ಮೀ ಟೂ ಪ್ರಕರಣ: ಅಲೋಕ್‌ನಾಥ್‌ಗೆ ನಿರೀಕ್ಷಣಾ ಜಾಮೀನು

Update: 2019-01-05 17:53 GMT

ಮುಂಬೈ, ಜ.5: ಹಿರಿಯ ನಟ ಅಲೋಕ್‌ನಾಥ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಸಿನೆಮಾ ಸಾಹಿತಿ, ನಿರ್ದೇಶಕಿ ವಿನುತಾ ನಂದಾ ಮಾಡಿರುವ ಆರೋಪದ ಬಳಿಕ ಅಲೋಕ್‌ನಾಥ್ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಶನಿವಾರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿದೆ.

90ರ ದಶಕದ ಜನಪ್ರಿಯ ಟಿವಿ ಕಾರ್ಯಕ್ರಮ ‘ತಾರ’ದ ಸೆಟ್‌ನಲ್ಲಿ ಅಲೋಕ್‌ನಾಥ್ ತನ್ನೊಡನೆ ಅನುಚಿತವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು 19 ವರ್ಷದ ಬಳಿಕ, 2018ರ ಅಕ್ಟೋಬರ್‌ನಲ್ಲಿ ನಂದಾ ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಹಾಕಿದ್ದರು.

ಬಳಿಕ ಸಿನೆಮ ಮತ್ತು ಟಿವಿ ಕಲಾವಿದರ ಸಂಘವು ಅಲೋಕ್‌ನಾಥ್‌ಗೆ ನೋಟಿಸ್ ಕಳಿಸಿತ್ತು. ಅಲೋಕ್‌ನಾಥ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಅಕ್ಟೋಬರ್ 18ರಂದು ನಂದಾ ಪೊಲೀಸರಿಗೆ ಕೋರಿಕೆ ಸಲ್ಲಿಸಿದ್ದರು.

ಇದೀಗ ನಗರದ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಅಲೋಕ್‌ನಾಥ್‌ಗೆ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News