ಮಹಿಳೆಯರಿಂದ ಶಬರಿಮಲೆ ಪ್ರವೇಶ ‘ಹೇಡಿತನದ ವರ್ತನೆ’ ಎಂದ ಮಾಜಿ ಇಸ್ರೋ ಮುಖ್ಯಸ್ಥ

Update: 2019-01-05 16:50 GMT

ಹೈದರಾಬಾದ್, ಜ. 5: ಶಬರಿಮಲೆ ದೇವಾಲಯಕ್ಕೆ ಋತುಚಕ್ರದ ಇಬ್ಬರು ಮಹಿಳೆಯರು ಪ್ರವೇಶಿಸಿರುವುದನ್ನು ‘ಹೇಡಿತನದ ವರ್ತನೆ’ ಎಂದು ಇತ್ತೀಚೆಗೆ ಬಿಜೆಪಿ ಸೇರಿದ ಬಾಹ್ಯಾಕಾಶ ವಿಜ್ಞಾನಿ ಜಿ. ಮಾಧವನ್ ನಾಯರ್ ಹೇಳಿದ್ದಾರೆ

 ಇಸ್ರೋದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ನಾಯರ್, ಕಳೆದ ವರ್ಷ ಮಹಾಮಳೆಯಿಂದ ಉದ್ಭವಿಸಿದ ನೆರೆಯಿಂದ ಸರ್ವ ನಾಶವಾಗಿದ್ದ ಕೇರಳವನ್ನು ಮರು ರೂಪಿಸಲು ಎಲ್‌ಡಿಎಫ್ ಸರಕಾರ ಗಮನ ಹರಿಸಬೇಕು ಎಂದು ಹೇಳಿದ್ದಾರೆ.

 ಕ್ಷುಲ್ಲಕ (ಶಬರಿಮಲೆ) ವಿಷಯಕ್ಕಾಗಿ ಸರಕಾರ ತನ್ನ ಶಕ್ತಿ ವ್ಯಯ ಮಾಡುತ್ತಿದೆ. ನೆರೆಯಿಂದಾಗಿ ಕೇರಳಕ್ಕೆ ಅಪಾರ ಹಾನಿಯಾಗಿದೆ. ಮರು ನಿರ್ಮಾಣ ಹಾಗೂ ಪುನರ್ವಸತಿ ಚಟುವಟಿಕೆಗಳು ನಿಧಾನ ಗತಿಯಲ್ಲಿ ಸಾಗುತ್ತಿದೆ ಎಂದು ಅವರು ಹೇಳಿದರು. ಶಬರಿಮಲೆ ದೇವಾಲಯಕ್ಕೆ ಬುಧವಾರ ಇಬ್ಬರು ಋತುಚಕ್ರ ವಯೋಮಾನದ ಮಹಿಳೆಯರು ಪ್ರವೇಶಿಸಿರುವುದನ್ನು ‘‘ಹೇಡಿತನದ ವರ್ತನೆ’’ ಎಂದು ಹೇಳಿರುವ ಅವರು ಇದು ಸರಕಾರ ಪ್ರಾಯೋಜಿತ ಕಾರ್ಯಾಚರಣೆ ಎಂದು ಆರೋಪಿಸಿದರು.

ಇದನ್ನು ಯಾರು ಬೇಕಾದರೂ ಮಾಡಬಹುದು. ಇದೆಲ್ಲವನ್ನೂ ಮದ್ಯರಾತ್ರಿ ಮಾಡಲಾಗಿದೆ. ಕತ್ತಲೆಯಲ್ಲಿ ಮಾಡಲಾಗಿದೆ ಎಂದು ಅವರು ಹೇಳಿದರು.

ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಶಾಂತಿಯುತವಾಗಿದ್ದ ಕೇರಳದ ವಾತಾವರಣ ಕದಡಿದೆ ಎಂದು ಮಾಧವನ್ ನಾಯರ್ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News