿಳೆಯರ ಪ್ರವೇಶ ವಿರೋಧಿಸಿ ಹರತಾಳಕ್ಕೆ ಕರೆ ನೀಡಿರುವುದು ಸುಪ್ರೀಂ ಕೋರ್ಟಿನ  ತೀರ್ಪನ್ನೇ ಪ್ರಶ್ನಿಸಿದಂತೆ'' ಎಂದು ತಿರುವನಂತಪುರಂನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ವಿಜಯನ್ ಹೇಳಿದರು.

ಮಹಿಳೆಯರು ಪ್ರವೇಶಿಸಿದ ನಂತರ ದೇವಳದಲ್ಲಿ ಶುದ್ಧೀಕರಣ ಕಾರ್ಯ ಕೈಗೊಳ್ಳಲು ದೇವಳವನ್ನು ಮುಚ್ಚಿದ ಶಬರಿಮಲೆ ತಂತ್ರಿಯ  ಕ್ರಮವನ್ನು ಟೀಕಿಸಿದ ಮುಖ್ಯಮಂತ್ರಿ, ತಂತ್ರಿ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧವಾಗಿದ್ದರೆ ಅವರು ರಾಜೀನಾಮೆ ನೀಡಬೇಕಿತ್ತು ಎಂದರು.

`ನಿನ್ನೆಯಿಂದ ಕೇರಳದಲ್ಲಿ ಹಲವಾರು  ಹಿಂಸಾತ್ಮಕ ಪ್ರಕರಣಗಳು ವರದಿಯಾಗಿವೆ ಇವು ಸಂಘ ಪರಿವಾರದ ಸಂಘಟಿತ ಕ್ರಮ. ಇಂತಹವುಗಳನ್ನು ಬಲವಾಗಿ ವಿರೋಧಿಸಬೇಕು. ಯಾವುದೇ ಹಿಂಸೆಯನ್ನು ಬೆಂಬಲಿಸಲು ಸಾಧ್ಯವಿಲ್ಲ'' ಎಂದು ಅವರು ಹೇಳಿದರು.

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಾದ ವಿವಿಧ ಹಿಂಸಾತ್ಮಕ ಘಟನೆಗಳನ್ನೂ ಮುಖ್ಯಮಂತ್ರಿ ಈ ಸಂದರ್ಭ ಪಟ್ಟಿ ಮಾಡಿದರು. ರಾಜ್ಯದಲ್ಲಿ ಒಟ್ಟು 73 ರಾಜ್ಯ ಸಾರಿಗೆ ಬಸ್ಸುಗಳ ಮೇಲೆ ದಾಳಿ ನಡೆಸಲಾಗಿದ್ದು 31 ಪೊಲೀಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.

ಮಂಗಳವಾರದ ಮಹಿಳಾ ಗೋಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಲವರ ಮೇಲಿನ ಹಲ್ಲೆಯನ್ನೂ ಸಿಎಂ ಪಿಣರಾಯಿ ವಿಜಯನ್ ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News