ಗಂಟಲು ಸ್ವಚ್ಛಗೊಳಿಸುತ್ತಿದ್ದಾಗ ಆಕಸ್ಮಿಕವಾಗಿ ಟೂತ್ ಬ್ರಶ್ ನುಂಗಿದ ವ್ಯಕ್ತಿ !

Update: 2019-01-03 18:11 GMT

ಹೊಸದಿಲ್ಲಿ, ನ. 3: ಮೂವತ್ತಾರು ವಯಸ್ಸಿನ ವ್ಯಕ್ತಿಯೋರ್ವ ಗಂಟಲು ಸ್ವಚ್ಛಗೊಳಿಸುತ್ತಿದ್ದಾಗ ಆಕಸ್ಮಿಕವಾಗಿ ಟೂತ್ ಬ್ರಶ್ ನುಂಗಿದ್ದು, ಅನಂತರ ಏಮ್ಸ್‌ನ ವೈದ್ಯರು ಆತನ ಹೊಟ್ಟೆಯಿಂದ ಟೂತ್‌ಬ್ರಶ್ ಹೊರ ತೆಗೆದ ವಿಚಿತ್ರ ಘಟನೆ ಹೊಸದಿಲ್ಲಿಯಲ್ಲಿ ಗುರುವಾರ ನಡೆದಿದೆ.

ದಿಲ್ಲಿ ಸೀಮಾಪುರಿಯ ನಿವಾಸಿ ಅವಿದ್ ಡಿಸೆಂಬರ್ 8ರಂದು ಗಂಟಲು ಸ್ವಚ್ಛಗೊಳಿಸುತ್ತಿದ್ದಾಗ ಆಕಸ್ಮಿಕವಾಗಿ ಟೂತ್‌ಬ್ರಶ್ ನುಂಗಿದ್ದ. ಮರುದಿನ ಆತನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಆತನನ್ನು ಗುರು ತೇಗ್ ಬಹದ್ದೂರ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಆದರೂ ಅವಿದ್ ಟೂತ್ ಬ್ರಶ್ ನುಂಗಿದ ವಿಚಾರವನ್ನು ವೈದ್ಯರಿಗೆ ತಿಳಿಸಲಿಲ್ಲ. ವೈದ್ಯರು ಸಿಟಿ ಸ್ಕಾನ್ ಮಾಡಿದಾಗ ಬಾಹ್ಯ ವಸ್ತುವೊಂದು ದೇಹ ಸೇರಿರುವುದು ಕಂಡು ಬಂತು. ಅನಂತರ ಅವಿದ್ ಟೂತ್ ಬ್ರಶ್ ನುಂಗಿರುವುದಾಗಿ ವೈದ್ಯರಿಗೆ ತಿಳಿಸಿದ.

ಅನಂತರ ಆತನನ್ನು ಎಂಡೋಸ್ಕೋಪಿಗೆ ಎಐಐಎಂಎಸ್‌ಗೆ ಶಿಫಾರಸು ಮಾಡಲಾಯಿತು. ಡಿಸೆಂಬರ್ 10ರಂದು ಎಂಡೋಸ್ಕೋಪಿ ನಡೆಸಿದ ವೈದ್ಯರು ಅವಿದ್‌ನ ಹೊಟ್ಟೆಯ ಮೇಲ್ಭಾಗದಲ್ಲಿದ್ದ 12 ಸೆಂಟಿ ಮೀಟರ್ ಉದ್ದವಿದ್ದ ಬ್ರಶ್ ಅನ್ನು ಹೊರ ತೆಗೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News