ಶೀಘ್ರ ಡ್ರೈವಿಂಗ್ ಲೈಸೆನ್ಸ್ ನೊಂದಿಗೆ ಆಧಾರ್ ಲಿಂಕಿಂಗ್ ಕಡ್ಡಾಯ

Update: 2019-01-06 16:33 GMT

ಹೊಸದಿಲ್ಲಿ,ಜ.6: ಶೀಘ್ರದಲ್ಲೇ ಚಾಲನ ಪರವಾನಿಗೆಗೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಪಂಜಾಬ್‌ನ ಪಗ್ವಾರದಲ್ಲಿ ನಡೆದ 106ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ನಲ್ಲಿ ಮಾತನಾಡುವ ವೇಳೆ ಅವರು ಈ ಮಾಹಿತಿ ನೀಡಿದ್ದಾರೆ. ಚಾಲನ ಪರವಾನಿಗೆಗೆ ಆಧಾರ್ ಜೋಡಣೆಯಿಂದ ಲಾಭವೇನು ಎಂಬ ಬಗ್ಗೆ ವಿವರಿಸಿದ ಸಚಿವರು, ಚಾಲಕನೊಬ್ಬ ನಾಲ್ಕು ಮಂದಿಯ ಸಾವಿಗೆ ಕಾರಣವಾಗಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಪರಾರಿಯಾಗಿ ಅಲ್ಲಿ ನಕಲಿ ಚಾಲನ ಪರವಾನಿಗೆ ಮಾಡಲು ಪ್ರಯತ್ನಿಸಿದಾಗ ಆತ ಎಲ್ಲ ನಕಲಿ ದಾಖಲೆಗಳನ್ನು ಒದಗಿಸಬಹುದು. ಆದರೆ ಆತ ತನ್ನ ದೇಹದ ಗುರುತುಗಳನ್ನು ನಕಲಿ ನೀಡಲು ಸಾಧ್ಯವಿಲ್ಲ. ಹಾಗಾಗಿ ಆತ ನಕಲಿ ಪರವಾನಿಗೆ ಪಡೆಯಲು ಪ್ರಯತ್ನಿಸಿದ ಕೂಡಲೇ ಸಿಕ್ಕಿಬೀಳುತ್ತಾನೆ ಎಂದು ತಿಳಿಸಿದ್ದಾರೆ.

ಆಧಾರ್ ಕಡ್ಡಾಯ ಜೋಡಣೆಯಿಂದ ನಕಲಿ ಚಾಲನಾ ಪರವಾನಿಗೆಯ ಹಾವಳಿ ತಪ್ಪುತ್ತದೆ. ಜೊತೆಗೆ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ನಿಮ್ಮ ಮೇಲೆ ಹಾಕಲಾಗಿರುವ ದಂಡಗಳ ಬಗ್ಗೆಯೂ ಅದರಲ್ಲಿ ಮಾಹಿತಿ ಲಭ್ಯವಿರುವುದರಿಂದ ದಂಡ ಪಾವತಿಸದೆ ವಾಹನ ಚಾಲನೆ ಮಾಡುವುದು ಕಷ್ಟವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News