ಸಿಬಿಐ ಮುಖ್ಯಸ್ಥರ ವಿರುದ್ದ ಆದೇಶ ನೀಡಲು ಸಿವಿಸಿಗೆ ಕಾರಣವಾದ ಸಂದರ್ಭ ದುರಾದೃಷ್ಟಕರ: ಸುಪ್ರೀಂ ಕೋರ್ಟ್

Update: 2019-01-08 18:12 GMT

ಹೊಸದಿಲ್ಲಿ, ಜ. 7: ಕೇಂದ್ರ ವಿಚಕ್ಷಣಾ ಆಯೋಗಕ್ಕೆ ಸಂಪುಟ ಕಾರ್ಯದರ್ಶಿ ಭ್ರಷ್ಟಾಚಾರದ ದೂರು ರವಾನಿಸಿದ ಹಿನ್ನೆಲೆಯಲ್ಲಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರು ರಜೆಯಲ್ಲಿ ತೆರಳುವಂತೆ ಕೇಂದ್ರ ವಿಚಕ್ಷಣಾ ಆಯೋಗ ಆದೇಶ ನೀಡಲು ಕಾರಣವಾದ ಸನ್ನಿವೇಶ ‘ದುರಾದೃಷ್ಟಕರ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೇಂದ್ರ ವಿಚಕ್ಷಣಾ ಆಯೋಗದ ಆದೇಶ ತಿರಸ್ಕರಿಸಿರುವ ಸುಪ್ರೀಂ ಕೋರ್ಟ್ ಅಲೋಕ್ ವರ್ಮಾ ಅವರನ್ನು ಸಿಬಿಐಗೆ ಮರು ನೇಮಕ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪೀಠ, ಕೇಂದ್ರ ವಿಚಕ್ಷಣಾ ಆಯೋಗದ ಆದೇಶ ‘ದೀರ್ಘ ಹಾಗೂ ವಿಸ್ತಾರವಾಗಿದೆ’. ಸಂಪುಟ ಕಾರ್ಯದರ್ಶಿ ಅವರ ಆಗಸ್ಟ್ 31ರ ಪತ್ರ ದೊಂದಿಗೆ 2018 ಆಗಸ್ಟ್ 24ರ ದಿನಾಂಕದ ದೂರನ್ನು ರವಾನಿಸಲಾ ಗಿತ್ತು. ಈ ದೂರು ಅಲೋಕ್ ವರ್ಮಾ ಅವರ ಭ್ರಷ್ಟಾಚಾರವನ್ನು ಮೇಲ್ನೋಟಕ್ಕೆ ಬಹಿರಂಗಪಡಿಸಿತ್ತು ಎಂದಿದೆ. ಸಿಬಿಐ ನಿರ್ದೇಶಕ ವರ್ಮಾ ಅವರು ಈ ವಿಷಯದಲ್ಲಿ ಸಹಕರಿಸುವ ಬದಲು ಸಂಪುಟ ಕಾರ್ಯದರ್ಶಿ ಅವರಿಗೆ ದೂರು ನೀಡಿದ ವ್ಯಕ್ತಿಯ ಗುರುತಿಸಲು ಮಾಹಿತಿ ನೀಡುವಂತೆ ಕೋರಿದ್ದರು. ಅಲ್ಲದೆ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಅವರ ಮೇಲೆ ಆರೋಪ ಮಾಡಿದ್ದರು ಎಂದು ಕೇಂದ್ರ ವಿಚಕ್ಷಣಾ ಆಯೋಗದ ಹೇಳಿರುವುದಾಗಿ ನ್ಯಾಯ ಮೂರ್ತಿಗಳಾದ ಎಸ್.ಕೆ. ಕೌಲ್ ಹಾಗೂ ಕೆ.ಎಂ. ಜೋಸೆಫ್ ಅವರನ್ನು ಒಳಗೊಂಡ ಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News